ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನೇಶ್ ಗುಂಡೂರಾವ್ ವಿರುದ್ಧ ರೋಷನ್ ಬೇಗ್ ಪುತ್ರ ಗರಂ

|
Google Oneindia Kannada News

ಬೆಂಗಳೂರು, ಜುಲೈ 17 : ಮಾಜಿ ಸಚಿವ ರೋಷನ್ ಬೇಗ್ ಪುತ್ರ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಮ್ಮ ನಾಯಕತ್ವದ ಕಾರಣದಿಂದಾಗಿಯೇ ಶಾಸಕರು ಪಕ್ಷವನ್ನು ಬಿಡುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ರೋಷನ್ ಬೇಗ್ ಪುತ್ರ ಆರ್. ರುಮಾನ್ ಬೇಗ್ ಮತ್ತು ದಿನೇಶ್ ಗುಂಡೂರಾವ್ ನಡುವೆ ಟ್ವೀಟರ್‌ನಲ್ಲಿ ವಾರ್ ನಡೆಯುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ರೋಷನ್ ಬೇಗ್ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ರೋಷನ್ ಬೇಗ್ ಎಸ್‌ಐಟಿ ವಶಕ್ಕೆ ; ಸಿಎಂ ಟ್ವೀಟ್‌ಗೆ ಬಿಜೆಪಿ ಸ್ಪಷ್ಟನೆರೋಷನ್ ಬೇಗ್ ಎಸ್‌ಐಟಿ ವಶಕ್ಕೆ ; ಸಿಎಂ ಟ್ವೀಟ್‌ಗೆ ಬಿಜೆಪಿ ಸ್ಪಷ್ಟನೆ

ಸೋಮವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ರೋಷನ್ ಬೇಗ್ ವಶಕ್ಕೆ ಪಡೆದಿತ್ತು. 14 ತಾಸುಗಳ ವಿಚಾರಣೆ ಬಳಿಕ ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಲಾಗಿತ್ತು.

ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಬಂಧನ ಏಕಿಲ್ಲ: ಈಶ್ವರಪ್ಪ ಪ್ರಶ್ನೆಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಬಂಧನ ಏಕಿಲ್ಲ: ಈಶ್ವರಪ್ಪ ಪ್ರಶ್ನೆ

ಪ್ರತಿಪಕ್ಷ ಬಿಜೆಪಿ ರೋಷನ್ ಬೇಗ್ ಮುಂಬೈಗೆ ಪ್ರಯಾಣಿಸಲು ಸಹಾಯ ಮಾಡಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.ಕರ್ನಾಟಕ ಬಿಜೆಪಿ ಟ್ವಿಟ್ ಮೂಲಕವೇ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿತ್ತು....

ಎಸ್ಐಟಿ ವಿಚಾರಣೆ ಬಳಿಕ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದ್ದೇನು?ಎಸ್ಐಟಿ ವಿಚಾರಣೆ ಬಳಿಕ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದ್ದೇನು?

ದಿನೇಶ್ ಗುಂಡೂರಾವ್ ಟ್ವೀಟ್

ದಿನೇಶ್ ಗುಂಡೂರಾವ್ ಟ್ವೀಟ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್‌ನಲ್ಲಿ, "ಬಿಜೆಪಿ ಈಗ ರೋಷನ್ ಬೇಗ್ ಅವರನ್ನು ಎಸ್ಕಾರ್ಟ್ ಮಾಡುತ್ತಿದೆ. ಐಎಂಎ ಹಗರಣದಲ್ಲಿ ಕೆಲವು ವಾರದ ಹಿಂದೆ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿತ್ತು. ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಿದೆ" ಎಂದು ಆರೋಪ ಮಾಡಿದ್ದರು.

ರುಮಾನ್ ಬೇಗ್ ತಿರುಗೇಟು

ರುಮಾನ್ ಬೇಗ್ ತಿರುಗೇಟು

ರೋಷನ್ ಬೇಗ್ ಪುತ್ರ ಆರ್. ರುಮಾನ್ ಬೇಗ್ ಟ್ವೀಟ್‌ ಮೂಲಕ ದಿನೇಶ್ ಗುಂಡೂರಾವ್‌ಗೆ ತಿರುಗೇಟು ನೀಡಿದ್ದರು. "ನೀವು ಪಕ್ಷವನ್ನು ಮುನ್ನಡೆಸುತ್ತಿರುವ ಕಾರಣ ರಾಜೀನಾಮೆ ನೀಡುತ್ತಿದ್ದಾರೆ ಬಿಜೆಪಿಯಿಂದಾಗಿ ಅಲ್ಲ ಎಂಬುದು ನಿಮಗೆ ಅರ್ಥವಾಗಿಲ್ಲವೇ?. ನಿಮ್ಮ ನಾಯಕತ್ವದಿಂದಾಗಿಯೇ ಚುನಾವಣೆಯಲ್ಲಿ ಕೇವಲ ಒಂದು ಸೀಟು ಬಂದಿತು" ಎಂದು ಟೀಕಿಸಿದ್ದರು.

ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು

ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ, "ಕರ್ನಾಟಕ ಬಿಜೆಪಿ ಐಎಂಎ ಹಗರಣದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವರು ಪರಾರಿಯಾಗಲು ಸಹಾಯ ಮಾಡುತ್ತಿದೆ. ಬಿಜೆಪಿಯ ಯೋಗೇಶ್ವರ ಅವರು ಸಹ ಅಲ್ಲಿದ್ದರು. ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದೆ ಎಂಬುದು ಸ್ಪಷ್ಟವಾಗಿದೆ," ಎಂದು ಆರೋಪಿಸಿದ್ದರು.

ತಿರುಗೇಟು ನೀಡಿದ್ದ ಬಿಜೆಪಿ

ತಿರುಗೇಟು ನೀಡಿದ್ದ ಬಿಜೆಪಿ

ಕರ್ನಾಟಕ ಬಿಜೆಪಿ ಮುಖ್ಯಮಂತ್ರಿಗಳ ಟ್ವೀಟ್‌ಗೆ ತಿರುಗೇಟು ನೀಡಿತ್ತು. "ಎಚ್. ಡಿ. ಕುಮಾರಸ್ವಾಮಿ ಕಣ್ಗಾವಲು ಇರುವಾಗ ಐಎಂಎ ಹಗರಣದ ಆರೋಪಿ ಪರಾರಿಯಾದ ಎಂಬುದನ್ನು ಮೊದಲು ತಿಳಿಸಲಿ. ಐಎಂಎ ಹಗರಣದ ಮಾಸ್ಟರ್ ಮೈಂಡ್ ಜೊತೆ ಬಿರಿಯಾನಿ ತಿನ್ನುತ್ತಾ ಕುಮಾರಸ್ವಾಮಿ ಪರಾರಿಯಾಗುವುದು ಹೇಗೆ? ಎಂದು ವಿವರಿಸಿದರೆ?" ಎಂದು ಪ್ರಶ್ನೆ ಮಾಡಿತ್ತು.

English summary
Former minister Roshan Baig son R.Ruman Baig upset with KPCC president Dinesh Gundu Rao. Shivaji Nagar Congress MLA submitted resignation and He also suspended from party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X