ಬೆಂಗಳೂರು, ನವೆಂಬರ್ 10 : ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಿತು. ರಾಜ್ಯಾದ್ಯಂತ ಉಪ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಹುಟ್ಟು ಹಾಕಿತ್ತು. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಿದೆ.
ಮಂಗಳವಾರ ಬೆಂಗಳೂರು ಮತ್ತು ತುಮಕೂರಿನಲ್ಲಿ ಮತ ಎಣಿಕೆ ನಡೆಯಿತು. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮುನಿರತ್ನ ಭಾರಿ ಅಂತರದಲ್ಲಿ ಗೆಲುವು ಕಂಡರು. ಶಿರಾದಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಾಣ ಮಾಡಿದೆ.
ಶಿರಾ ಕ್ಷೇತ್ರದಲ್ಲಿ ಶೇ 84.54 ಮತ್ತು ಆರ್. ಆರ್. ನಗರದಲ್ಲಿ 45.24ರಷ್ಟು ಮತದಾನವಾಗಿತ್ತು. ಉಪ ಚುನಾವಣೆ ಫಲಿತಾಂಶದಿಂದಾಗಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಬಲ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ಆರಂಭವಾಗಲಿದೆ.
2018ರಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದರಿಂದ ಸರ್ಕಾರದ ಪರವಾದ ಫಲಿತಾಂಶ ಬಂದಿದೆ. ಎರಡೂ ಕ್ಷೇತ್ರದ ಫಲಿತಾಂಶ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 57,936 ಮತಗಳ ಅಂತದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
4:45 PM, 10 Nov
ಶಿರಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯ ಅಭ್ಯರ್ಥಿ ಡಾ. ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಟಿ. ಬಿ. ಜಯಚಂದ್ರ 61,573 ಮತ, ಜೆಡಿಎಸ್ನ ಅಮ್ಮಾಜಮ್ಮಗೆ 35,982 ಮತಗಳನ್ನು ಪಡೆದಿದ್ದಾರೆ.
4:38 PM, 10 Nov
ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎನ್ನುವುದು ವಿಷಾದದ ಸಂಗತಿ. 1/7#BypollResults
ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್
3:55 PM, 10 Nov
ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆ ನಡೆಸಿದರು.
3:39 PM, 10 Nov
ಆರ್. ಆರ್. ನಗರದಲ್ಲಿ 25ನೇ ಸುತ್ತು (ಕೊನೆ) ಸುತ್ತಿನ ಎಣಿಕೆ ಮುಕ್ತಾಯ. ಬಿಜೆಪಿಯ ಮುನಿರತ್ನ1,25,734 ಮತ. ಕಾಂಗ್ರೆಸ್ನ ಹೆಚ್. ಕುಸುಮಾ 67,798 ಮತ. ಜೆಡಿಎಸ್ನ ಕೃಷ್ಣಮೂರ್ತಿ10251 ಮತ. ನೋಟಾ 2,494 ಮತಗಳು ಮುನಿರತ್ನ ಗೆಲುವಿನ ಅಂತರ 57,936 ಮತಗಳು.
3:27 PM, 10 Nov
56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಇವತ್ತಿನಿಂದ ಕ್ಷೇತ್ರದ ಜನರಿಗಾಗಿ 20 ಗಂಟೆ ಕೆಲಸ ಮಾಡುತ್ತೇನೆ ಎಂದು ಆರ್. ಆರ್. ನಗರದಲ್ಲಿ ಗೆದ್ದ ಮುನಿರತ್ನ ಹೇಳಿದ್ದಾರೆ.
2:57 PM, 10 Nov
ಕೆಲವೇ ಕ್ಷಣದಲ್ಲಿ ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿರಾಗೆ ತಲುಪಲಿದ್ದಾರೆ.
2:40 PM, 10 Nov
ಆರ್. ಆರ್. ನಗರ 24ನೇ ಸುತ್ತಿನ ಎಣಿಕೆ. ಮುನಿರತ್ನ 1,24,446 ಮತ. ಕುಸುಮಾ 67,405 ಮತ. ಕೃಷ್ಣಮೂರ್ತಿ 10,187 ಮತಗಳು.
