ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ ಮಾನವೀಯತೆ ಮರೆತ ಜನ, ವ್ಯಕ್ತಿ ಸಾವು

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಜುಲೈ 10 : ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ. ಸಾವು ಬದುಕಿನ ನಡುವೆ ಗಂಡ ಹೋರಾಡುತ್ತಿದ್ದರೆ ಆತನ ಪತ್ನಿ ಗಂಡನ ಪ್ರಾಣ ಉಳಿಸುವಂತೆ ಕಂಡ ಕಂಡವರನ್ನು ಅಂಗಲಾಚುತ್ತಿದ್ದಳು. ಆದರೆ, ಅಲ್ಲಿದ್ದ ಜನರು ಮಾತ್ರ ಮೊಬೈಲ್‌ನಲ್ಲಿ ವಿಡಿಯೋ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದರು.

ಮಾನವೀಯತೆ ಮಾಯವಾದ ಹಿನ್ನಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಅಂದಹಾಗೇ ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ.

ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ

ಗ್ರಾಮದ 51 ವರ್ಷದ ಮಹ್ಮಮದ್ ಖಾನ್ ಆಟೋದಲ್ಲಿ ಹೆಂಡತಿಯ ಜೊತೆ ಸಂತೇ ಬಿದನೂರಿಗೆ ಹೋಗಿದ್ದರು. ಸ್ವಂತ ಆಟೋದಲ್ಲಿ ವಾಪಸ್ ಬರುವಾಗ ಹದಗೆಟ್ಟ ರಸ್ತೆಯಿಂದಾಗಿ ಆಟೋ ಪಲ್ಟಿ ಹೊಡೆದಿದೆ. ಆಟೋ ಕೆಳಗೆ ಸಿಕ್ಕಿಕೊಂಡ ಮಹ್ಮಮದ್ ಖಾನ್ ತಲೆಗೆ ಗಂಭೀರವಾಗಿ ಗಾಯವಾಗಿತ್ತು.

Road accident victim dies in front of people who were recording on phone

ಆದರೆ, ಆತನ ಪತ್ನಿ ಸಣ್ಣ ಪುಟ್ಟ ಗಾಯಾಗಳೊಂದಿಗೆ ಪ್ರಾಣಪಾಯದಿಂದ ಪಾರಾದರು. ಕಣ್ಣೇದುರೇ ಪತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರು ಪ್ರಜ್ಞೆ ಕಳೆದುಕೊಂಡರು.

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ

ಗಂಡನ ಪ್ರಾಣವನ್ನು ಉಳಿಸುವಂತೆ ಅಲ್ಲಿದ್ದವರನ್ನ ಆಕೆ ಬೇಡಿಕೊಳ್ಳಲು ಆರಂಭಿಸಿದಳು. ಆದರೆ ಜನರು ಆಕೆಯ ನೋವಿಗೆ ಸ್ಪಂದಿಸಲಿಲ್ಲ. ಮಹ್ಮಮದ್ ಸಾಉ ಬದುಕಿನ ನಡುವೆ ಹೋರಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವುದರಲ್ಲಿ ಜನರು ಬ್ಯುಸಿಯಾಗಿದ್ದರು.

ಸುಮಾರು ಒಂದೂವರೆ ಗಂಟೆಯ ವರೆಗೂ ಸ್ಥಳದಲ್ಲಿ ಬಿದ್ದಿದ್ದ ಮಹ್ಮಮದ್ ಖಾನ್ ಅವರನ್ನು ಬಳಿಕ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

English summary
51 year old auto driver died in road accident at Chikkaballapur on July 10, 2018. People lost humanity and not helped accident viticm on time. People busy in recording the accident viticm videos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X