ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಮೇ 27: ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ.

ಕೊವಿಡ್ ಪಾಸಿಟಿವ್ , ಲಕ್ಷಣಗಳಿರುವವರು:
-ಎಲ್ಲಾ ಕೊವಿಡ್ ಪಾಸಿಟಿವ್ ರೋಗಿಗಳನ್ನು, ಚಿಕಿತ್ಸೆಗಾಗಿಯೇ ಮೀಸಲಿಟ್ಟಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ಅಥವಾ ಯಾವುದೇ ಸರ್ಕಾರಿ ಅಥವಾ ಖಾಸಗಿ ಕೊವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
-ಪ್ರತಿದಿನವೂ ರೋಗಿಯ ದೇಹದ ತಾಪಮಾನ, ನಾಡಿ ಮಿಡಿತವನ್ನು ಪರೀಕ್ಷಿಸುತ್ತಿರಬೇಕು.
-ಯಾವುದೇ ಲಕ್ಷಣಗಳು ಗೋಚರಿಸದೆ ಇದ್ದಲ್ಲಿ 10 ದಿನಗಳ ಬಳಿಕ ಡಿಸ್ಚಾರ್ಜ್ ಮಾಡಬಹುದಾಗಿದೆ.
-ಡಿಸ್ಚಾರ್ಜ್ ಆಗುವ ದಿನಕ್ಕೆ ಮೂರು ದಿನಗಳ ಹಿಂದಿನಿಂದ ಜ್ವರ ಸೇರಿದಂತೆ ರೋಗದ ಯಾವುದೇ ಲಕ್ಷಣಗಳು ಗೋಚರಿಸಬಾರದು.

Revised Discharge Guidelines For Covid -19 Patients in Karnataka

-ಡಿಸ್ಚಾರ್ಜ್ ಮಾಡುವ ನಾಲ್ಕು ದಿನಗಳ ಹಿಂದಿನಿಂದ ಕೃತಕ ಆಮ್ಲಜನಕದ ಸಪೋರ್ಟ್ ಇರಬಾರದು.
-ರೋಗದ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಮೂರು ದಿನಗಳ ಬಳಿಕ ಆರ್‌ಟಿ-ಪಿಸಿಆರ್ ಟೆಸ್ಟ್ ನಡೆಸಬೇಕು. ರಿಪೋರ್ಟ್‌ನಲ್ಲಿ ನೆಗೆಟಿವ್ ಎಂದು ಬಂದರೆ ಮಾತ್ರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ.

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕುಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

ಕೊರೊನಾ ಪಾಸಿಟಿವ್, ಯಾವುದೇ ಲಕ್ಷಣಗಳಿಲ್ಲ:
-ಆಸ್ಪತ್ರೆಯಲ್ಲಿರುವಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್ ಇದ್ದರೆ ಅವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕು. ಒಮ್ಮೆ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ ವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಬೇಕು.
-ಡಿಸ್ಚಾರ್ಜ್ ಆದ ಬಳಿಕ ರೋಗಿಗೆ 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗುತ್ತದೆ.

English summary
Government of Karnataka has released revised discharge guidelines for COVID 19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X