ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300 ಯೂನಿಟ್ ವಿದ್ಯುತ್: ಇಂದಿನಿಂದ ಪಂಜಾಬ್‌ನಲ್ಲಿ ಫ್ರೀ, ಕರ್ನಾಟಕದಲ್ಲಿ ಸುಮಾರು 1,500

|
Google Oneindia Kannada News

ಬೆಂಗಳೂರು, ಜು. 01: ಪಂಚಾಬ್ ನಲ್ಲಿ ಮಾನ್ ಸಿಂಗ್ ಸರ್ಕಾರ 300 ಯೂನಿಟ್ ಮನೆ ಬಳಕೆ ವಿದ್ಯುತ್ ನ್ನು ಉಚಿತವಾಗಿ ಪೂರೈಸಲಿದ್ದು, ಇಂದಿನಿಂದ ಜಾರಿಗೆ ಬರಲಿದೆ. ಇದೇ ವೇಳೆ ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಸಿ ಆದೇಶ ಹೊರಡಿಸಿದೆ.

ಪಂಜಾಬ್ ನಲ್ಲಿ ಆಪ್ ಸರ್ಕಾರ ಜಾರಿಗೆ ಬಂದರೆ ಮನೆಗಳಿಗೆ 300 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಭಗವಂತ್ ಮಾನಸಿಂಗ್ ಸರ್ಕಾರ ಬಂದ ಕೂಡಲೇ ಬಜೆಟ್ ನಲ್ಲಿ ಸಹ ಉಚಿತ ವಿದ್ಯುತ್ ಪೂರೈಕೆ ಘೋಷಣೆ ಮಾಡಲಾಗಿತ್ತು. ಅದರಂತೆ ಜು. 1 ರಿಂದ ಪಂಜಾಬ್‌ನಲ್ಲಿ 300 ಯೂನಿಟ್ ವರೆಗೆ ಗೃಹಬಳಕೆ ವಿದ್ಯುತ್‌ ಅನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಇದೇ ವೇಳೆ ಕರ್ನಾಟಕದ ನಗರ ಪ್ರದೇಶಗಳಲ್ಲಿ 300 ಯೂನಿಟ್‌ಗಳ ವರೆಗೆ ವಿದ್ಯುತ್ ಬಳಕೆ ಮಾಡಿದಲ್ಲಿ ಸುಮಾರು 1,500 ರೂ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಮಾತ್ರ ವಿದ್ಯುತ್ ದರ ಹೆಚ್ಚಳ:

ಡಬಲ್ ಇಂಜಿನ್ ಬೊಮ್ಮಾಯಿ ಸರ್ಕಾರ ಜು. 1 ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಅನ್ವಯವಾಗಲಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಮಾಸಿಕ 30 ರಿಂದ 75 ಯೂನಿಟ್ ವರೆಗೂ ಉಚಿತ ವಿದ್ಯುತ್ ಪೂರೈಕೆ ಮಾಡಲಾಗಿದೆ. ಉಚಿತ ವಿದ್ಯುತ್ ಪೂರೈಕೆಗೂ ಮಾಸಿಕ ಕನಿಷ್ಠ ದರವನ್ನು ಪಾವತಿಸಲೇಬೇಕು.

Karnataka Revised Power Tariff effective from July 1

ಒಂದು ಮನೆಗೆ ಮಾಸಿಕ 2000 ಉಳಿತಾಯ:

ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ ಟಿ -1 ಅಡಿ 300 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಕನಿಷ್ಠ 2000 ರೂ. ಶುಲ್ಕ ಪಾವತಿಸಬೇಕು. ವಿದ್ಯುತ್ ಬಳಕೆ ಮಾಡಿದಷ್ಟೂ ಶುಲ್ಕ ಹೆಚ್ಚುವರಿಯಾಗಿ ಶುಲ್ಕ ಬೀಳಲಿದೆ. ಜನ ಸಾಮಾನ್ಯರಿಗೆ ನಿಜವಾಗಿಯೂ ಸಹಾಯ ಮಾಡುವ ಕಾಳಜಿ ಇರುವ ಜನ ನಾಯಕರು ಮಾನ್ ಸಿಂಗ್ ಮಾದರಿಯೇ ತೀರ್ಮಾನ ಕೈಗೊಳ್ಳುತ್ತಾರೆ. ದೇಶದಲ್ಲಿ ಮೊದಲ ಬಾರಿಗೆ ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು. ಇದೀಗ ಆಪ್ ಸರ್ಕಾರ ಇರುವ ಪಂಜಾಬ್ ನಲ್ಲಿ ಘೋಷಣೆ ಮಾಡಲಾಗಿದೆ. ಅದೇ ದಶಕಗಳ ಕಾಲ ದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ಅಳ್ವಿಕೆ ನಡೆಸುತ್ತಿರುವ ಒಂದೇ ಒಂದು ರಾಜ್ಯದಲ್ಲಿ ಕೂಡ ಈ ತರಹದ ತೀರ್ಮಾನಗಳು ಹೊರಗೆ ಬಿದ್ದಿಲ್ಲ.

