ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ರಫ್ತು ನಿಷೇಧ ವಾಪಸ್ ಪಡೆಯಲು ಸಿಎಂಗೆ ಮನವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ನಿಷೇಧವನ್ನು ಹಿಂಪಡೆಯುವಂತೆ ಕೋಲಾರ ಸಂಸದ ಮುನಿಸ್ವಾಮಿ ಬಿ. ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ. ಈರುಳ್ಳಿ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ ರಫ್ತನ್ನು ನಿಷೇಧ ಮಾಡಲಾಗಿದೆ.

ಗುರುವಾರ ರೈತರ ನಿಯೋಗದ ಜೊತೆ ಕೋಲಾರ ಸಂಸದರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದರು. ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ನಿಷೇಧವನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದರು.

ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

Request To Lift Ban On Bangalore Rose Onions

ಬೆಂಗಳೂರು ಗುಲಾಬಿ ಬಣ್ಣದ ಈರುಳ್ಳಿಯನ್ನು ರಫ್ತು ಉದ್ದೇಶಕ್ಕಾಗಿ ಮಾತ್ರ ಬೆಳೆಸಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದು ಮೌಲ್ಯವನ್ನು ಹೊಂದಿರುವುದಿಲ್ಲ. ಸಾಲ ಮಾಡಿ ಹೂಡಿಕೆ ಮಾಡಿದ ರೈತರು ರಫ್ತು ನಿಷೇಧಿಸಿದರೆ ಸಾಲ ಮರುಪಾವತಿಸಲು ಕಷ್ಟವಾಗುತ್ತದೆ ಎಂದು ವಿವರಿಸಲಾಯಿತು.

ಸರ್ಕಾರದಿಂದ ಈರುಳ್ಳಿ ಮಾರಾಟ; 5 ಕೆಜಿ ಮಾತ್ರ ಖರೀದಿ, ದರ 23 ರೂ. ಸರ್ಕಾರದಿಂದ ಈರುಳ್ಳಿ ಮಾರಾಟ; 5 ಕೆಜಿ ಮಾತ್ರ ಖರೀದಿ, ದರ 23 ರೂ.

ರೈತರ ಹಿತದೃಷ್ಟಿಯಿಂದ ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ನಿಷೇಧವನ್ನು ಹಿಂಪಡೆಯುವಂತೆ ಯಡಿಯೂರಪ್ಪ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ರೈತರು ಹಾಜರಿದ್ದರು.

 ಈರುಳ್ಳಿ ದರ ಹೆಚ್ಚಳ: ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಮಾರಾಟ ಈರುಳ್ಳಿ ದರ ಹೆಚ್ಚಳ: ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಮಾರಾಟ

ದೇಶಾದ್ಯಂತ ಹೆಚ್ಚಾಗಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧಗೊಳಿಸಿದೆ. ಈರುಳ್ಳಿ ಚಿಲ್ಲರೆ ಮಾರಾಟದ ದರ ಗರಿಷ್ಠ 80 ರೂ. ತನಕ ತಲುಪಿತ್ತು. ಆದ್ದರಿಂದ, ತಕ್ಷಣದಿಂದಲೇ ಜಾರಿಗೆ ಬರುವಂತೆ ರಫ್ತು ನಿಷೇಧ ಮಾಡಲಾಗಿತ್ತು.

ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ರಾಜ್ಯ ಸರ್ಕಾರಗಳಿಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ ಕೊಟ್ಟಿದೆ.

ಕನಿಷ್ಠ ರಫ್ತು ದರಕ್ಕಿಂತಲೂ ಕಡಿಮೆ ಬೆಲೆಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಭಾರತ ಈರುಳ್ಳಿ ರಫ್ತು ಮಾಡುತ್ತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಉಂಟಾದ ಪ್ರವಾಹದ ಕಾರಣ ಬೆಳೆ ನಾಶವಾಗಿದ್ದು, ದರ ಹೆಚ್ಚಾಗಿದೆ.

English summary
Kolar BJP MP Muniswamy along with farmers met Karnataka Chief Minister B.S.Yediyurappa and requested him for the relaxation of ban on export of Bangalore rose onions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X