ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನಿಮ್ಮ ಜಿಲ್ಲೆಯಲ್ಲಿನ ರಾಜ್ಯದ ಮೀಸಲು ಕ್ಷೇತ್ರಗಳ ಪಟ್ಟಿ

|
Google Oneindia Kannada News

ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಮಹೂರ್ತ ಫಿಕ್ಸ್ ಮಾಡಿದೆ. ಮೇ ಹನ್ನೆರಡರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ ಹದಿನೈದರಂದು ಫಲಿತಾಂಶ ಹೊರಬೀಳಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮೀಸಲಾತಿ ಹೇಗಿದೆಯೋ, ರಾಜ್ಯದ ಒಟ್ಟು 224 ಅಸೆಂಬ್ಲಿ ಕ್ಷೇತ್ರಗಳಲ್ಲೂ ಮೀಸಲಾತಿ ಇದೆ. ಜಾತಿ ವಿಂಗಡಣೆ ಆಧರಿಸಿ, ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

1976ರಲ್ಲಿ ನಡೆಸಲಾಗಿದ್ದ ಜಾತಿ ವಿಂಗಡಣೆಯ ಪ್ರಕಾರ ಸಾಮಾನ್ಯ ಕ್ಷೇತ್ರಗಳು 189, ಪರಿಶಿಷ್ಟ ಜಾತಿ (SC) 33 ಮತ್ತು ಪರಿಶಿಷ್ಟ ಪಂಗಡಕ್ಕೆ (ST) 2ಕ್ಷೇತ್ರ ಮೀಸಲಿಡಲಾಗಿತ್ತು. 2008ರಲ್ಲಿ ಮತ್ತೆ ನಡೆಸಲಾದ ಜಾತಿ ವಿಂಗಡಣೆಯ ನಂತರ ಸಾಮಾನ್ಯ ಕ್ಷೇತ್ರಗಳು 173, SC - 36 ಮತ್ತು ST - 15 ಕ್ಷೇತ್ರಗಳಿಗೆ ಬದಲಾದವು.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳುಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

ದೇಶದ ಒಟ್ಟು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿ, ಇರುವ ಒಟ್ಟು 4,116 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ 624 ಮತ್ತು ಪರಿಶಿಷ್ಟ ಪಂಗಡಕ್ಕೆ 554 ಕ್ಷೇತ್ರಗಳು ಮೀಸಲಾಗಿವೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳುಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳು

ರಾಜ್ಯದಲ್ಲಿ 51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುತ್ತದೆ. ನಿಮ್ಮ ನಿಮ್ಮ ಜಿಲ್ಲೆಯಲ್ಲಿ ಬರುವ ಮೀಸಲು ಕ್ಷೇತ್ರಗಳು ಯಾವುವು? ಮುಂದೆ ಓದಿ

ರಾಜ್ಯದ ಒಟ್ಟು ಮೀಸಲು ಕ್ಷೇತ್ರಗಳು ಎಷ್ಟು, ಅವು ಯಾವುವು?

ರಾಜ್ಯದ ಒಟ್ಟು ಮೀಸಲು ಕ್ಷೇತ್ರಗಳು ಎಷ್ಟು, ಅವು ಯಾವುವು?

ಬೆಳಗಾವಿ ಜಿಲ್ಲೆ - ಕುಡುಚಿ, ರಾಯಬಾಗ್ (SC) ಯಮಕನಮರಡಿ (ST)
ವಿಜಯಪುರ ಜಿಲ್ಲೆ - ನಾಗಠಾಣ (SC)
ಯಾದಗಿರಿ ಜಿಲ್ಲೆ - ಸುರಪುರ (ST)
ಕಲಬುರಗಿ ಜಿಲ್ಲೆ - ಚಿತ್ತಾಪುರ, ಚಿಂಚೋಳಿ, ಕಲಬುರಗಿ ಗ್ರಾಮೀಣ (SC)
ಬೀದರ್ ಜಿಲ್ಲೆ - ಔರಾದ್ (SC)

51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ

51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ

ರಾಯಚೂರು ಜಿಲ್ಲೆ - ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಮಸ್ಕಿ (ST) ಲಿಂಗಸಗೂರು (SC)
ಕೊಪ್ಪಳ ಜಿಲ್ಲೆ - ಕನಕಗಿರಿ (SC)
ಗದಗ ಜಿಲ್ಲೆ - ಶಿರಹಟ್ಟಿ (SC)
ಧಾರವಾಡ ಜಿಲ್ಲೆ - ಹುಬ್ಬಳ್ಳಿ ಧಾರವಾಡ ಪೂರ್ವ (SC)
ಹಾವೇರಿ ಜಿಲ್ಲೆ - ಹಾವೇರಿ (SC)

