ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪು 'ಸ್ತಬ್ದ' ಚಿತ್ರ ಏಕೆ? ಟ್ವಿಟ್ಟರ್ ನಲ್ಲಿ ಕದನ

By Mahesh
|
Google Oneindia Kannada News

ಬೆಂಗಳೂರು, ಜ.26: ದೆಹಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜಪಥದಿಂದ ಕೆಂಪುಕೋಟೆ ತನಕ ಸಾಗುವ ಸ್ತಬ್ದ ಚಿತ್ರಕ್ಕೆ ತನ್ನದ ಆದ ಮಹತ್ವ ಇರುತ್ತದೆ. ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ಸ್ತಬ್ದಚಿತ್ರವನ್ನು ಸರ್ಕಾರದ ಇಲಾಖೆಗಳು ಆಯ್ಕೆ ಮಾಡಿ ಕಳಿಸುತ್ತವೆ. ಆದರೆ, ಈ ರೀತಿ ಕಳಿಸಿದ ಸ್ತಬ್ದಚಿತ್ರಗಳ ವಿರುದ್ಧ ಸಾರ್ವಜನಿಕರು ದನಿ ಎತ್ತಿದ್ದು ಅಪರೂಪ. ಈಗೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಜನತೆಗೆ ವಾಕ್ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಈ ಬಾರಿಯ ಕರ್ನಾಟಕದ ಸ್ತಬ್ದಚಿತ್ರ' ಟಿಪ್ಪು ಸುಲ್ತಾನ್' ಬೇಕಿತ್ತಾ? ಎಂಬ ಪರ ವಿರೋಧ ಚರ್ಚೆ ಬಿಸಿ ಬಿಸಿಯಾಗಿ ಸಾಗಿದೆ.

ದೆಹಲಿ ನಡೆಯುವ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ತಬ್ದ ಚಿತ್ರಕ್ಕೆ ಆಯ್ಕೆಗೊಳ್ಳುವುದು ಸುಲಭದ ಮಾತಲ್ಲ. ಅಲ್ಲದೇ ಇಡೀ ಭಾರತದಲ್ಲಿ ಕೇವಲ 14 ರಾಜ್ಯಗಳು ಮಾತ್ರ ಸ್ತಬ್ದ ಚಿತ್ರ ಸ್ಪರ್ಧೆ/ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಇದಕ್ಕಾಗಿಯೇ ಕೇಂದ್ರ ರಕ್ಷಣಾ ಇಲಾಖೆಯ ಪ್ರಮುಖ ಅಧಿ ಕಾರಿಗಳನ್ನೊಳಗೊಂಡ ಆಯ್ಕೆ ಸಮಿತಿ ಇರುತ್ತದೆ.

ಎಲ್ಲ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಸ್ತಬ್ದ ಚಿತ್ರಗಳ ಭಾಗವಹಿಸುವಿಕೆಯನ್ನು ಪ್ರತಿಪಾದಿಸುತ್ತವೆ. ಆಯ್ಕೆ ಸಮಿತಿಯು ಇದಕ್ಕಾಗಿ ಹತ್ತಾರು ಬಾರಿ ಸಭೆ ಸೇರಿ, ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ. ಸ್ತಬ್ದ ಚಿತ್ರದ ವಿಷಯ, ಗುಣಮಟ್ಟ, ಇತಿಹಾಸ, ಪ್ರಾಮುಖ್ಯತೆ ಇವುಗಳ ಆಧಾರದ ಮೇಲೆ ಅಂತಿಮವಾಗಿ ಸ್ತಬ್ದ ಚಿತ್ರಗಳನ್ನು ಸಮಿತಿಯು ಅಂತಿಮವಾಗಿ ಆಯ್ಕೆಗೊಳಿಸುತ್ತದೆ. ಕಳೆದ ಬಾರಿ ದಕ್ಷಿಣ ಭಾರತದಿಂದ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಮಾತ್ರ ಸ್ತಬ್ದ ಚಿತ್ರ ಪ್ರತಿನಿಧಿಸಲು ಆಯ್ಕೆಯಾಗಿತ್ತು. ಈ ಬಾರಿ ಕೂಡಾ ಕರ್ನಾಟಕಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ಟಿಪ್ಪು ಸುಲ್ತಾನ್ ಸ್ತಬ್ದ ಚಿತ್ರ ಏಕಿಷ್ಟು ಸದ್ದು ಮಾಡುತ್ತಿದೆ. ಯಾರು ಇದನ್ನು ನಿರ್ಮಿಸಿದ್ದು, ಯಾರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಮುಂದೆ ಓದಿ...