2:38 PM, 10 Nov
ಶಿರಾದಲ್ಲಿ ಡಾ. ರಾಜೇಶ್ ಗೌಡ 63,294 ಮತ. ಟಿ. ಬಿ. ಜಯಚಂದ್ರ 52,914 ಮತ. ಅಮ್ಮಾಜಮ್ಮ 29,166 ಮತಗಳನ್ನು ಪಡೆದಿದ್ದಾರೆ.
2:28 PM, 10 Nov
ಆರ್.ಆರ್. ನಗರ ಮತ್ತು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ.
2:21 PM, 10 Nov
ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದು, ಐತಿಹಾಸಿಕ ಸಾಧನೆ ಮಾಡಿದಂತಾಗಿದೆ.
2:19 PM, 10 Nov
ಶಿರಾದಲ್ಲಿ ಬಿಜೆಪಿಯ ರಾಜೇಶ್ ಗೌಡ 10 ಸಾವಿರಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ. ಇನ್ನು ಮೂರು ಸುತ್ತುಗಳ ಎಣಿಕೆ ಮಾತ್ರ ಬಾಕಿ ಇದೆ.
ಆರ್. ಆರ್. ನಗರದಲ್ಲಿ ಮುನಿರತ್ನ 1,07,822 ಮತ. ಕುಸುಮಾ 61,095 ಮತ ಮತ್ತು ಕೃಷ್ಣಮೂರ್ತಿ 9,502 ಮತಗಳನ್ನು ಪಡೆದಿದ್ದಾರೆ. ಮುನಿರತ್ನ ಗೆಲುವಿನ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.
2:07 PM, 10 Nov
ಶಿರಾದಲ್ಲಿ 18 ಸುತ್ತಿನ ಮತ ಎಣೆಕೆ ಮುಕ್ತಾಯವಾಗಿದೆ. ರಾಜೇಶ್ ಗೌಡ 54,630 ಮತ.
ಜಯಚಂದ್ರ 47,720 ಮತ. ಅಮ್ಮಾಜಮ್ಮ26,099 ಮತ ಪಡೆದಿದ್ದಾರೆ. ರಾಜೇಶ್ ಗೌಡ 6910 ಮತಗಳ ಮುನ್ನಡೆ ಪಡೆದಿದ್ದಾರೆ.
ಉಪ ಚುನಾವಣೆ ಫಲಿತಾಂಶದ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯೆ
1:07 PM, 10 Nov
ಶಿರಾದಲ್ಲಿ 13ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದೆ. ರಾಜೇಶ್ ಗೌಡ 41,847 ಮತ. ಜಯಚಂದ್ರ 38,705 ಮತ್ತು ಅಮ್ಮಾಜಮ್ಮ 21,907 ಮತಗಳನ್ನು ಪಡೆದಿದ್ದಾರೆ.
12:59 PM, 10 Nov
2018ರ ಚುನಾವಣೆಯಲ್ಲಿ ಆರ್. ಆರ್. ನಗರದಲ್ಲಿ ಜೆಡಿಎಸ್ 60 ಸಾವಿರಕ್ಕೂ ಅಧಿಕ ಮತಗಳಿಸಿತ್ತು. ಆದರೆ, ಉಪ ಚುನಾವಣೆಯಲ್ಲಿ ಇದುವರೆಗೂ 5,638 ಮತಗಳನ್ನು ಅಭ್ಯರ್ಥಿ ಪಡೆದಿದ್ದಾರೆ.
12:44 PM, 10 Nov
ಆರ್. ಆರ್. ನಗರದಲ್ಲಿ 14ನೇ ಸುತ್ತಿನ ಬಳಿಕ ಮುನಿರತ್ನ 73,932. ಕುಸಮಾ 39,415 ಮತಗಳನ್ನು ಪಡೆದಿದ್ದಾರೆ.
12:42 PM, 10 Nov
ಆರ್. ಆರ್. ನಗರದಲ್ಲಿ ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ. 14ನೇ ಸುತ್ತಿನ ಬಳಿಕ 33,185 ಮತಗಳ ಮುನ್ನಡೆ ಪಡೆದಿದ್ದಾರೆ.
