ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಯಡಿಯೂರಪ್ಪ 'ರಾಜೀನಾಮೆ' ಮಾತಿನ ಹಿಂದಿನ ಕಾರಣ ಹೇಳಿದ ಆರ್. ಅಶೋಕ್!

|
Google Oneindia Kannada News

ಬೆಂಗಳೂರು, ಜೂ. 07: ಮಹತ್ವದ ಬೆಳವಣಿಗೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಸಿಎಂ ಯಡಿಯೂರಪ್ಪ ಅವರ 'ರಾಜೀನಾಮೆ' ಕೊಡುವ ಹೇಳಿಕೆ ಹಿಂದಿನ ಕಾರಣವನ್ನು ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ 'ರಾಜೀನಾಮೆ' ಹೇಳಿಕೆ ಅವರ ಆಪ್ತರಲ್ಲಿ ಸಂಚಲನ ಮೂಡಿಸಿದೆ. ಹೈಕಮಾಂಡ್ ಸೂಚಿಸಿದರೆ 'ಮುಖ್ಯಮಂತ್ರಿ' ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಾಗುತ್ತಿವೆ.

ಕಳೆದ ಹಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಹಲವು ನಾಯಕರು ಬಹಿರಂಗವಾಗಿಯೇ 'ನಾಯಕತ್ವ ಬದಲಾವಣೆ' ಕುರಿತು ಮಾತನಾಡುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳಿಂದ ಬೇಸತ್ತಿರುವ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ವಿರುದ್ಧ ದಿಢೀರ್ ಸಿಡಿದೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಆಪ್ತ ಸಚಿವರು ಬೆಂಬಲಿಸಿ ಹೇಳಿಕೆ ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಆಪ್ತ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರು ಕೊಟ್ಟಿರುವ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ. ಸಿಎಂ ರಾಜೀನಾಮೆ ಮಾತಿನ ಹಿಂದಿರುವ ಕಾರಣ ಏನು? ಆರ್. ಅಶೋಕ್ ವಿವರಿಸಿರುವುದು ಮುಂದಿದೆ!

ಪದೇ, ಪದೇ ಸಿಎಂ ಬದಲಾವಣೆ‌ ಮಾತು!

ಪದೇ, ಪದೇ ಸಿಎಂ ಬದಲಾವಣೆ‌ ಮಾತು!

ಇಂದಿಗೂ. ಮುಂದೆಯೂ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲಿಯೇ ಪಕ್ಷ ಈ ಸಾಧನೆ ಮಾಡಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್‌ ಅಶೋಕ್ ಅವರ ತಿಳಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, "ಪದೇ, ಪದೇ ಸಿಎಂ ಬದಲಾವಣೆ‌ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಯಡಿಯೂರಪ್ಪ ಅವರ ಮನಸ್ಸಿಗೆ ನೋವಾಗಿದೆ ಎಂದು ಅಶೋಕ್ ಯಡಿಯೂರಪ್ಪ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತುವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್‌ವೈ ಮಾತು

ಮಹಾ ಸಿಎಂ ಮನೆ ಬಿಟ್ಟು ಹೊರಗೆ ಬಂದಿಲ್ಲ!

ಮಹಾ ಸಿಎಂ ಮನೆ ಬಿಟ್ಟು ಹೊರಗೆ ಬಂದಿಲ್ಲ!

ದೇಶದಲ್ಲಿನ ಇತರ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಯಡಿಯೂರಪ್ಪ ಅವರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಜೊತೆಗೆ ಜನಪರ‌ ಕಾಳಜಿಯಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನೆ ಬಿಟ್ಟು ಹೊರಗೆ ಬಂದಿಲ್ಲ. ಆದರೆ ನಮ್ಮ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಆರೈಕೆ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ನಾಲ್ಕೈದು ಸಭೆಗಳನ್ನು ಆಯೋಜಿಸುವುದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೂ ಬಿಯು ನಂಬರ್ ಪಡೆದರೆ ಸರ್ಕಾರವೇ ಅವರ ವೆಚ್ಚ ಭರಿಸುತ್ತಿದೆ. ಈ ಯೋಜನೆಯನ್ನು ಯಡಿಯೂರಪ್ಪ ಅವರು ಜಾರಿಗೆ ತಂದಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಯೋಗೇಶ್ವರ್ ಕೂಡ ಒಪ್ಪಿಕೊಂಡಿದ್ದಾರೆ!