2008ರಲ್ಲಿ ನಡೆಸಲಾದ ಜಾತಿ ವಿಂಗಡಣೆ

2008ರಲ್ಲಿ ನಡೆಸಲಾದ ಜಾತಿ ವಿಂಗಡಣೆ

ಬಳ್ಳಾರಿ ಜಿಲ್ಲೆ - ಹಡಗಲಿ, ಹಗರಿಬೊಮ್ಮನಹಳ್ಳಿ (SC) ಕಂಪ್ಲಿ, ಶಿರಗುಪ್ಪ, ಬಳ್ಳಾರಿ, ಸಂಡೂರು, ಕೂಡ್ಲಿಗಿ (ST)
ಚಿತ್ರದುರ್ಗ ಜಿಲ್ಲೆ - ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು (ST) ಹೊಳಲಕೆರೆ (SC)
ಶಿವಮೊಗ್ಗ ಜಿಲ್ಲೆ - ಶಿವಮೊಗ್ಗ ಗ್ರಾಮೀಣ (SC)
ಚಿಕ್ಕಮಗಳೂರು ಜಿಲ್ಲೆ - ಮೂಡಿಗೆರೆ (SC)
ತುಮಕೂರು ಜಿಲ್ಲೆ - ಕೊರಟಗೆರೆ, ಪಾವಗಡ (SC)

SC - 36 ಮತ್ತು ST - 15 ಕ್ಷೇತ್ರಗಳು

SC - 36 ಮತ್ತು ST - 15 ಕ್ಷೇತ್ರಗಳು

ಕೋಲಾರ ಜಿಲ್ಲೆ - ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್ (SC)
ಬೆಂಗಳೂರು ನಗರ - ಪುಲಿಕೇಶಿ ನಗರ, ಸಿ ವಿ ರಾಮನ್ ನಗರ, ಮಹದೇವಪುರ (SC)
ಬೆಂಗಳೂರು ಗ್ರಾಮಾಂತರ - ಆನೇಕಲ್, ದೇವನಹಳ್ಳಿ, ನೆಲಮಂಗಲ (SC)
ಮಂಡ್ಯ ಜಿಲ್ಲೆ - ಮಳವಳ್ಳಿ (SC)
ಹಾಸನ ಜಿಲ್ಲೆ - ಸಕಲೇಶಪುರ (SC)

ದೇಶದಲ್ಲಿ ಪರಿಶಿಷ್ಟ ಜಾತಿಗೆ 624, ಪರಿಶಿಷ್ಟ ಪಂಗಡಕ್ಕೆ 554 ಕ್ಷೇತ್ರಗಳು

ದೇಶದಲ್ಲಿ ಪರಿಶಿಷ್ಟ ಜಾತಿಗೆ 624, ಪರಿಶಿಷ್ಟ ಪಂಗಡಕ್ಕೆ 554 ಕ್ಷೇತ್ರಗಳು

ದಕ್ಷಿಣಕನ್ನಡ ಜಿಲ್ಲೆ - ಸುಳ್ಯ (SC)
ಮೈಸೂರು ಜಿಲ್ಲೆ - ಎಚ್ ಡಿ ಕೋಟೆ (ST) ನಂಜನಗೂಡು, ತಿ ನರಸೀಪುರ (SC)
ಚಾಮರಾಜ ನಗರ ಜಿಲ್ಲೆ - ಕೊಳ್ಳೇಗಾಲ (SC)
ಬಾಗಲಕೋಟೆ ಜಿಲ್ಲೆ - ಮುಧೋಳ (SC)
ದಾವಣಗೆರೆ - ಮಾಯಕೊಂಡ (SC)

ಉಡುಪಿ, ರಾಮನಗರ, ಉತ್ತರಕನ್ನಡ, ಕೊಡಗು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಮೀಸಲು ಕ್ಷೇತ್ರಗಳು ಇಲ್ಲ.

English summary
Reserved Assembly Seats in Karnataka assembly for SC and ST. Out of 224 constituency 36 reserved for SC, 15 for ST and remaining 173 constituency is in general category. Except Udupi, Ramanagara, Uttara Kannada, Kodagu and Chikkaballapura district all the districts has SC/ST category seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X