12:41 PM, 10 Nov
ಶಿರಾದಲ್ಲಿ 12 ಸುತ್ತಿನ ಎಣೆಕೆ ಮುಕ್ತಾಯಗೊಂಡಿದೆ. ರಾಜೇಶ್ ಗೌಡ 37808, ಜಯಚಂದ್ರ 29938,
ಅಮ್ಮಾಜಮ್ಮ 19522 ಮತಗಳನ್ನು ಪಡೆದಿದ್ದಾರೆ. ರಾಜೇಶ್ ಗೌಡ 7870 ಮತಗಳ ಮುನ್ನಡೆ ಪಡೆದಿದ್ದಾರೆ.
12:35 PM, 10 Nov
ಉಪ ಚುನಾವಣೆ ಫಲಿತಾಂಶದ ಹಿನ್ನಲೆಯಲ್ಲಿ ಸಚಿವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಮತಎಣಿಕೆ ಚಾಲ್ತಿಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಲೀಡ್ ಅನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೊದಲ ಸುತ್ತಿನಿಂದಲೇ ಮುನಿರತ್ನ ಲೀಡ್ ಕಾಯ್ಡುಕೊಂಡಿದ್ದರು.
12:26 PM, 10 Nov
11ನೇ ಸುತ್ತಿನ ಎಣಿಕೆ ಬಳಿಕ ಶಿರಾದಲ್ಲಿ ರಾಜೇಶ್ ಗೌಡ 34,088 ಮತ, ಜಯಚಂದ್ರ 27,173 ಮತ,
ಅಮ್ಮಾಜಮ್ಮ 18,169 ಮತ. ಬಿಜೆಪಿ 6895 ಮತಗಳ ಮುನ್ನಡೆ
12:19 PM, 10 Nov
ಶಿರಾದಲ್ಲಿ ಬಿಜೆಪಿ 30,883, ಕಾಂಗ್ರೆಸ್ 24,908 ಮತ್ತು ಜೆಡಿಎಸ್ 16,911 ಮತಗಳನ್ನು ಪಡೆದಿವೆ.
READ MORE
12:30 AM, 10 Nov
ಆರ್. ಆರ್. ನಗರ ಕ್ಷೇತ್ರದ ಮತಯಂತ್ರಗಳನ್ನು ಹಲಗೆವಡೇರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಇಡಲಾಗಿದ್ದು, ಅಲ್ಲಿಯೇ ಮತ ಎಣಿಕೆ ನಡೆಯಲಿದೆ.
12:30 AM, 10 Nov
ಉಪ ಚುನಾವಣೆಯ ಮತ ಎಣಿಕೆಗೆ 4 ಕೊಠಡಿ 28 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ 3 ಸಹಾಯಕ ಚುನಾವಣಾಧಿಕಾರಿಗಳನ್ನು ಎಣಿಕೆ ಕಾರ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ.
ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ. ಬಿ. ಜಯಚಂದ್ರಗೆ ಕೋವಿಡ್ ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ
7:19 AM, 10 Nov
ಆರ್. ಆರ್. ನಗರ ಕ್ಷೇತ್ರದ ಮತ ಎಣಿಕೆ ಒಟ್ಟು 25 ಸುತ್ತುಗಳಲ್ಲಿ ನಡೆಯಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಇ.ವಿ.ಎಂ ಎಣಿಕೆ ಮುಗಿದ ನಂತರ 1 ಮತಗಟ್ಟೆಯ ವಿ.ವಿ.ಪ್ಯಾಟ್ ಅನ್ನು ಚುನಾವಣಾ ವೀಕ್ಷಕರು ಆರಿಸಲಿದ್ದು, 4 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳನ್ನು ಚುನಾವಣಾ ಅಭ್ಯರ್ಥಿಗಳು ಆರಿಸಲಿದ್ದಾರೆ. ಆ 5 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳಲ್ಲಿರುವ ಸ್ಲಿಪ್ ಎಣಿಕೆ ಕಾರ್ಯ ಮಾಡಲಾಗುತ್ತದೆ.
