ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿಣಿ ಸಿಂಧೂರಿ ವರ್ಗಾವಣೆ, ಸರ್ಕಾರಕ್ಕೆ ದೇವೇಗೌಡರ ಪ್ರಶ್ನೆ

|
Google Oneindia Kannada News

Recommended Video

ಸಿದ್ದರಾಮಯ್ಯ ಅತೀ ಕೆಟ್ಟ ಮುಖ್ಯಮಂತ್ರಿ ಎಂದು ಕಿಡಿಕಾರಿದ ಎಚ್ ಡಿ ದೇವೇಗೌಡ | Oneindia Kannada

ಬೆಂಗಳೂರು, ಜನವರಿ 23 : 'ಮಹಾಮಸ್ತಕಾಭಿಷೇಕದ ಸಿದ್ಧತೆ ನಡೆಯುತ್ತಿದೆ. ಇದರಲ್ಲಿ ಹಣ ಹೊಡೆಯಲು ಆ ಹೆಣ್ಣು ಮಗಳು ಬಿಡಲಿಲ್ಲ. ಇಂಥ ಪವಿತ್ರ ಕಾರ್ಯದಲ್ಲಿಯೂ ಪರ್ಸೆಂಟೇಜ್ ಬೇಕೆ?' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಿದರು.

ರೋಹಿಣಿ ಸೇರಿ 6 ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ ರೋಹಿಣಿ ಸೇರಿ 6 ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿದ ಚುನಾವಣಾ ಆಯೋಗ

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ವರ್ಗ ಮಾಡಿದೆ. ಅವರು ಬಂದು ಆರು ತಿಂಗಳು ಕೂಡಾ ಆಗಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳಿಗೂ ಸರ್ಕಾರ ಹೀಗೆ ಮಾಡಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೋಹಿಣಿ ಸಿಂಧೂರಿ ಒಬ್ಬರೇ ಪ್ರಾಮಾಣಿಕರಾ? ಗೌಡರಿಗೆ ಸಿದ್ದು ತಿರುಗೇಟು ರೋಹಿಣಿ ಸಿಂಧೂರಿ ಒಬ್ಬರೇ ಪ್ರಾಮಾಣಿಕರಾ? ಗೌಡರಿಗೆ ಸಿದ್ದು ತಿರುಗೇಟು

'ಭ್ರಷ್ಟಾಚಾರದ ವಿಚಾರದಲ್ಲಿ ಬಹಳ ಕಠಿಣವಾಗಿದ್ದ ರೋಹಿಣಿ ಅವರ ವರ್ಗಾವಣೆ ಒಬ್ಬ ಮಂತ್ರಿಯ ಒತ್ತಡದಿಂದ ನಡೆದಿದೆ. ಮಸ್ತಕಾಭಿಷೇಕದ ಕಾರ್ಯ ಆಗಬೇಕು. ಈಗ ಅವರನ್ನು ವರ್ಗಾವಣೆ ಮಾಡಬೇಡಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ' ಎಂದು ದೇವೇಗೌಡರು ಹೇಳಿದರು.

Rohini Sindhuri transfer, Deve Gowda questions to Karnataka Govt

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, 'ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿಚಾರದಲ್ಲಿ ರಾಷ್ಟ್ರಪತಿಗಳಿಗೂ ಪತ್ರ ಬರೆಯುತ್ತೇನೆ. ಫೆ.7ರಂದು ಹಾಸನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ' ಎಂದರು.

ಸೋಮವಾರ ಕರ್ನಾಟಕ ಸರ್ಕಾರ ರೋಹಿಣಿ ಸಿಂಧೂರಿ ಸೇರಿದಂತೆ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಆದರೆ, ಚುನಾವಣಾ ಆಯೋಗ ವರ್ಗಾವಣೆಯನ್ನು ತಡೆ ಹಿಡಿದಿದೆ.

English summary
Karnataka government on January 22, 2018 transferred Hassan Deputy Commissioner Rohini Sindhuri. JDS supremo H.D.Deve Gowda expressed unhappiness for govt move and asked several questions to Chief Minister Siddaramaiah lead Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X