ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ಗಮನಕ್ಕೆ: ಹಲವಾರು ರೈಲು ರದ್ದು, ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 19: ಹಲವಾರು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಹಾಗೂ ಸಮಯ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮುಖ್ಯವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಟ್ರೈನ್ ಸಂಖ್ಯೆ 56909, ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ 8 ಗಂಟೆ ಬದಲಾಗಿದೆ 20:15ಕ್ಕೆ ಹೊರಡಲಿದೆ, ಹೊಸಪೇಟೆಯನ್ನು 8:45ಕ್ಕೆ ತಲುಪಲಿದೆ, ನವೆಂಬರ್ 18ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬಂದಿದೆ.

ರೈಲ್ವೆ ಸಿಬ್ಬಂದಿಗೆ ಭರ್ಜರಿಯಾಗಿ ಬಡ್ತಿ, ಇಂಗ್ರೀಮೆಂಟ್ ಘೋಷಣೆರೈಲ್ವೆ ಸಿಬ್ಬಂದಿಗೆ ಭರ್ಜರಿಯಾಗಿ ಬಡ್ತಿ, ಇಂಗ್ರೀಮೆಂಟ್ ಘೋಷಣೆ

"ನವೆಂಬರ್ 23 ರಿಂದ 26ರ ತನಕ ವಿಜಯಪುರ-ಯಶವಂತಪುರ ನಡುವೆ ಸಂಚರಿಸುವ 06541/06542 ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ" ಎಂದು ಕೊಟ್ಟೂರು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

ಹರಿಹರ- ದಾವಣಗೆರೆ ನಡುವೆ ಹಳಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ, ಕಾಮಗಾರಿಗೆ ಅಡ್ಡಿಯಾಗಬಾರದು ಎಂದು 4 ದಿನಗಳ ಕಾಲ ರೈಲು ಸಂಚಾರ ನಡೆಸುವುದಿಲ್ಲ. ನವೆಂಬರ್ 27ರಿಂದ ನಿಗದಿತ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಸಲಿದೆ ಎಂದು ಇಲಾಖೆ ಹೇಳಿದೆ.

ವಿಜಯಪುರ-ಯಶವಂತಪುರ ಎಕ್ಸ್ ಪ್ರೆಸ್

ವಿಜಯಪುರ-ಯಶವಂತಪುರ ಎಕ್ಸ್ ಪ್ರೆಸ್

ಎಕ್ಸ್ ಪ್ರೆಸ್ ಗೆ 4 ಸಾಮಾನ್ಯ ಸೆಕೆಂಡ್ ಕ್ಲಾಸ್ ಕೋಚ್ ಗಳನ್ನು ಯಶವಂತಪುರ ಹಾಗೂ ವಿಜಯಪುರದಿಂದ ಸೇರಿಸಲಾಗುತ್ತಿದ್ದು, 2 ಕೋಚ್ ಬದಲು 6 ಸೆಕೆಂಡ್ ಕ್ಲಾಸ್ ಕೋಚ್ ಗಳನ್ನು ಹೊಂದಲಿದೆ. ಒಟ್ಟಾರೆ, ಒಂದು ಎಸಿ 2 ಟಯರ್ ಕೋಚ್, ಒಂದು ಎಸಿ 3 ಟಯರ್ ಕೋಚ್, 8 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, 6 ಸಾಮಾನ ಸೆಕೆಂಡ್ ಕ್ಲಾಸ್ ಕೋಚ್ ಹಾಗೂ 2 ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಮ್ ಬ್ರೇಕ್ ವಾನ್ ಹೊಂದಲಿದೆ.

ರದ್ದಾಗಿರುವ ರೈಲುಗಳು

ರದ್ದಾಗಿರುವ ರೈಲುಗಳು

ಚಿಕ್ಕಜಾಜೂರು - ಹುಬ್ಬಳ್ಳಿ (56915) ನ.26ರಿಂದ 29ರವರೆಗೆ.
ಹುಬ್ಬಳ್ಳಿ - ಚಿಕ್ಕಜಾಜೂರು (56916) ನ.25ರಿಂದ 28ರವರೆಗೆ.
ಅರಸೀಕೆರೆ - ಹುಬ್ಬಳ್ಳಿ (56273) ನ.23ರಿಂದ 28ರವರೆಗೆ.
ಹುಬ್ಬಳ್ಳಿ - ಅರಸೀಕೆರೆ (56274) ನ.23ರಿಂದ 28ರವರೆಗೆ.
ಬೆಂಗಳೂರು - ಹುಬ್ಬಳ್ಳಿ (56913) ನ. 18ರಿಂದ 29ರವರೆಗೆ.
ಹುಬ್ಬಳ್ಳಿ - ಬೆಂಗಳೂರು (56914) ನ.18ರಿಂದ 29ರವರೆಗೆ.
ಬೆಂಗಳೂರು - ಹುಬ್ಬಳ್ಳಿ (56515) ನ.25ರಿಂದ 29ರವರೆಗೆ
ಹುಬ್ಬಳ್ಳಿ - ಬೆಂಗಳೂರು (56516) ನ. 25ರಿಂದ 29ವರೆಗೆ
ಬೆಂಗಳೂರು - ಹುಬ್ಬಳ್ಳಿ (56911) ನ. 24ರಿಂದ 28ರವರೆಗೆ
ಹುಬ್ಬಳ್ಳಿ - ಬೆಂಗಳೂರು (56912) ನ. 24ರಿಂದ 28ರವರೆಗೆ.

ವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳುವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳು

ಭಾಗಶಃ ರದ್ದಾಗಿರುವ ರೈಲುಗಳು

ಭಾಗಶಃ ರದ್ದಾಗಿರುವ ರೈಲುಗಳು

ಇಂಟರ್ಸಿಟಿ ಎಕ್ಸ್ಪ್ರೆಸ್ (12725) ನ.26ರಂದು ಚಿಕ್ಕಜಾಜೂರು - ಧಾರವಾಡ ನಡುವೆ ಹಾಗೂ ಇಂಟರ್ಸಿಟಿ ಎಕ್ಸ್ಪ್ರೆಸ್ 12726,
ನ.27ರಂದು ಧಾರವಾಡ - ಚಿಕ್ಕಜಾಜೂರು ನಡುವೆ.
ನ.23 ಹಾಗೂ 29ರಂದು 12080 ಜನಶತಾಬ್ದಿ ಎಕ್ಸ್ಪ್ರೆಸ್ 60 ನಿಮಿಷ ವಿಳಂಬವಾಗಲಿದೆ.

ರೈಲು ಮಾರ್ಗ ಬದಲಾವಣೆ

ರೈಲು ಮಾರ್ಗ ಬದಲಾವಣೆ

* ವಾಸ್ಕೋ ಡಗಾಮಾದಿಂದ ವೇಲಂಕರ್ಗೆ ತೆರಳುವ 17315 ರೈಲು ನ.25ರಂದು ಬಳ್ಳಾರಿ - ರಾಯದುರ್ಗ - ಚಿಕ್ಕಜಾಜೂರು
ಮಾರ್ಗವಾಗಿ ತೆರಳಲಿದೆ.
* ನಂ. 14805 ಯಶವಂತಪುರ ಬರ್ಮಾರ್ ಎಕ್ಸ್ಪ್ರೆಸ್ ನ.25ರಂದು ಚಿಕ್ಕಜಾಜೂರು - ರಾಯದುರ್ಗ - ಬಳ್ಳಾರಿ ಮೂಲಕ ತೆರಳಲಿದೆ.
* ನಂ. 16588 ಬಿಕನೇರ್ - ಯಶವಂತಪುರ ಎಕ್ಸ್ಪ್ರೆಸ್ ನ.28ರಂದು ಚಿಕ್ಕಜಾಜೂರು - ರಾಯದುರ್ಗ - ಬಳ್ಳಾರಿ ಮೂಲಕ ಚಲಿಸಲಿದೆ.

ಮತ್ತೆ ಚಾಲನೆ ಪಡೆದ ರೈಲುಗಳು

ಮತ್ತೆ ಚಾಲನೆ ಪಡೆದ ರೈಲುಗಳು

ನವೆಂಬರ್ 27ರ ತನಕ ರದ್ದಾಗಿದ್ದ ಟ್ರೈನ್ ಸಂಖ್ಯೆ 57134 ರಾಯಚೂರು- ವಿಜಯಪುರ ಪ್ಯಾಸೇಂಜರ್ ಮತ್ತೆ ಹಳಿಗಿಳಿಯಲಿದೆ. ರಾಯಚೂರು-ಸೋಲಾಪುರ ನಡುವೆ ನ.16ರಿಂದ ನ.27 ರ ತನಕ ರದ್ದಾಗಿತ್ತು. ಇದೇ ರೀತಿ ಟ್ರೈನ್ ಸಂಖ್ಯೆ 57133 ಕೂಡಾ ಹಳಿಗಿಳಿಯಲು ಸಜ್ಜಾಗಿದೆ. ಈ ರೈಲು ಕೂಡಾ ರಾಯಚೂರು-ಸೋಲಾಪುರ ನಡುವೆ ನ.16ರಿಂದ ನ.27 ರ ತನಕ ರದ್ದಾಗಿತ್ತು.

English summary
The timings of Train No. 56909 KSR Bengaluru – Hosapete Passenger will be revised to improve the punctuality with effect from 18.11.2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X