ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಎಗೆ ಸೇರಿಸದಂತೆ ಸಿಎಂಗೆ ಮನವಿ

|
Google Oneindia Kannada News

ಬೆಂಗಳೂರು ಆಗಸ್ಟ್‌ 19: ಕಾಂತರಾಜ್‌ ವರದಿಯನ್ನು ಜಾರಿಗೆ ತನ್ನಿ ಹಾಗೂ ಬಲಿಷ್ಠ ಸಮುದಾಯಗಳನ್ನು ಪ್ರವರ್ಗ 2 ಏ ಗೆ ಸೇರಿಸಬಾರದಂತೆ ಆಗ್ರಹಿಸಿ ಇಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್‌ ಮಾತನಾಡಿ, ''ರಾಜ್ಯದಲ್ಲಿ ಈಗಾಗಲೇ ನಡೆಸಿರುವ ಕಾಂತರಾಜ್‌ ವರದಿಯನ್ನು ಜಾರಿಗೊಳಿಸಬೇಕು. ಆ ಮೂಲಕ ಜಾತಿಗೆ ಅನುಗುಣವಾಗಿ ಸರಕಾರದಲ್ಲಿ ಅನುಕೂಲವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ, 2 ಏ ಗೆ ಪ್ರಬಲ ಜಾತಿಗಳನ್ನು ಸೇರಿಸಬಾರದು. ಹಾಗೆಯೇ, ಅತಿ ಹಿಂದುಳಿದ ವರ್ಗಗಳ ಮಠ ಮಾನ್ಯಗಳಿಗೆ ಸಂಘ ಸಂಸ್ಥೆಗಳೀಗೆ ಪ್ರಬಲ ಜಾತಿಗಳಿಗೆ ಕೊಟ್ಟಂತೆಯೇ ಅನುದಾನ ಕೋಡಬೇಕು. ಸಮುದಾಯ ಭವನ ವಿದ್ಯಾರ್ಥಿ ಭವನ ಸ್ಥಾಪನೆಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇವೆ,'' ಎಂದು ಹೇಳಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ

ಮುಖ್ಯಮಂತ್ರಿ ಚಂದ್ರು ಮಾತನಾಡಿ

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಈ ನಾಡಿನಲ್ಲಿ ಆತಿ ಸಣ್ಣ ಹಾಗೂ ಅತಿ ಸೂಕ್ಷ್ಮ ಸಮುದಾಯಗಳಿವೆ, ಧ್ವನಿಯೇ ಇಲ್ಲದ ಈ ಅಸಂಘಟಿತ ಸಮುದಾಯಗಳು ತಮಗೆ ಆಸ್ಮಿತೆಯೇ ಇಲ್ಲದೆ ಸರ್ಕಾರದ ಯಾವುದೇ ನೆರವು, ಸಹಕಾರ, ಅನುದಾನ, ಮೀಸಲಾತಿಗಳನ್ನು ಪಡೆಯುವುದರಲ್ಲಿ ವಿಫಲವಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಹೊರತುಪಡಿಸಿ, ಧಾರ್ಮಿಕ ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ "ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಐದು ಪ್ರವರ್ಗಗಳಿವೆ, ಈ ಐದೂ ಪ್ರವರ್ಗಗಳಿಗೆ ಶೇಕಡಾ 32% ಮೀಸಲಾತಿ ಇದೆ, ಅದರಲಿ, ಪ್ರವರ್ಗ ಒಂದರಲ್ಲಿ 95 ಜಾತಿಗಳಿದ್ದು 4% ಮೀಸಲಾತಿ ಇದೆ ಅಂತೆಯೇ ಪ್ರವರ್ಗ 2(a) ನಲ್ಲಿ 102 ಜಾತಿಗಳಿದ್ದು, 15% ಮೀಸಲಾತಿ ಇದೆ. ಪ್ರವರ್ಗ 2(b) ನಲ್ಲಿ ಮುಸ್ಲಿಂ ಸಮುದಾಯವಿದ್ದು ಶೇಕಡಾ 4% ಮೀಸಲಾತಿ ಇದೆ.

ಕನ್ನಡಿಗರ ಗಮನಕ್ಕೆ: ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ & ಉದ್ಯೋಗಾವಕಾಶಗಳುಕನ್ನಡಿಗರ ಗಮನಕ್ಕೆ: ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ & ಉದ್ಯೋಗಾವಕಾಶಗಳು

