ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಲ್ಪಸಂಖ್ಯಾತರ ಪ್ರದೇಶಗಳ ಸೌಕರ್ಯಕ್ಕೆ 10 ಕೋಟಿ'

By Srinath
|
Google Oneindia Kannada News

rs-10-cr-for-minority-habitats-development-rehman-khan
ಬೆಂಗಳೂರು, ನ. 19: ಹೆಚ್ಚಾಗಿ ಅಲ್ಪಸಂಖ್ಯಾತರೇ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 10 ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ. ಕೆ ರೆಹಮಾನ್ ಖಾನ್ ಹೇಳಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಎನ್‌ಎಂಡಿಎಫ್‌ಸಿ ಸಂಸ್ಥೆಗಳು ಮಾರುತಿ ಸುಜುಕಿ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ 'ಅಲ್ಪಸಂಖ್ಯಾತರಿಗೆ ಚಾಲನೆ ತರಬೇತಿ' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. (Karnataka Minorities Development Corporation Limited)

ದೇಶದಲ್ಲಿ ವೈದ್ಯರು, ಇಂಜಿನಿಯರುಗಳು ಹಾಗೂ ಉಪನ್ಯಾಸಕರು ಎಷ್ಟು ಮುಖ್ಯವೋ ಅದೇ ರೀತಿ ಚಾಲಕರೂ ಮುಖ್ಯ. ಆದ್ದರಿಂದ ಅವರಿಗೆ ಸಮಾಜದಲ್ಲಿ ಒಳ್ಳೆ ಸ್ಥಾನಮಾನ ನೀಡಬೇಕು. ಅಷ್ಟೇ ಅಲ್ಲ, ದೇಶದಲ್ಲಿ 3 ಕೋಟಿಗೂ ಹೆಚ್ಚಿನ ವಾಹನ ಚಾಲಕರ ಅಗತ್ಯವಿದ್ದು, ಇದನ್ನು ಮನಗಂಡ ಕೇಂದ್ರ ಸರ್ಕಾರ ಚಾಲನಾ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಿದೆ ಎಂದು ಹೇಳಿದರು.

ದೇಶದಲ್ಲಿ 600 ಕೋಟಿ ಯುವಕರಿದ್ದು, ಅದರಲ್ಲಿ ಶೇ. 2ರಷ್ಟು ಮಂದಿ ಮಾತ್ರ ಪದವೀಧರರು. ಅಲ್ಪಸಂಖ್ಯಾತರಿಗೆ ಸಾಚಾರ್ ವರದಿ ಶಿಫಾರಸಿನಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸಿ ಆ ಸಮುದಾಯವನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ರೆಹಮಾನ್ ಖಾನ್ ತಿಳಿಸಿದರು.

ಹಜ್ ಶಾಖೆಯನ್ನು ಅಸ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇನ್ನುಮುಂದೆ ಹಜ್ ಯಾತ್ರಿಕರ ಆಯ್ಕೆ ಮತ್ತು ಪ್ರವಾಸ ಕಾರ್ಯಕ್ರಮಗಳು ಇಲಾಖೆಯಿಂದಲೇ ನಡೆಯುವ ಸಾಧ್ಯತೆ ಇದೆ ಎಂದರು. ಸಚಿವ ಖಮರುಲ್ ಇಸ್ಲಾಂ, ಇಲಾಖೆ ಕಾರ್ಯದರ್ಶಿ ಲಲಿತ್ ಕೆ ಪನ್ವಾರ್, ಶಾಸಕ ಎನ್.ಎ. ಹ್ಯಾರೀಸ್, ಮಹಮ್ಮದ್ ಸಲೀಂ ಹಾಜರಿದ್ದರು.

English summary
Rs 10 crore will be utilised for minority habitats area development said Ministry of Minority Affairs Rehman Khan in Banglore on Nov 18. He was speaking at a function arranged for Driving training for minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X