ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಲ್ಲಿ ಬರೋಬ್ಬರಿ 7 ಲಕ್ಷ ಪಾಸ್‌ಪೋರ್ಟ್ ವಿತರಣೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಪಾಸ್‌ಪೋರ್ಟ್ ಪಡೆಯುವವರ ಸಂಖ್ಯೆ ಶೇ.13.25ರಷ್ಟು ಏರಿಕೆಯಾಗಿದೆ. 2016-17ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 6,66,022 ಮತ್ತು ಪಾಸ್‌ಪೋರ್ಟ್ ಪಡದವರ ಸಂಖ್ಯೆ 6,37,277 ಇತ್ತು.

ಇದು ಕ್ರಮವಾಗಿ 2017-18ನೇ ಆರ್ಥಿಕ ವರ್ಷದ ಮುಕ್ತಾಯಕ್ಕೆ 7,22,861 ಮತ್ತು 7,21,675ಕ್ಕೆ ಏರಿಕೆಯಾಗಿದೆ ಎಂದು ಕೋರಮಂಗಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಭರತ್ ಕುಮಾರ್ ತಿಳಿಸಿದ್ದಾರೆ.

ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಿರಿ!ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಿರಿ!

ಪಾಸ್‌ಪೋರ್ಟ್ ವಿತರಣೆ ಪೊಲೀಸ್ ಪರಿಶೀಲನಾ ವರದಿ ಮೇಲೆ ಅವಲಂಬಿಸಿರುತ್ತದೆ. ಅವರು ಬೇಗ ಪರಿಶೀಲನೆ ಮಾಡಿ ಕಳುಹಿಸಿದರೆ ನಾವು ಕೂಡ ಶೀಘ್ರಗತಿಯಲ್ಲಿ ಪಾಸ್‌ಪೋರ್ಟ್ ನೀಡುತ್ತೇವೆ. ಬೆಂಗಳೂರಿನಲ್ಲಿ 11 ದಿನಕ್ಕೆ ಪೊಲೀಸರು ಪರಿಶೀಲನೆ ಪೂರ್ಣಗೊಳಿಸುತ್ತಾರೆ.

RPK issues 7.2 lakh new passports in state

ದರ ಹೊರತಾಗಿ ಬೆಳಗಾವಿ, ಬೆಂ.ಗ್ರಾಮಾಂತರ, ಕಲಬುರಗಿ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಕೋಲಾರ, ಯಾದಗಿರಿಯಲ್ಲಿ ಕನಿಷ್ಠ 21 ದಿನ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಪಾಸ್‌ಪೋರ್ಟ್ ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ರಾಜ್ಯದಲ್ಲಿ ಹೊಸದಾಗಿ 11 ಪೋಸ್ಟ್ ಆಪೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಇತ್ತೀಚೆಗೆ ತೆರೆಯಲಾಗಿದೆ. ರಾಜ್ಯದಲ್ಲಿ ಒಟ್ಟು 12 ಪಿಒಪಿಎಸ್ ಕೆ ಇದೆ. ಗ್ರಾಹಕರು ರಾಜ್ಯದಲ್ಲಿರುವ 5 ಪಾಸ್‌ಪೋರ್ಟ್ ಸೇವಾ ಕೇಂದ್ರ ಮತ್ತು 12 ಪಿಒಪಿಎಸ್ ಕೆಯಲ್ಲಿ ಎಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್ ಪಡೆಯಬಹುದಾಗಿದೆ ಎಂದರು.

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ? ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

ಪಾಸ್‌ಪೋರ್ಟ್ ಕಚೇರಿಯಲ್ಲಿರುವ ಸೌಲಭ್ಯ: 3ದಿನಗಳಲ್ಲಿ ತತ್ಕಾಲ್ ಪಾಸ್‌ಪೋರ್ಟ್ ನೀಡುವುದು, ಸೂಚಿತ 13 ದಾಖಲಾತಿಗಳ ಪೈಕಿ ಮೂರು ದಾಖಲೆಗಳಿದ್ದರೆ ಸಾಕು, ಏಕೈಕ ಪಾಲಕರೂ ತಮ್ಮ ಮಕ್ಕಳ ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು, ಅನಾಥ ಮಕ್ಕಳಿಗೆ ಜನ್ಮದಿನಾಂಕ ದೃಢೀಕರಣ ಪ್ರತಿ ಸಾಕು, ಆಧಾರ್ ಗುರುತಿನ ಸಂಖ್ಯೆ ನೀಡುವುದು ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.

English summary
Regional Passport Kendra of Bengaluru has issued more than 7.2 new passports in 2017-18 financial year and set a increase of 13 percent than last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X