ಪ್ರವರ್ಗ 3(a) ನಲ್ಲಿ ಒಕ್ಕಲಿಗರು ಮತ್ತಿತರಿದ್ದಾರೆ

ಪ್ರವರ್ಗ 3(a) ನಲ್ಲಿ ಒಕ್ಕಲಿಗರು ಮತ್ತಿತರಿದ್ದಾರೆ

ಪ್ರವರ್ಗ 3(a) ನಲ್ಲಿ ಒಕ್ಕಲಿಗರು ಮತ್ತಿತರಿದ್ದು ಶೇಕಡಾ 4% ಮತ್ತು ಪ್ರವರ್ಗ 3(b) ನಲ್ಲಿ ವೀರಶೈವ ಲಿಂಗಾಯಿತ ಮತ್ತಿತರ ಜಾತಿಗಳಿದ್ದು ಶೇಕಡಾ 5% ಮೀಸಲಾತಿ ಇದೆ. ದುರಂತವೆಂದರೆ ಈ ಪಟ್ಟಿಯಲ್ಲಿರುವ ಬಲಿಷ್ಟ ಮತ್ತು ಸಂಘಟಿತ ಜಾತಿಗಳು ಸಹಜವಾಗಿಯೇ ಪ್ರಾತಿನಿದ್ಯದ ಫಲಗಳನ್ನು ಕಾಣುತ್ತಿದ್ದು, ಪ್ರವರ್ಗ ಒಂದು ಮತ್ತು 2(a) ನಲ್ಲಿರುವ ಅತಿ ಹಿಂದುಳಿದ ಜಾತಿಗಳು ಅವಕಾಶ ವಂಚಿತವಾಗಿವೆ.

ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರವರ್ಗಗಳನ್ನು ಪುನರ್‌ ವರ್ಗೀಕರಣ ಮಾಡುವ ಅವಶ್ಯಕತೆ ಇದೆ. ಇದರೊಂದಿಗೆ ಸದರಿ ಪ್ರವರ್ಗಗಳು ಹಿಂದುಳಿದ ವರ್ಗಗಳ ಯಾವುದೇ ಆಯೋಗದ ಶಿಫಾರಸಿನ ಮೇಲೆ ಆದವುಗಳಲ್ಲ. ಈ ಕಾರಣಕ್ಕೆ ಇಲ್ಲಿನ ವರ್ಗೀಕರಣ ಅತ್ಯಂತ ಅವೈಜ್ಞಾನಿಕವಾದುದು ಮತ್ತು ಕುಲಶಾಸ್ತ್ರೀಯ ಅಧ್ಯಯನದ ದೃಷ್ಟಿಯೀಂದಲೂ ಅಸಮರ್ಪಕವಾದ್ದು ಎಂದು ಹೇಳಿದರು.

ಡಾ ಸಿ ಎಸ್‌ ದ್ವಾರಕಾನಾಥ್‌ ಮಾತನಾಡಿ

ಡಾ ಸಿ ಎಸ್‌ ದ್ವಾರಕಾನಾಥ್‌ ಮಾತನಾಡಿ

ವೇದಿಕೆಯ ಗೌರವ ಸಲಹೆಗಾರರಾದ ಡಾ ಸಿ ಎಸ್‌ ದ್ವಾರಕಾನಾಥ್‌ ಮಾತನಾಡಿ, ''ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ಸಮರ್ಪಕವಾದಂತಹ ಧ್ವನಿ ಎತ್ತುವಂತಹ ಜನರಿಲ್ಲ. ಈ ವರ್ಗಗಳಿಗೆ ದೊರಕಬೇಕಾದಂತಹ ಮೀಸಲಾತಿಯನ್ನು ಕಿತ್ತುಕೊಂಡು ಪ್ರಬಲ ಜಾತಿಗಳಿಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ತಂದಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮ ಎಲ್ಲಾ ಬೇಡಿಕೆಯನ್ನು ಸಾವಧಾನವಾಗಿ ಕೇಳಿಸಿಕೊಂಡಿದ್ದು ಭರವಸೆ ನೀಡಿದ್ದಾರೆ,'' ಎಂದು ಹೇಳಿದರು.

ಸಣ್ಣ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳೋದು ಸರಿಯಲ್ಲ: ಎಂಎಂ ಚಂದ್ರುಸಣ್ಣ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳೋದು ಸರಿಯಲ್ಲ: ಎಂಎಂ ಚಂದ್ರು

Recommended Video

David Warner ಹಂಚಿಕೊಂಡ ಹೊಸ ವಿಡಿಯೋ ನೋಡಿ ಕನ್ನಡಿರು ಖುಷ್ | Oneindia Kannada
ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು

ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಪ್ರದಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವ ಸಲಹೆಗಾರರಾದ ಡಾ. ಸಿ ಎಸ್ ದ್ವಾರಕಾನಾಥ್, ಗೌರವ ಅಧ್ಯಕ್ಷ ರಾದ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರಾದ ಎಂ ಸಿ ವೇಣುಗೋಪಾಲ್, ಎಂ ಎಲ್ ಸಿ ಪಿ ಆರ್ ರಮೇಶ್, ಮಾಜಿ ಶಾಸಕರಾದ ನೆ ಲ ನರೇಂದ್ರ ಬಾಬು, ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

English summary
Backward Classes President Mukyamantri Chandru, Senior Advocate CS Dwarakanath demanded CM Basavaraj Bommai to consider and implement Social and Educational Survey, Don't induct prominent castes in 2A category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X