ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕಣ್ಣಿನ ಕ್ಯಾನ್ಸರ್‌: ಆತಂಕ

By Nayana
|
Google Oneindia Kannada News

ಬೆಂಗಳೂರು, ಮೇ 18: ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ಇತ್ತೀಚೆಗೆ ರೆಟಿನೋಬ್ಲಾಸ್ಟೋಮಾ(ಕಣ್ಣಿನ ಕ್ಯಾನ್ಸರ್ ) ಪ್ರಕರಣ ಹೆಚ್ಚಾಗುತ್ತಿದೆ ಎಂದು ನೇತ್ರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇಕ್ಷಾ ಪ್ರತಿಷ್ಠಾನ ವಿಶ್ವ ರೆಟಿನೋಬ್ಲಾಸ್ಟೋಮಾ ಸಪ್ತಾಹದಲ್ಲಿ ನೇತ್ರ ತಜ್ಞರಾದ ನಾರಾಯಣ ನೇತ್ರಾಲಯದ ಡಾ. ಗಗನ್ ದುಡೇಜಾ ಹಾಗೂ ಹೊರುಸ್ ಸ್ಪೆಷಾಲಿಟಿ ಐಕೇರ್ ನಿರ್ದೇಶಕರಾದ ಡಾ. ಫೈರೋಜ್ ಪಾಲ್ಗೊಂಡಿದ್ದರು.

ಆರೋಗ್ಯ ಇಲಾಖೆಯ ನೌಕರರಲ್ಲೇ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ!ಆರೋಗ್ಯ ಇಲಾಖೆಯ ನೌಕರರಲ್ಲೇ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ!

ರೆಟಿನೋಬ್ಲಾಸ್ಟೋಮಾ ಜೀವಕ್ಕೆ ಬೆದರಿಕೆ ಒಡ್ಡುವ ಕಣ್ಣಿನ ಕ್ಯಾನ್ಸರ್. ನವಜಾತ ಶಿಶು ಹಾಗೂ ಸಣ್ಣ ಮಕ್ಕಳ ಕಣ್ಣಿನಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣ ಕುರಿತಂತೆ ಬೇಗ ತಪಾಸಣೆ ಮಾಡಿಸಬೇಕಾದ ಅಗತ್ಯವಿದೆ, ನಿರಂತರವಾಗಿ ಹಸುಳೆ, ಮಕ್ಕಳ ನೇತ್ರ ತಪಾಸಣೆ ಮಾಡಿಸುವುದರಿಂದ ಅಪಾಯಕಾರಿ ಕಣ್ಣಿನ ಕ್ಯಾನ್ಸರ್ ಪತ್ತೆ ಮಾಡಬಹುದು. ಚಿಕ್ಕವರಿದ್ದಾಗಲೇ ಬರುವ ಅಂಧತ್ವವನ್ನು ತಡೆಯಬಹುದಾಗಿದೆ.

Rise in cases of Retinoblastoma below 5 year children

ರೆಟಿನೋಬ್ಲಾಸ್ಟೋಮಾ (ಆರ್ ಬಿ ) ನವಜಾತ ಶಿಶು ಹಾಗೂ ಸಣ್ಣ ಮಕ್ಕಳು-5 ವರ್ಷದತನಕ- ಕಾಡುವ, ಜೀವ ಬೆದರಿಕೆ ಒಡ್ಡುವ ಅಪಾಯಕಾರಿ ಕಣ್ಣಿನ ಕ್ಯಾನ್ಸರ್. ಇದು ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಕಾಣಿಸಿಕೊಳ್ಳಬಹುದು. ಜೀವಕ್ಕೆ ಅಪಾಯಕಾರಿ ಆದರೂ ಬೇಗನೆ ಪತ್ತೆ ಮಾಡಿದರೆ ಹೆಚ್ಚಿನ ಮಕ್ಕಳು ಬದುಕುಳಿಯುತ್ತಾರೆ ಹಾಗೂ ದೃಷ್ಟಿ ಪಡೆಯುತ್ತಾರೆ.

ರೆಟಿನೋಬ್ಲಾಸ್ಟೋಮ ಕುರಿತ ಹೆಚ್ಚಿನ ಅರಿವಿಲ್ಲ. ಮಗುವಿನ ದೃಷ್ಟಿ ಕಾಪಾಡಲು ಕಾಯಿಲೆಯನ್ನು ಬೇಗ ಪತ್ತೆ ಮಾಡಬೇಕಾದದ್ದು ಅತ್ಯಂತ ಮುಖ್ಯ. ಬೇಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಶೇ.95 ಮಕ್ಕಳನ್ನು ಸಾವಿನಿಂದ ರಕ್ಷಿಸಬಹುದು. ಶೇ.90 ಮಕ್ಕಳು ದೃಷ್ಟಿ ಪಡೆಯುತ್ತಾರೆ ಹಾಗೂ ಶೇ.85 ಮಕ್ಕಳ ದೃಷ್ಟಿ ರಕ್ಷಿಸಬಹುದಾಗಿದೆ.

ಜಾಗತಿಕವಾಗಿ ಪ್ರತಿವರ್ಷ 8,000 (ಎಂಟು ಸಾವಿರ) ಹೊಸ ಪ್ರಕರಣ ವರದಿಯಾಗುತ್ತಿವೆ. ಅವುಗಳ ಪೈಕಿ ಭಾರತದಲ್ಲಿ 1,500 ಪ್ರಕರಣ ಆದರೆ ಸತ್ಯಾಂಶ ಎಂದರೆ ಹೆಚ್ಚಿನ ಪ್ರಕರಣ ದಾಖಲಾಗುವುದಿಲ್ಲ ಅಥವಾ ಪತ್ತೆಯಾಗುವುದಿಲ್ಲ. ಅರಿವು ಮೂಡಿಸುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಭಾರತದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದು ಅತ್ಯಂತ ಕಡಿಮೆ.

English summary
There has been an increase in the cases of retinoblastoma, a rare type of eye cancer, among children in India.Retinoblastoma that affects mostly children below five years of age is a cancer that develops from the immature cells of a retina, the light-detecting tissue of the eye.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X