ಟಿಪ್ಪು ಸುಲ್ತಾನ್ 'ಸ್ತಬ್ದ' ಚಿತ್ರ ಏಕೆ? ಟ್ವಿಟ್ಟರ್ ನಲ್ಲಿ ಕದನ

ಆರು ಕೋಟಿ ಕನ್ನಡಿಗರಿಗೆ ಸಾಮೂಹಿಕ ಹತ್ಯೆ ನಡೆಸಿದ ಟಿಪ್ಪು ಸುಲ್ತಾನ್ ಒಬ್ಬನೇ ಸಿಕ್ಕಿದ್ದಾ?

ರಾಜ್ಯದ ನಾಲ್ಕು ಥೀಮ್ ಗಳಲ್ಲಿ ಟಿಪ್ಪು ಚಿತ್ರವೂ ಒಂದು

ರಾಜ್ಯದ ನಾಲ್ಕು ಥೀಮ್ ಗಳಲ್ಲಿ ಟಿಪ್ಪು ಚಿತ್ರವೂ ಒಂದು

ಮೂಡಬಿದರಿಯ ಸಾವಿರ ಕಂಬಗಳ ಬಸದಿ, ಕೊಡಗು ವೀರರ ನಾಡು, 18ನೇ ಶತಮಾನ ಮೈಸೂರು ದಸರಾ ವೈಭವ ಮತ್ತು ಅಪ್ರತಿಮ ಪರಾಕ್ರಮಿ ಟಿಪ್ಪು ಸುಲ್ತಾನ್ ಸೇರಿ 4 ಥೀಮ್ಗಳನ್ನು ದೆಹಲಿಗೆ ಕರ್ನಾಟಕ ಸರ್ಕಾರದಿಂದ ಕಳುಹಿಸಲಾಗಿತ್ತು. ಇದರಲ್ಲಿ 'ಅಪ್ರತಿಮ ಪರಾಕ್ರಮಿ ಟಿಪ್ಪುಸುಲ್ತಾನ್' ಸ್ತಬ್ಧಚಿತ್ರ ಆಯ್ಕೆಯಾಗಿದೆ.

ಟಿಪ್ಪು ಸುಲ್ತಾನ್ ಕಾಲದಲ್ಲಿ ರಕ್ಷಣಾ ಇಲಾಖೆಗೆ ಅಪಾರ ಕೊಡುಗೆ ನೀಡಲಾಗಿದೆ. ಶ್ರೀರಂಗಪಟ್ಟಣದಲ್ಲಿ ಮೊತ್ತ ಮೊದಲ ಬಾರಿಗೆ ರಾಕೆಟ್ ಕೇಂದ್ರ ಸ್ಥಾಪಿಸಿದ ಹೆಗ್ಗಳಿಕೆ ಟಿಪ್ಪುಗೆ ಸಲ್ಲುತ್ತೆ. ವಿಜ್ಞಾನ, ತಂತ್ರಜ್ಞಾನ, ಆಡಳಿತ ವೈಖರಿ ಟಿಪ್ಪು ಸ್ತಬ್ದ ಚಿತ್ರ ಆಯ್ಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ ಆಯ್ಕೆ ಸರಿ