ಯೋಗೇಶ್ವರ್ ಕೂಡ ಒಪ್ಪಿಕೊಂಡಿದ್ದಾರೆ!

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಎರಡು ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ. ಇಷ್ಟೆಲ್ಲಾ ಮಾಡಿದಾಗಲೂ ಪದೇ ಪದೇ ನಾಯಕತ್ವ ಪ್ರಶ್ನೆ ಮೂಡುತ್ತಿರುವುದರಿಂದ ಅವರ ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ಆ ರೀತಿ ಮಾತನಾಡಿರಬಹುದು ಎಂದು ಅಶೋಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಿಎಂ ಯಡಿಯೂರಪ್ಪ 'ರಾಜೀನಾಮೆ' ಮಾತಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್ಸಿಎಂ ಯಡಿಯೂರಪ್ಪ 'ರಾಜೀನಾಮೆ' ಮಾತಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್

ಈಗಾಗಲೇ ನಮ್ಮ ಪಕ್ಷದ ಹಲವು ನಾಯಕರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಸಿಪಿ ಯೋಗೇಶ್ವರ್ ಅವರೂ ಕೂಡಾ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಊಹಾಪೋಹಕ್ಕೆ ನಾವು ಶಾಶ್ವತ ತೆರೆ ಎಳೆಯಲು ನಿರ್ಧರಿಸಿದ್ದೇವೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.

Recommended Video

England Pitch ಭಾರತಕ್ಕಿಂತ ನ್ಯೂಜಿಲೆಂಡ್ ಗೆ ಹೆಚ್ಚು ಸಹಕಾರಿಯಾಗುತ್ತಾ? | Oneindia Kannada
ರಾಜೀನಾಮೆ ಮಾತಿನ ಹಿಂದಿನ ಕಾರಣ!

ರಾಜೀನಾಮೆ ಮಾತಿನ ಹಿಂದಿನ ಕಾರಣ!

ಕೋವಿಡ್ ನಂತಹ ಈ ಸಂದರ್ಭದಲ್ಲಿ ಈ ಹೇಳಿಕೆಗಳಿಂದ ಜನರ ಮನಸ್ಸಿಗೆ‌ ಘಾಸಿಯಾಗುತ್ತದೆ. ಹೀಗಾಗಿ ಸಿಎಂ ಯುಡಿಯೂರಪ್ಪ ಅವರು ರಾಜೀನಾಮೆ ಮಾತನ್ನಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವಿವರಿಸಿದ್ದಾರೆ. ಯಡಿಯೂರಪ್ಪ ಅವರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗಬಾರದು. ಇದಕ್ಕೆ ಫುಲ್‌ಸ್ಟಾಪ್ ಇಡುವ ಕೆಲಸ ಆಗಬೇಕು. ಅವರು ಹಳ್ಳಿ-ಹಳ್ಳಿಗೆ ಹೋಗಿ ಪಕ್ಷ ಕಟ್ಟಿದ್ದಾರೆ. ಅವರ ನಾಯಕತ್ವ ಈಗಲೂ ಬೇಕು, ಮುಂದೆಯೂ ಬೇಕು. ಅವರ ನಾಯಕತ್ವದಲ್ಲೆ ನಾವು ಮುಂದುವರೆಯುತ್ತೇವೆ. ಹೈಕಮಾಂಡ್ ಕೂಡಾ ಅವರ ಬೆಂಬಲಕ್ಕಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಅಶೋಕ್ ತಿಳಿಸಿದ್ದಾರೆ.

English summary
Revenue Minister R Ashoka reveals reason behind Chief Minister Yediyurappa's resignation statement. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X