ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯುವುದಕ್ಕೆ ಮಾತ್ರ ಕಾವೇರಿ: ನಿರ್ಣಯದ ಪೂರ್ಣ ಪಾಠ

By Mahesh
|
Google Oneindia Kannada News

ಬೆಂಗಳೂರು, ಸೆ.24: ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಹಾಲಿ ಲಭ್ಯವಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ, ಈ ಭಾಗದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಸಂರಕ್ಷಿಸಿಡುವಂತೆ ಹಾಗೂ ಬೇರಾವ ಉದ್ದೇಶಕ್ಕೂ ಬಳಸದಂತೆ ರಾಜ್ಯ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಶುಕ್ರವಾರದಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸರ್ವೋಚ್ಛ ನ್ಯಾಯಾಲಯವು ಸೆಪ್ಟೆಂಬರ್ 20 ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ರಾಜ್ಯ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾವು ನ್ಯಾಯಾಲಯಕ್ಕೆ ಸೆಡ್ಡು ಹೊಡೆದಿದ್ದೇವೆ ಎಂದು ಯಾರೂ ಭಾವಿಸಬಾರದು. [ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ!]

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿರುವ ನಮಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ. ಕಳೆದ ಎರಡು ವರ್ಷಗಳಿಂದಲೂ ರಾಜ್ಯವು ಎಂದೂ ಕಂಡುಕೇಳರಿಯದ ಭೀಕರ ಬರಕ್ಕೆ ತುತ್ತಾಗಿ ಜಲಾಶಯಗಳಲ್ಲಿನ ನೀರಿನ ಮಟ್ಟದಲ್ಲಿ ತೀವ್ರ ಕುಸಿತ ಉಂಟಾಗಿದ್ದರೂ ತಮ್ಮ ಸರ್ಕಾರವು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಲೇ ಬಂದಿದೆ. [ಜಯಾ-ಸಿದ್ದರಾಮಯ್ಯ ಕುಂತು ಮಾತಾಡಿದ್ರೆ ಸಮಸ್ಯೆ ಇರಲ್ಲ: ಶೆಟ್ಟರ್]

ಆದರೆ, ನ್ಯಾಯಾಲಯವು ನೀಡಿರುವ ಆದೇಶವನ್ನು ಪಾಲಿಸಲಾಗದಂತಹ ಸಂಕಷ್ಟವು ಇದೀಗ ರಾಜ್ಯದಲ್ಲಿ ಎದುರಾಗಿದೆ. ಅಂತೆಯೇ, ನಾವು ಜನಾದೇಶವನ್ನು ಕೂಡಾ ಧಿಕ್ಕರಿಸಲು ಸಾಧ್ಯವಿಲ್ಲ. ಹಾಗೇನಾದೂ ಮಾಡಿದಲ್ಲಿ ಅದು ಚುನಾಯಿತ ಸರ್ಕಾರದ ಕರ್ತವ್ಯ ಲೋಪ ಎನಿಸುತ್ತದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ರಾಜ್ಯವು ಎದುರಿಸುತ್ತಿರುವ ಸಂಕಷ್ಟವನ್ನು ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು. [ಮತ್ತೆ ಆಕ್ಷೇಪ ಸಲ್ಲಿಸಿದ ತಮಿಳುನಾಡು, ಕರ್ನಾಟಕ]

ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಸಿಎಂ

ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಸಿಎಂ

ಪ್ರಜಾಪ್ರಭುತ್ವದ ಮೂರೂ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಬಗ್ಗೆ ತಮಗೆ ನಂಬಿಕೆ ಇದೆ. ಅದರಲ್ಲೂ ವಕೀಲ ವೃತ್ತಿಯಿಂದ ವೃತ್ತಿ ಜೀವನ ಪ್ರಾರಂಭಿಸಿದ ತಮಗೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ.

ನ್ಯಾಯಾಂಗದ ಆದೇಶವನ್ನು ಧಿಕ್ಕರಿಸಬೇಕೆಂಬ ಭಾವನೆ ತಮ್ಮಲ್ಲಿಲ್ಲ. ಅಂತಹ ಆಲೋಚನೆ ತಮ್ಮ ಕನಸು-ಮನಸಿನಲ್ಲೂ ಇಲ್ಲ. ರಾಜ್ಯದ ಹಿತ ದೃಷ್ಠಿಯಿಂದ ನೆಲ-ಜಲ ಹಾಗೂ ಭಾಷೆಯ ಸಂರಕ್ಷಣೆಗಾಗಿ ಎಂದಿನಂತೆ ರಾಜಕಾರಣದಿಂದ ದೂರವಾಗಿ, ಪಕ್ಷ-ಬೇಧ ಮರೆತು, ನಾವೆಲ್ಲರೂ ಒಂದಾಗೋಣ ಎಂದು ಸಿದ್ದರಾಮಯ್ಯ ಸದಸ್ಯರಲ್ಲಿ ಮನವಿ ಮಾಡಿದರು.

ರೈತರ ಹಿತ ಕಾಪಾಡುತ್ತೇವೆ ಅನುಮಾನ ಬೇಡ

ರೈತರ ಹಿತ ಕಾಪಾಡುತ್ತೇವೆ ಅನುಮಾನ ಬೇಡ

ಎಂತಹ ಕಠಿಣ ಪರಿಸ್ಥಿತಿ ಎದುರಾದರೂ, ಜನತೆಗೆ ಕುಡಿಯುವ ನೀರು ಒದಗಿಸುವಲ್ಲಿ ಹಾಗೂ ರೈತರ ಹಿತ ಕಾಪಾಡುವಲ್ಲಿ ತಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದ ಸಿದ್ದರಾಮಯ್ಯ ಅವರು ಈ ಬಗ್ಗೆ ಯಾವ ಅನುಮಾನವೂ ಬೇಡ ಎಂದು ಸದನದ ಮೂಲಕ ರಾಜ್ಯದ ಜನತೆಗೆ ಭರವಸೆ ನೀಡಿದ ಸಿದ್ದರಾಮಯ್ಯ ಅವರು ಸದನವು ಈ ನಿಟ್ಟಿನಲ್ಲಿ ಕೈಗೊಳ್ಳಲಿರುವ ನಿರ್ಣಯಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕುಡಿಯುವ ನೀರು : ಜಲ ನೀತಿಯ ಆದ್ಯತೆ

ಕುಡಿಯುವ ನೀರು : ಜಲ ನೀತಿಯ ಆದ್ಯತೆ

ಕೇಂದ್ರ ಸರ್ಕಾರವು 2002 ಹಾಗೂ 2012 ರಲ್ಲಿ ಒಟ್ಟು ಎರಡು ಬಾರಿ ಪ್ರಕಟಿಸಿರುವ ರಾಷ್ಟ್ರೀಯ ಜಲ ನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡಲಾಗಿದೆ. ನಂತರದ ಆಧ್ಯತೆ ಕೃಷಿ ಚಟುವಟಿಕೆಗಳಿಗೆ ಹಾಗೂ ತದ ನಂತರದ ಆಧ್ಯತೆ ವಿದ್ಯುತ್ ಉತ್ಪಾದನೆಗೆ

ಜನತೆಗೆ ಕುಡಿಯುವ ನೀರು ಒದಗಿಸಬೇಕೆಂಬ ಸಂಕಷ್ಟವನ್ನು ತಮ್ಮ ಸರ್ಕಾರವು ಎದುರಿಸುತ್ತಿರುವ ಸಂದರ್ಭದಲ್ಲಿ ಕುರುವೈ ಬೆಳೆಯ ನಂತರದಲ್ಲಿ ತಾವು ಬೆಳೆಯಲು ಉದ್ದೇಶಿಸಿರುವ ಎರಡನೇ ಬೆಳೆ ಸಾಂಬಾ ಭತ್ತದ ಬೆಳೆಗೆ ತಮಿಳುನಾಡು ನೀರು ಬಿಡುವಂತೆ ತಕರಾರು ತೆಗೆದಿರುವುದು ನೋವಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ

ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ

ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತಮಗೆ ಸಹಕಾರ ನೀಡಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಎಸ್. ಕೃಷ್ಣ, ನಿವೃತ್ತ ನ್ಯಾಯಾಧೀಶರು, ಕಾನೂನು ತಜ್ಞರು, ನೀರಾವರಿ ತಜ್ಞರು, ರಾಜ್ಯದ ಎಲ್ಲಾ ಸಂಸದರು-ಶಾಸಕರು, ಮಾಧ್ಯಮದವರು ಹಾಗೂ ಸಂಕಷ್ಟದಲ್ಲೂ ಸಂಯಮ ತೋರಿದ ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

ಬೆಳೆ ಪರಿಹಾರದ ಬಗ್ಗೆ ಸಿಎಂ

ಬೆಳೆ ಪರಿಹಾರದ ಬಗ್ಗೆ ಸಿಎಂ

ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಬೆಳೆ ಬೆಳೆಯಲಾಗದ ಕಾವೇರಿ ಕೊಳ್ಳದ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ರಜೆ ಘೋಷಿಸಿರುವ ಪ್ರದೇಶಗಳ ಸರ್ವೇಕ್ಷಣೆ ನಡೆಸಿ ಹಾಗೂ ಬಾಧಿತ ಪ್ರದೇಶಗಳ ವಿವರಗಳನ್ನು ಸಂಗ್ರಹಿಸಿದ ನಂತರ ಬೆಳೆ ಪರಿಹಾರದ ಮೊತ್ತವನ್ನು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ

ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ

ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತಮಗೆ ಸಹಕಾರ ನೀಡಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಎಸ್. ಕೃಷ್ಣ, ನಿವೃತ್ತ ನ್ಯಾಯಾಧೀಶರು, ಕಾನೂನು ತಜ್ಞರು, ನೀರಾವರಿ ತಜ್ಞರು, ರಾಜ್ಯದ ಎಲ್ಲಾ ಸಂಸದರು-ಶಾಸಕರು, ಮಾಧ್ಯಮದವರು ಹಾಗೂ ಸಂಕಷ್ಟದಲ್ಲೂ ಸಂಯಮ ತೋರಿದ ರಾಜ್ಯದ ಜನತೆಗೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜಾತ್ಯಾತೀತ ಜನತಾ ದಳದ ಉಪ ನಾಯಕ ವೈ ಎಸ್ ವಿ ದತ್ತಾ ಅವರು ಮಂಡಿಸಿದ ನಿರ್ಣಯವನ್ನು, ಸರ್ವೊದಯ ಪಕ್ಷದ ಮುಖಂಡ ಹಾಗೂ ಮೇಲುಕೋಟೆ ಶಾಸಕ ಕೆ. ಎಸ್. ಪುಟ್ಟಣ್ಣ ಅವರು ಅನುಮೋದಿಸಿದರು.

ಒಕ್ಕೊರಲಿನಿಂದ ಅಂಗೀಕಾರ

ಒಕ್ಕೊರಲಿನಿಂದ ಅಂಗೀಕಾರ

ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್ ಅವರು ಕಾವೇರಿ ನದಿ ನೀರಿನ ವಿವಾದ ಕುರಿತಂತೆ 1892 ರಿಂದ 2016 ರವರೆಗಿನ ಘಟನಾವಳಿಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು. ಶಾಸಕರಾದ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ಬಸವರಾಜ್ ಬೊಮ್ಮಾಯಿ, ಎನ್. ಚಲುವರಾಯ ಸ್ವಾಮಿ ಹಾಗೂ ಪಿ. ಎಂ ನರೇಂದ್ರಸ್ವಾಮಿ ಅವರೂ ಕಾವೇರಿ ಕೊಳ್ಳದಲ್ಲಿ ಉದ್ಭವಿಸಿರುವ ಸಂಕಷ್ಟ ಕುರಿತು ಸದನದಲ್ಲಿ ಬೆಳಕು ಚೆಲ್ಲಿದರು.
ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ. ಬಿ. ಕೋಳಿವಾಡ್ ಅವರು ನಿರ್ಣಯದ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ, ನಿರ್ಣಯವನ್ನು ಸದನವು ಧ್ವನಿ ಮತದಿಂದ ಒಕ್ಕೊರಲಿನಿಂದ ಅಂಗೀಕರಿಸಿತು.