'ಅಪ್ರತಿಮ ಪರಾಕ್ರಮಿ ಟಿಪ್ಪುಸುಲ್ತಾನ್' ಸ್ತಬ್ಧಚಿತ್ರ ಆಯ್ಕೆ ಸರಿಯಾಗಿದೆ. ಟಿಪ್ಪುಗೆ ನನ್ನ ನಮನ

ಕಲಾವಿದ ಶಶಿಧರ ಅಡಪರಿಂದ ನಿರ್ಮಾಣ

ಕಲಾವಿದ ಶಶಿಧರ ಅಡಪರಿಂದ ನಿರ್ಮಾಣ

ಖ್ಯಾತ ಕಲಾ ವಿನ್ಯಾಸಕ ಶಶಿಧರ ಅಡಪ ಅವರು ನವದೆಹಲಿಯ ರಾಷ್ಟ್ರೀಯ ರಂಗಶಾಲಾ ಮೈದಾನದಲ್ಲಿ ಸ್ತಬ್ಧ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಶೌರ್ಯ, ಸಾಹಸವನ್ನು ದೇಶಕ್ಕೆ ಸಾರುವ ಅವಕಾಶ ಈ ಸ್ತಬ್ಧಚಿತ್ರ ದೊರೆತಿದ್ದು, ಟಿಪ್ಪು ಬಗೆಗಿನ ಹಲವು ಮಾಹಿತಿ ಇದೆ. ಬೆಂಗಳೂರಿನ ಸಂಜಯ್ ಮಾರ್ಕೆಟಿಂಗ್ ಕಂಪನಿ ಈ ಸ್ತಬ್ಧಚಿತ್ರ ನಿರ್ಮಾಣದ ಹೊಣೆ ಹೊತ್ತಿತ್ತು. ಸ್ತಬ್ಧ ಚಿತ್ರ ಸಾಗುವ ವೇಳೆ ಕೇಳಿಬಂದ ಹಿನ್ನೆಲೆ ಸಂಗೀತವನ್ನ ವಿ. ಮನೋಹರ್ ಅವರು ನಿರ್ದೇಶಿಸಿದ್ದಾರೆ.

ಹಿಂದುತ್ವವಾದಿಗಳಿಗೆ ಖಾರವಾದ ಪ್ರಶ್ನೆ

ಟಿಪ್ಪು, ಔರಂಗಜೇಬ್ ದೇಶ ದ್ರೋಹಿಗಳಾದರೆ, ಅಡ್ವಾಣಿ, ಠಾಕ್ರೆ ಬಗ್ಗೆ ಏನು ಹೇಳುತ್ತೀರಾ?

ಟಿಪ್ಪು ಆಯ್ಕೆ: ಕಾಂಗ್ರೆಸ್ ಸರ್ಕಾರದ ಕೈವಾಡ

ಟಿಪ್ಪು ಆಯ್ಕೆ: ಕಾಂಗ್ರೆಸ್ ಸರ್ಕಾರದ ಕೈವಾಡ. ಶಿವಾಜಿ, ರಾಣಾ ಪ್ರತಾಪ್ ಒಪ್ಪದ ಕಾಂಗ್ರೆಸ್ ಟಿಪ್ಪುಗೆ ಜೈ ಎನ್ನುವುದು ಏಕೆ?

ಬದಲಾವಣೆ ಸಮಯ ಬಂದಿದೆ, ಟಿಪ್ಪು ಹೆಸರೇಕೆ?

ರಸ್ತೆ, ಪಾರ್ಕ್ ಗೆ ಇಟ್ಟಿರುವ ಟಿಪ್ಪು, ಬಾಬರ್, ಔರಂಗಜೇಬ್ ಹೆಸರನ್ನು ಬದಲಿಸಿ ಬೋಸ್, ಸುಖದೇವ್, ಅಜಾದ್ ಹೆಸರಿಡಿ

ಹಿಂದೂಗಳನ್ನಷ್ಟೇ ಅಲ್ಲ ಕ್ರೈಸ್ತರನ್ನು ಕೊಂದಿದ್ದ ಟಿಪ್ಪು

ಕರ್ನಾಟಕದ ಮಂಗಳೂರಿನಿಂದ ಶ್ರೀರಂಗಪಟ್ಟಣದ ಪ್ರದೇಶದಲ್ಲಿರುವ ಸಾವಿರಾರು ಕ್ರೈಸ್ತರ ಮಾರಣ ಹೋಮ ನಡೆಸ್ಸಿದ್ದ ಟಿಪ್ಪು

ಹಿಂದೂಗಳನ್ನು ಅಧಿಕಾರಿಯಾಗಿಸಿಕೊಂಡಿದ್ದ ಸಮರ್ಥ ರಾಜ

ಹಿಂದೂ ಅಧಿಕಾರಿಗಳನ್ನು ಉನ್ನತ ಹುದ್ದೆಯಲ್ಲಿ ಇರಿಸಿಕೊಂಡಿದ್ದ ಟಿಪ್ಪು ಸಮರ್ಥ ರಾಜನಾಗಿದ್ದ

ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತನಾಗಿದ್ದ

ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತನಾಗಿದ್ದ ನಮಗೆಲ್ಲರಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ್ದ ಈ ಬಗ್ಗೆ ಚರ್ಚೆ ಈಗ ಅಪ್ರಸ್ತುತ

English summary
"Having Tipu Sultan tableu for R-Day is similar to having road named after Aurangzeb in Delhi. Glorifying mass murderers" say one of the tweet. ​Karnataka hopes to maintain its winning streak at the Republic Day parade by presenting a tableau of Tipu Sultan-Tiger of Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X