7:22 AM, 10 Nov
ಆರ್. ಆರ್. ನಗರ ಕ್ಷೇತ್ರದಲ್ಲಿ ಗೆಲ್ಲುವೆ ಎಂಬ ನಂಬಿಕೆ ಇದೆ. ಕ್ಷೇತ್ರದ ಮತದಾರರ ಮೇಲೆ ನನಗೆ ನಂಬಿಕೆ ಇದೆ ಎಂದು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಹೇಳಿದ್ದಾರೆ.
7:23 AM, 10 Nov
ಶಿರಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ತುಮಕೂರು ನಗರದ ಪಾಲಿಟೆಕ್ನಕ್ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಎರಡು ಕೊಠಡಿ, 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 24 ಸುತ್ತಿನಲ್ಲಿ ಎಣಿಕೆ ನಡೆಯಲಿದೆ.
7:26 AM, 10 Nov
ಆರ್. ಆರ್. ನಗರದಲ್ಲಿ ಮುನಿರತ್ನ(ಬಿಜೆಪಿ), ಹೆಚ್. ಕುಸುಮಾ (ಕಾಂಗ್ರೆಸ್), ಕೃಷ್ಣಮೂರ್ತಿ (ಜೆಡಿಎಸ್) ಸೇರಿದಂತೆ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 3ರಂದು ಕೇವಲ 45.24ರಷ್ಟು ಮತದಾನವಾಗಿತ್ತು.
7:28 AM, 10 Nov
ತುಮಕೂರು ಜಿಲ್ಲೆಯ ಶಿರಾದಲ್ಲಿ ಡಾ. ರಾಜೇಶ್ ಗೌಡ (ಬಿಜೆಪಿ), ಟಿ. ಬಿ. ಜಯಚಂದ್ರ (ಕಾಂಗ್ರೆಸ್), ಅಮ್ಮಾಜಮ್ಮ (ಜೆಡಿಎಸ್) ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
7:34 AM, 10 Nov
"ಶಿರಾ ಕ್ಷೇತ್ರದ ಜನರ ಮೇಲೆ ನನಗೆ ನಂಬಿಕೆ ಇದೆ. ಅವರು ನೀಡುವ ತೀರ್ಪಿಗೆ ನಾನು ತಲೆ ಬಾಗುವೆ" ಎಂದು ಶಿರಾ ಉಪಚುನಾವಣೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಹೇಳಿದ್ದಾರೆ.
7:36 AM, 10 Nov
ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆರ್. ಆರ್. ನಗರ ಕ್ಷೇತ್ರದಲ್ಲಿ ಹೆಚ್ಚು ಜನ, ಕಾರ್ಯಕ್ರಮ ನಡೆಯುವ ಹಾಗಿಲ್ಲ. ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ.
7:36 AM, 10 Nov
ಕೋವಿಡ್ ಕಾರಣದಿಂದಾಗಿ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನರು ಸೇರುವಂತಿಲ್ಲ. ಜೊತೆಗೆ ಯಾರೂ ಕೂಡ ಸಂಭ್ರಮಾಚರಣೆ, ಪಟಾಕಿ ಹಚ್ಚುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
7:39 AM, 10 Nov
ತುಮಕೂರು ಜಿಲ್ಲೆಯ ಶಿರಾದಲ್ಲಿ ಮತಯಂತ್ರ ಇರುವ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ.
7:51 AM, 10 Nov
ಆರ್. ಆರ್.ನಗರದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ.
7:57 AM, 10 Nov
ಶಿರಾ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ ಆರಂಭ
8:00 AM, 10 Nov
ಶಿರಾದಲ್ಲಿ 4821 ಅಂಚೆ ಮತಗಳು ಚಲಾವಣೆಯಾಗಿವೆ.
8:01 AM, 10 Nov
ಆರ್. ಆರ್.ನಗರದಲ್ಲಿಯೂ ಅಂಚೆ ಮತಗಳ ಎಣಿಕೆ ಆರಂಭ 412 ಮತಗಳು ಚಲಾವಣೆಯಾಗಿವೆ.