Karnataka Revised Power Tariff effective from July 1

ವಿದ್ಯುತ್ ನಿಯಂತ್ರಣ ಅಯೋಗ ಒಪ್ಪಿಗೆ:

ಕಲ್ಲಿದ್ದಲು ಖರೀದಿ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ವಿದ್ಯುತ್ ಸರಬರಾಜು ಸಂಸ್ಥೆಗಳ ಪ್ರಸ್ತಾಪಕ್ಕೆ ಕರ್ನಾಟಕ ವಿದ್ಯುತ್ ಪ್ರಸರಣ ನಿಯಂತ್ರಣ ಆಯೋಗವು ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪರಿಷ್ಕರಣೆ ಶುಲ್ಕ ಜು. 01 ರಿಂದ ಜಾರಿಯಾಗಲಿದೆ. ಪ್ರತಿ ದಿನ ನೂರು ಯೂನಿಟ್ ಬಳಕೆ ಮಾಡುವ ಗ್ರಾಹಕರು ಹೆಚ್ಚುವರಿಯಾಗಿ 19 ರೂ.ಗಳಿಂದ 31 ರೂ. ಪಾವತಿಸಬೇಕಾಗುತ್ತದೆ.

2021-22 ನೇ ಸಾಲಿನ ಎರಡು ಕಂತಿನಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿದೆ. ಅದರಂತೆ ವಿದ್ಯುತ್ ಉತ್ಪಾದನೆಗೆ ಅವಶ್ಯಕವಾಗಿರುವ ಕಲ್ಲಿದ್ದಲು ಖರೀದಿಗೆ ವಿದ್ಯುತ್ ಸಂಸ್ಥೆಗಳು ಹೆಚ್ಚುವರಿ ಶುಲ್ಕವನ್ನು ಭರಿಸಿವೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದಲೇ ಪಡೆಯುವಂತೆ ಅವಕಾಶ ಕಲ್ಪಿಸಲು ಕೋರಿ ಎಸ್ಕಾಂ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾಪ ಇಟ್ಟಿದ್ದವು.

Karnataka Revised Power Tariff effective from July 1

ಅದರಂತೆ ಬೆಸ್ಕಾಂ 55 ರೂ. ಮೆಸ್ಕಾಂ 38 ರೂ. ಸೆಸ್ಕಾಂ 40 ರೂ. ಹೆಸ್ಕಾಂ 49 ರೂ. ಗೆಸ್ಕಾಂ 39 ರೂ. ವಿಧಿಸಲು ಕೋರಿದ್ದವು. ಈ ಪ್ರಸ್ತಾಪವನ್ನು ಒಪ್ಪಿರುವ ಆಯೋಗವು ಎಸ್ಕಾಂ ಪ್ರಸ್ತಾಪಸಿಇದ ದರದಲ್ಲಿ ಕಡಿತಗೊಳಿಸಿದೆ. ಅದರಂತೆ ಪ್ರತಿ ತಿಂಗಳು ನೂರು ಯೂನಿಟ್ ಮೇಲೆ ಬಳಸುವ ಗ್ರಾಹಕರಿಗೆ ಅನ್ವಯ ಆಗುವಂತೆ ಗ್ರಾಹಕರಿಗೆ ಹೆಚ್ಚುವರಿ ದರ ವಿಧಿಸಲಾಗಿದೆ.

Recommended Video

ISRO ದಿಂದ 3 ಉಪಗ್ರಹ ಯಶಸ್ವಿ ಉಡಾವಣೆ? ಇದರ ಪ್ರಯೋಜನ ಏನು ಗೊತ್ತಾ? | *India | OneIndia Kannada

English summary
The Karnataka government has revised the electricity tariff . The new rates will be applicable from June 1, with consumers now having to pay an additional 5 paise per unit. Punjab 300 unit free electricity effective from today. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X