ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠ್ಯಪುಸ್ತಕ ವಿವಾದ: ನೇಗಿಲ ಯೋಗಿ ಸುತ್ತದ ಪಠ್ಯ"ರಾಜ'ಕೀಯ ಮರ್ಮ..!

|
Google Oneindia Kannada News

ಬೆಂಗಳೂರು, ಜೂನ್ 23: ಪಠ್ಯ ವಿವಾದ ಪುಸ್ತಕ ವಿವಾದ ಉತ್ತುಂಗಕ್ಕೆ ಏರಿದಾಗಲೂ ಶಿಕ್ಷಣ ಸಚಿವರೊಬ್ಬರೇ ಪಠ್ಯಪುಸ್ತಕ ಮರು ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದರು. ಪಠ್ಯಪುಸ್ತಕದ ಮರು ಪರಿಷ್ಕರಣೆಯ ವಿರುದ್ದ ಸಾಹಿತಿ ವರ್ಗ. ಮಠಾಧೀಶರು ಹರಿಹಾಯ್ದಿದ್ದರು. ಕಾಂಗ್ರೆಸ್, ಜೆಡಿಎಸ್ ಸಹ ಪಠ್ಯಪುಸ್ತಕ ಮರು ಪರಿಷ್ಕರಣೆಯಲ್ಲಿ ಕುವೆಂಪು, ಅಂಬೇಡ್ಕರ್‌ ಸೇರಿದಂತೆ ಹಲವರಿಗೆ ಅವಮಾನ ಮಾಡಿದ್ದರ ವಿರುದ್ದ ಹರಿಹಾಯ್ದಿದ್ದರು. ಇದರಿಂದಾಗಿ ಕಂದಾಯ ಸಚಿವ ಆರ್ ಅಶೋಕ್ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಸಮರ್ಥಿಸಿಕೊಂಡಿದ್ದಾರೆ. ಆರ್ ಅಶೋಕ್ ಸುದ್ದಿಗೋಷ್ಠಿಯ ಉದ್ದೇಶವೇ ಒಕ್ಕಲಿಗ ರಾಜಕೀಯ.

ಕಂದಾಯ ಸಚಿವ ಆರ್ ಅಶೋಕ್‌ರವರು ಪಠ್ಯಪುಸ್ತಕದ ಸರಿ ತಪ್ಪುಗಳೇನು. ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಲೋಪವನ್ನು ಸರಿ ಪಡಿಸಿದ್ದೇವೆ. ಭಾರತ, ಭಾರತೀಯರ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದೇವೆ. ಹಿಂದೂ ಎಂಬ ಶಬ್ದವನ್ನೇ ಕಾಂಗ್ರೆಸ್ ಕಿತ್ತು ಹಾಕಿದ್ದರು ಎಂದು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಪಠ್ಯಪುಸ್ತಕಮರು ಪರಿಷ್ಕರಣೆಯನ್ನು ಸಮರ್ಥಿಸಿದ್ದಾರೆ.

ಕುವೆಂಪುರವರ ಪದ್ಯ ಮತ್ತು ಗದ್ಯವನ್ನು ಸಿದ್ದರಾಮಯ್ಯರವರ ಅವಧಿಯಲ್ಲಿ 8 ರಿಂದ 7ಕ್ಕೆ ಇಳಿಸಲಾಗಿತ್ತು. ಇದೀಗ ನಾವು 10ಕ್ಕೆ ಹೆಚ್ಚಿಸಿದ್ದೇವೆ ಎಂದು ಅಂಕಿ ಅಂಶಗಳೊಂದಿದೆ ಯಾವ ಪಠ್ಯವನ್ನು ಬಿಟ್ಟಿದ್ದರು ಯಾವ ಪಠ್ಯವನ್ನು ಸೇರಿಸಿದ್ದಾರೆ ಎಂದು ವಿವರಿಸಿದರು.

ತಿದ್ದುಪಡಿ ಕೈಪಿಡಿ ಶಿಕ್ಷಕರಿಗೆ ತಲುಪಿಸುತ್ತೇವೆ

ತಿದ್ದುಪಡಿ ಕೈಪಿಡಿ ಶಿಕ್ಷಕರಿಗೆ ತಲುಪಿಸುತ್ತೇವೆ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 2014ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕವನ್ನು ಮರು ಪರಿಷ್ಕರಣೆಯನ್ನು ಮಾಡಿದ್ದರು. ಮರು ಪರಿಷ್ಕಣೆಯಲ್ಲಿ ಸುಮಾರು 150 ತಪ್ಪುಗಳಾಗಿದ್ದವು. ಅವರೇನು ಹೊಸ ಪುಸ್ತಕವನ್ನು ಮರುಮುದ್ರಿಸಿದ್ದರೇ. ತಿದ್ದುಪಡಿಯ ಕೈಪಿಡಿಯನ್ನು ಬಿಡುಗಡೆ ಮಾಡಲಿಲ್ಲವೇ. ನಾವು ಸಹ ತಿದ್ದು ಪಡಿಯನ್ನು ಮಾಡಿರುವುದನ್ನು ಕೈಪಿಡಿ ಮಾಡಿ ಶಿಕ್ಷಕರಿಗೆ ತಲುಪುಸುವ ಕೆಲಸ ಮಾಡುತ್ತೇವೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ಬರಗೂರು ರಾಮಚಂದ್ರಪ್ಪ ಸಮಿತಿ ಪುಸ್ತಕ ಹರಿಯಬೇಕಿತ್ತು