8:02 AM, 10 Nov
ಅಂಚೆಮತಗಳ ಎಣಿಕೆಯಲ್ಲಿ ಆರ್. ಆರ್.ನಗರದಲ್ಲಿ ಬಿಜೆಪಿಯ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ.
8:03 AM, 10 Nov
ಶಿರಾದಲ್ಲಿ ಬಿಜೆಪಿಗೆ 37 ಅಂಚೆ ಮತಗಳ ಮುನ್ನಡೆ ಸಿಕ್ಕಿದೆ. ಡಾ. ರಾಜೇಶ್ ಗೌಡ ಬಿಜೆಪಿ ಅಭ್ಯರ್ಥಿ
8:04 AM, 10 Nov
ಆರ್. ಆರ್. ನಗರ ಹೆಚ್. ಕುಸುಮಾ 112, ಮುನಿರತ್ನಗೆ 253 ಅಂಚೆ ಮತಗಳು
8:07 AM, 10 Nov
ಆರ್. ಅರ್. ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಗೆ 34 ಅಂಚೆ ಮತಗಳು ಬಂದಿವೆ
8:08 AM, 10 Nov
ಶಿರಾದಲ್ಲಿ ಬಿಜೆಪಿ 212, ಕಾಂಗ್ರೆಸ್ 135, ಜೆಡಿಎಸ್ 70 ಅಂಚೆ ಮತಗಳನ್ನು ಇದುವರೆಗೂ ಪಡೆದಿವೆ.
8:12 AM, 10 Nov
ಆರ್. ಆರ್. ನಗರದಲ್ಲಿ ಮುನಿರತ್ನ 253, ಹೆಚ್. ಕುಸುಮಾ 118, ಕೃಷ್ಣಮೂರ್ತಿ 34 ಅಂಚೆ ಮತಗಳನ್ನು ಇದುವರೆಗೂ ಪಡೆದಿದ್ದಾರೆ.
8:27 AM, 10 Nov
ಆರ್. ಆರ್.ನಗರದಲ್ಲಿ ಇಬಿಎಂ ಮತ ಎಣಿಕೆ ಆರಂಭವಾಗಿದೆ.
8:37 AM, 10 Nov
ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ 1202, ಕಾಂಗ್ರೆಸ್ 890, ಜೆಡಿಎಸ್ 221 ಮತಗಳನ್ನು ಪಡೆದಿದೆ.
8:40 AM, 10 Nov
Karnataka: The votes polled in the by-poll to Sira Assembly constituency being counted today; visuals from counting in centre Tumkuru pic.twitter.com/eliAD2Z0Uk
ಮತ ಎಣಿಕೆಗೆ ಹೋಗುತ್ತಿರುವ ಸಿಬ್ಬಂದಿಗೆ ಥರ್ಮಲ್ ಸ್ಟ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತಿದೆ.
8:42 AM, 10 Nov
ಆರ್. ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 3,130 ಮತಗಳ ಮುನ್ನಡೆಯನ್ನು ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ 9 ಸಾವಿರ ಮತಗಳ ಎಣಿಕೆ ನಡೆದಿದೆ.
8:44 AM, 10 Nov
ಶಿರಾ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.
8:50 AM, 10 Nov
ಆರ್. ಆರ್. ನಗರದಲ್ಲಿ 2ನೇ ಸುತ್ತಿನ ಎಣಿಕೆ ಆರಂಭ. ಮೊದಲ ಸುತ್ತಿನಲ್ಲಿ ಬಿಜೆಪಿಯ ಮುನಿರತ್ನ 5300,
ಕಾಂಗ್ರೆಸ್ನ ಹೆಚ್. ಕುಸುಮಾ 2082 ಮತ್ತು ಜೆಡಿಎಸ್ನ ಕೃಷ್ಣಮೂರ್ತಿ 1100 ಮತಗಳನ್ನು ಪಡೆದಿದ್ದಾರೆ.
8:54 AM, 10 Nov
ಆರ್. ಆರ್. ನಗರದಲ್ಲಿ ಬಿಜೆಪಿಯ ಮುನಿರತ್ನ ಅವರು 6,164 ಮತಗಳನ್ನು ಪಡೆದಿದ್ದಾರೆ. 2ನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ.