ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ನಿಗಮದ ನೌಕರರಿಗೆ ಅಕ್ಟೋಬರ್ ನಿಂದ ಪರಿಷ್ಕೃತ ವೇತನ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಅಕ್ಟೋಬರ್ ತಿಂಗಳಿನಿಂದ ಸಾರಿಗೆ ನಿಗಮಗಳ ನೌಕರರು ಪರಿಷ್ಕೃತ ವೇತನ ಪಡೆಯಲಿದ್ದಾರೆ. ಬೇಸಿಕ್ ನಲ್ಲಿ (ಮೂಲವೇತನ) ಶೇ 12.5 ರಷ್ಟು ಹೆಚ್ಚಳವಾಗಲಿದೆ. ಈ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, 2016ರ ಜನವರಿಯಿಂದ ಪೂರ್ವಾನ್ವಯ ಆಗಲಿದೆ.

ಆದರೆ, ಬಾಟಾ (ಹೆಚ್ಚುವರಿ ಭತ್ಯೆ) ದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ವೇತನ ಪರಿಷ್ಕರಣೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ನೌಕರರಿಗೆ ಅನ್ವಯವಾಗುತ್ತದೆ.[ಕಾವೇರಿ ವಿವಾದ: ಬಂದ್, ಪ್ರತಿಭಟನೆಗೆ ಕೆಎಸ್ ಆರ್ ಟಿಸಿಗೆ 12 ಕೋಟಿ ನಷ್ಟ]

KSRTC

ಈ ವೇತನ ಹೆಚ್ಚಳದಿಂದಾಗಿ ಸರಕಾರಕ್ಕೆ ಒಟ್ಟು 1750 ಕೋಟಿಗೂ ಹೆಚ್ಚು ಹೊರೆಯಾಗುತ್ತದೆ ಎಂದು ಸಾರಿಗೆ ನಿಗಮ ಅಂದಾಜಿಸಿದೆ. ಈ ಪರಿಷ್ಕೃತ ವೇತನ ನಾಲ್ಕು ವರ್ಷದ ಅವಧಿಗೆ ಜಾರಿಗೊಳಿಸಲಾಗಿದೆ. ಇನ್ನು ಪರಿಷ್ಕೃತ ವೇತನದ ಬಾಕಿ ಪಾವತಿಯ ಬಗ್ಗೆ ಪ್ರತ್ಯೇಕವಾಗಿ ಸೂಚನೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.[ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ತಟ್ಟಿದ ಕಾವೇರಿ ಹೋರಾಟದ ಬಿಸಿ]

ಮೊದಲಿಗೆ ಶೇ 8ರಷ್ಟು ವೇತನ ಹೆಚ್ಚಳಕ್ಕಾಗಿ ಸಚಿವ ಸಂಪುಟವು ಒಪ್ಪಿಗೆ ನೀಡಿತ್ತು. ಇದಕ್ಕೆ ಒಪ್ಪದ ನೌಕರರ ಸಂಘಗಳು ಶೇ 35ರಷ್ಟು ಹೆಚ್ಚಳಕ್ಕೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿದ್ದವು. ಆ ನಂತರ ಸರಕಾರ ಶೇ 10ರಷ್ಟು ಹೆಚ್ಚಳಕ್ಕೆ ಮುಂದಾಯಿತು. ಆ ನಂತರ ಮಾತುಕತೆ ನಡೆದು ಶೇ 12.5ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಲಾಯಿತು.

English summary
KSRTC employees will get 12.5% hike in October salary, ordered by Karnataka government. Order effects from January 2016. Separate order will be passed about arrears payment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X