ಬರಗೂರು ರಾಮಚಂದ್ರಪ್ಪ ಸಮಿತಿ ಪುಸ್ತಕ ಹರಿಯಬೇಕಿತ್ತು

ಪಠ್ಯ ಪುಸ್ತಕ ಸಮರ ಒಕ್ಕಲಿಗರಿಗೆ ಅಮಮಾನವಾಗಿ ಎಂಬ ಹಂತವನ್ನು ತಲುಪಿದೆ. ಡಿಕೆಶಿ ಶಿವಕುಮಾರ್ ಕೆಲದಿನದ ಹಿಂದಷ್ಟೇ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೋಹಿತ್ ಚಕ್ರತೀರ್ಥ ಪರಿಷ್ಕರಣೆಯ ಪುಸ್ತಕದ ಹಾಳೆಯನ್ನು ಹರಿದು ಎಸೆದಿದ್ದರು. ಇದಕ್ಕೆ ಕೌಂಟರ್ ನೀಡದ ಆರ್ ಅಶೋಕ್ ನಾವು ಕೆಂಪೇಗೌಡರ ವಿಚಾರವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದೇವೆ. ಡಿಕೆಶಿ ಹರಿದಿದ್ದು ಕೆಂಪೇಗೌಡರಿದ್ದ ಮರು ಪರಿಷ್ಕರಣೆಯ ಪಠ್ಯವನ್ನು ಎಂದು ತಮ್ಮ ಜಾತಿ ಸಮಾಜದ ಕೆಂಪೇಗೌರನ್ನೇ ಡಿಕೆಶಿ ಬೇಡ ಎನ್ನುತ್ತಿದ್ದಾರೆಯೇ ಎಂದು ವಾಗ್ದಾಳಿಯನ್ನು ನಡೆಸಿದರು.

ಟಿಪ್ಪು ಬಗ್ಗೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ

ಟಿಪ್ಪು ಬಗ್ಗೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ

ಸಿದ್ದರಾಮಯ್ಯಗೆ ಟಿಪ್ಪು ಎಂದರೆ ಸಾಕು ಮೈಮೇಲೆ ಬರುತ್ತೆ. ಟಿಪ್ಪು ಮತ್ತು ಹೈದರಾಲಿ ಬಗ್ಗೆಯೇ ಆರು ಪಟ ವಿವರಣೆಯಿತ್ತು. ಮೈಸೂರು ಅರಸರ ಕಡೆಗಣನೆಯಾಗಿತ್ತು. ಟಿಪ್ಪು ಹಿಂದೂಗಳನ್ನು ಕಗ್ಗೊಲೆ ಮಾಡಿದ. ಮತಾಂತರ ಮಾಡಿದ, ಮಂಡ್ಯ ದೇವಾಲಯದ ಬಳಿ ತಲೆಕಡಿದ ಎಂದು ಟಿಪ್ಪುವಿನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಮತ್ತೊಮ್ಮೆ ಅಶೋಕ್ ನೀಡಿದ್ದಾರೆ.

ದೇವೇಗೌಡರು ನಮ್ಮ ಸಮಾಜದ ಹಿರಿಯ ನಾಯಕ

ದೇವೇಗೌಡರು ನಮ್ಮ ಸಮಾಜದ ಹಿರಿಯ ನಾಯಕ

ದೇವೇಗೌಡರು ನಮ್ಮ ಸಮಾಜದ ಹಿರಿಯ ನಾಯಕರಾಗಿದ್ದಾರೆ. ದೇವೇಗೌರು ಪಠ್ಯಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಬರೆದಿರುವ ಪತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅತ್ಯಂತ ಸೂಕ್ಷ್ಮವಾಗಿ ಪತ್ರವನ್ನು ಬರೆಯಲಿದ್ದಾರೆ. ದೇವೇಗೌಡರ ಪತ್ರಕ್ಕೆ ನಾನು ಉತ್ತರ ನೀಡುವುದಿಲ್ಲ. ಆದಿ ಚುಂಚನಗಿರಿ ಸ್ವಾಮೀಜಿಗೆ ಶಿಕ್ಷಣ ಸಚಿವರೇ ಉತ್ತರವನ್ನು ನೀಡಿದ್ದಾರೆ. ಆ ಮೂಲ ಒಕ್ಕಲಿಗರ ಒಳರಾಜಕೀಯದಲ್ಲಿ ಪಠ್ಯಪುಸ್ತಕದ ವಿಚಾರಕ್ಕೆ ಆರ್ ಅಶೋಕ್ ಸುದ್ದಿಗೋಷ್ಠಿ ಮೂಲಕ ಕುವೆಂಪುರವರಿಗೆ ಅವಮಾನವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಒಕ್ಕಲಿಗ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು. ಒಕ್ಕಲಿಗ ಸಮಾಜವನ್ನೇ ಪ್ರಮುಖವಾಗಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ತಮ್ಮ ಶಿಕ್ಷಣ ಸಚಿವರ ಪರವಾಗಿ ತಮ್ಮ ಕೆಲಸವನ್ನು ಮಾಡಿದ್ದಾರೆ.

English summary
Karnataka Revenue Minister, R Ashok said that there were just 7-8 mistakes in the newly revised school textbooks when compared to 150 mistakes during the Siddaramaiah-led Cong govt. Justifies Karnataka Text Book Revision. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X