ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ರಚನೆ ರದ್ದು; ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಎಸಿಬಿ ರಚನೆಯನ್ನು ರದ್ದು ಮಾಡಿದ ಹೈಕೋರ್ಟ್‌ ಆದೇಶವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸ್ವಾಗತಿಸಿದ್ದಾರೆ. ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದ ವೇಳೆ ಭ್ರಷ್ಟ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಸಾಕ್ಷಿ ಸಹಿತವಾಗಿ ಹಿಡಿದ ಹೆಗ್ಗಳಿಕೆ ಸಂತೋಷ್ ಹೆಗ್ಡೆಯವರಿಗೆ ಸಲ್ಲುತ್ತದೆ.

ಎಸಿಬಿ ರದ್ದುಗೊಳಿಸಿದ ಬಗ್ಗೆ ಸಂತೋಷ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು "ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ. ಇದು ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಲೋಕಾಯುಕ್ತಕ್ಕೆ ಅಧಿಕಾರವನ್ನು ನೀಡಬೇಕು. ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು" ಎಂದರು.

"ಅಧಿಕಾರಿಗಳ ನೇಮಕದಲ್ಲೂ ಕೂಡ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಬಾರದು.ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಜೊತೆಗೆ ಲೋಕಾಯುಕ್ತಕ್ಕೆ ಕೇವಲ ಅಧಿಕಾರ ನೀಡೋದಲ್ಲ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡಬೇಕು. ಹಾಗೇ ಲೋಕಾಯುಕ್ತರು ಕೊಟ್ಟ ಜವಾಬ್ದಾರಿ ಚನ್ನಾಗಿ ನಿರ್ವಹಿಸಬೇಕು. ಎಲ್ಲಾ ಅಧಿಕಾರ ಸೌಲಭ್ಯ ವನ್ನು ಕೂಟ್ಟ ನಂತರ ಉತ್ತಮವಾಗಿ ನಿರ್ವಹಿಸಬೇಕು.ಇಲ್ಲವಾದರೆ ನಾನೇ ವಿರೋಧ ಮಾಡುತ್ತೇನೆ" ಎಂದು ಹೇಳಿದರು.

Retired Justice Santosh Hegde welcomes High Court order quashing the formation of ACB

"ಜನರು ಪ್ರತಿಕ್ರಿಯೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಸ್ವಾತಂತ್ರ್ಯವಾದ ತನಿಖಾ ಸಂಸ್ಥೆಗಳು ಬೇಡ ಯಾಕೆ ಸ್ವಾತಂತ್ರ್ಯ ಸಂಸ್ಥೆಗಳು ಜನಸಾಮಾನ್ಯರ ವಿರುದ್ದ ತನಿಖೆಯನ್ನು ಮಾಡುವುದು ಕಡಿಮೆಯಾಗಿ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳ ತನಿಖೆ ಹೆಚ್ಚಾಗುತ್ತದೆ. ಬ್ರಹ್ಮಾಸ್ತ್ರವನ್ನು ಸ್ವಾತಂತ್ರ್ಯ ಸಂಸ್ಥೆಗೆ ನೀಡುಲು ಬಯಸುವುದಿಲ್ಲ" ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.

Retired Justice Santosh Hegde welcomes High Court order quashing the formation of ACB

ಲೋಕಾಯಕ್ತ ಸಂಸ್ಥೆಯ ಖದರ್ ಹೆಚ್ಚು ಮಾಡಿದ್ದು ನ್ಯಾ. ಎನ್. ವೆಂಕಟಾಚಲ ಮತ್ತು ಸಂತೋಷ್ ಹೆಗ್ಡೆಯ ಅಧಿಕಾರವಧಿಯಲ್ಲಿ. ಆಗಸ್ಟ್ 3,2006 ರಿಂದ ಆಗಸ್ಟ್ 2, 2011ರವರೆಗೂ ಅಧಿಕಾರವನ್ನು ನಡೆಸಿದ್ದ ಸಂತೋಷ್ ಹೆಗ್ಡೆ ಭ್ರಷ್ಟಾಚಾರಿಗಳನ್ನು ನಡುಗುವಂತೆ ಮಾಡಿದ್ದರು.

Retired Justice Santosh Hegde welcomes High Court order quashing the formation of ACB

ಯಾರಿಗೂ ಹೆದರದೇ ಸ್ವಾತಂತ್ರ್ಯವಾಗಿ ತನಿಖೆಯನ್ನು ನಡೆಸುತ್ತಿದ್ದರು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ವಿರುದ್ದವೇ ತನಿಖಾ ವರದಿಯನ್ನು ನೀಡಿದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯಬೇಕಾಗಿ ಬಂದಿತ್ತು.

English summary
Former Supreme Court judge and former Lokayukta of Karnataka Justice Santosh Hegde welcomed the Karnataka high court order quashing the formation of ACB. Santhosh Hegde is credited with holding corrupt officials and corrupt politicians as witnesses when he accepted power in the Lokayukta organization, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X