ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಕರ್ತವ್ಯಕ್ಕೆ ಬಹಿಷ್ಕಾರ ಹಾಕಲು ಮುಂದಾದ ವೈದ್ಯರು

|
Google Oneindia Kannada News

ಬೆಂಗಳೂಡು, ಡಿಸೆಂಬರ್ 11: ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ನೀಡಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಅಲೋಪತಿ ವೈದ್ಯರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಸ್ಥಳೀಯ ವೈದ್ಯರುಗಳು, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು ಅವುಗಳನ್ನು ಈಡೇರಿಸದಿದ್ದರೆ ಕೋವಿಡ್-19 ಕರ್ತವ್ಯಕ್ಕೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವೈದ್ಯರ ಮುಷ್ಕರ: ರಜೆ ರದ್ದುಗೊಳಿಸಿದ ಆರೋಗ್ಯ ಇಲಾಖೆವೈದ್ಯರ ಮುಷ್ಕರ: ರಜೆ ರದ್ದುಗೊಳಿಸಿದ ಆರೋಗ್ಯ ಇಲಾಖೆ

ಪ್ರಸಕ್ತ ಶೈಕ್ಷಣಿಕ ಸಾಲಿನ ಟ್ಯೂಷನ್ ಶುಲ್ಕವನ್ನು ಸರ್ಕಾರ ಮನ್ನಾ ಮಾಡಬೇಕು, ತಮ್ಮ ಕೋವಿಡ್ ಸೇವೆಗಳನ್ನು ಗುರುತಿಸಿ ಕೋವಿಡ್ ಅಪಾಯ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದೆ. ಈ ಒಕ್ಕೂಟದಲ್ಲಿ ಸುಮಾರು 5 ಸಾವಿರ ಸ್ಥಳೀಯ ವೈದ್ಯರುಗಳಿದ್ದಾರೆ.

Resident Doctors In Karnataka Consider Covid Duty Strike

ವೈದ್ಯಕೀಯ ಶಿಕ್ಷಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ಕರ್ನಾಟಕ ಸ್ಥಳೀಯ ವೈದ್ಯರುಗಳ ಒಕ್ಕೂಟ, ವೈದ್ಯಕೀಯ ವಿದ್ಯಾರ್ಥಿಗಳು, ಹೌಸ್ ಸರ್ಜನ್ ಗಳು ಹಲವು ತಿಂಗಳುಗಳಿಂದ ಕೊವಿಡ್ 19 ಕರ್ತವ್ಯದಲ್ಲಿದ್ದು ಇದರಿಂದ ಅವರ ವೈದ್ಯಕೀಯ ಶಿಕ್ಷಣ ಕಲಿಕೆಗೆ ಹಿನ್ನೆಡೆಯಾಗುತ್ತಿದೆ.

ಕರ್ನಾಟಕ ಸ್ಥಳೀಯ ವೈದ್ಯರುಗಳ ಒಕ್ಕೂಟದ ಅಧ್ಯಕ್ಷ ದಯಾನಂದ್ ಸಾಗರ್ ಮಾತನಾಡಿ, ಸೈಪಂಡ್ ವಿಚಾರದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿಗಳಿಂದ ತಮಗೆ ಭರವಸೆ ಸಿಕ್ಕಿದ್ದು, ಬೇರೆ ಯಾವ ಬೇಡಿಕೆಗಳಿಗೂ ಮನ್ನಣೆ ಸಿಕ್ಕಿಲ್ಲ ಎಂದರು.

ಇಂದು ಬೆಳಗ್ಗೆಯಿಂದಲೇ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದು, ಸಂಜೆ 6ರವರೆಗೂ ಬಂದ್ ಇರಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಂದು ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಎಲ್ಲಾ ರೀತಿಯ ಸೇವೆಗಳು ದೊರಕುತ್ತವೆ.

ಗ್ಯಾಂಗ್ರಿನ್, ಹಲ್ಲಿನ ರೂಟ್ ಕೆನಾಲ್, ಅಪೆಂಡಿಕ್ಸ್, ಪಿತ್ತಕೋಶ, ಅಪಾಯವಲ್ಲದ ಗೆಡ್ಡೆ ತೆಗೆಯುವುದು ಮೊದಲಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ನಿಯಮ ಹೊರಡಿಸಿತ್ತು.

ಒಳರೋಗಿ ವಿಭಾಗಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಎಂದಿನಂತೆ ಸೇವೆ ಮುಂದುವರಿಸಲು ನಿರ್ಧರಿಸಿದ್ದಾರೆ. ತುರ್ತು ಚಿಕಿತ್ಸೆಗಳು ಹಾಗೂ ದೂರವಾಣಿ ಸಮಾಲೋಚನೆಗಳು ಎಂದಿನಂತೆ ಇಂದು ಕೂಡ ಸಿಗಲಿವೆ.

Recommended Video

Corona ಸಮಯದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? | Oneindia Kannada

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
Resident doctors in Karnataka have written to the Department of Medical Education with a slew of demands, and are contemplating a boycott of Covid-19 duties if they are not met.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X