ನಿರ್ಣಯದ ಪೂರ್ಣ ಪಾಠ -1

ನಿರ್ಣಯದ ಪೂರ್ಣ ಪಾಠ -1

2016-17 ನೇ ಜಲವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಪರಿಸ್ಥಿತಿ ಇರುವುದನ್ನು ಈ ಸದನವು ತೀವ್ರ ಆತಂಕದಿಂದ ಗಮನಿಸಿದೆ. ಆದರೆ ನೀರಿನ ಕೊರತೆಯ ಪ್ರಮಾಣವೇನು ಎಂಬುದು ಈ ಋತುವಿನ ಅಂತ್ಯ ಅಂದರೆ 31-01-2017 ರ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ ಎಂಬುದನ್ನೂ ಈ ಸದನ ಗಮನಿಸಿದೆ.

ನಿರ್ಣಯದ ಪೂರ್ಣ ಪಾಠ -2

ನಿರ್ಣಯದ ಪೂರ್ಣ ಪಾಠ -2

ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ - ಇವುಗಳಲ್ಲಿ ನೀರಿನ ಮಟ್ಟ ಅತ್ಯಂತ ತಳಮಟ್ಟದ ಹಂತವನ್ನು ತಲುಪಿರುವುದನ್ನು ಮತ್ತು ಕೇವಲ 27.6 ಟಿ. ಎಂ. ಸಿ ಮಾತ್ರ ನೀರು ಇರುವುದನ್ನು ಈ ಸದನವು ಆತಂಕದಿಂದ ಪರಿಗಣಿಸಿದೆ.

ಕುಡಿಯುವ ನೀರಿನ ಅವಶ್ಯಕತೆ

ಕುಡಿಯುವ ನೀರಿನ ಅವಶ್ಯಕತೆ

ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಮಾತ್ರ ಈಗಿರುವ ನಾಲ್ಕೂ ಜಲಾಶಯಗಳ ಒಟ್ಟಾರೆ ಜಲಸಂಗ್ರಹಣೆಯಿಂದ ನೀರನ್ನು ಬಳಸುವುದು ಅತ್ಯಾವಶ್ಯಕ ಮತ್ತು ಅನಿವಾರ್ಯವೆಂಬುದನ್ನು ಸರ್ಕಾರವು ಖಾತರಿಪಡಿಸಿ ಕೊಳ್ಳಬೇಕೆಂದು ಈ ಸದನ ನಿರ್ಣಯಿಸುತ್ತದೆ.

ನಾಲ್ಕೂ ಜಲಾಶಯ ಜಲಸಂಗ್ರಹಣೆ ಮಾಹಿತಿ

ನಾಲ್ಕೂ ಜಲಾಶಯ ಜಲಸಂಗ್ರಹಣೆ ಮಾಹಿತಿ

ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಕಾವೇರಿಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಜಲಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ, ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಹಾಗೆಯೇ ಸಂಪೂರ್ಣವಾಗಿ ಉಳಿಸಿಕೊಳ್ಳಲು ಮತ್ತು ಇದಕ್ಕೆ ಹೊರತಾದ ಬೇರೆ ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ಅಂಗೀಕರಿಸುತ್ತದೆ.

English summary
It is now resolved that in this state of acute distress it is imperative that the Government ensures that no water from the present storages be drawn, save and except for meeting drinking water requirements of the villages and towns in the Cauvery basin and for the entire city of Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X