ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Republic Day 2023: ಕರ್ನಾಟಕದ 20 ಮಂದಿಗೆ ಪೊಲೀಸ್‌ ಪದಕಕ್ಕೆ ಆಯ್ಕೆ

ಪ್ರತಿ ವರ್ಷದಂತೆ ಈ ವರ್ಷದ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ನೀಡಿದ ಪೊಲೀಸರಿಗೆ ಪ್ರಶಸ್ತಿ/ಪದಕಗಳನ್ನು ಘೋಷಿಸಲಾಗಿದೆ. ಹಾಗಾದರೆ ಪದಕ ಗೌರವಕ್ಕೆ ಪಾತ್ರರಾದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮಾಹಿತಿ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಜನವರಿ 25: 74ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ವರ್ಷ ಕರ್ನಾಟಕ ರಾಜ್ಯದಿಂದ ಒಟ್ಟು 20 ಮಂದಿ ಪೊಲೀಸರು ಅತ್ಯುನ್ನತ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಒಬ್ಬರು ರಾ‍ಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆಯಾದರೆ, ಉಳಿದ 19 ಪೊಲೀಸ್ ಅಧಿಕಾರಿಗಳು ಪದಕದ ಗೌರವವಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದಂದೇ ಪ್ರದಾನ ಮಾಡಲಾಗುತ್ತದೆ.

ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅತ್ಯುತ್ತಮ ಪೊಲೀಸರಿಗೆ ಈ ಪ್ರಶಸ್ತಿಗಳು ಹಿಂದಿನಿಂದಲೂ ನೀಡುತ್ತಾ ಬರಲಾಗಿದೆ. ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿಯು ಎಡಿಜಿಪಿ ಶರತ್ ಚಂದ್ರ ಅವರಿಗೆ ಲಭಿಸಿದೆ. ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಹತ್ತಾರು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಅವರು ಮೆಚ್ಚುಗೆಯ ಕಾರ್ಯ ನಿರ್ವಹಿಸಿದ್ದರು. ನಾಳೆ ಗುರುವಾರ (ಜ.26) ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಅವರು ಪದಕ ಸ್ವೀಕರಿಸಲಿದ್ದಾರೆ.

ಬೆಂಗಳೂರು ಗಣರಾಜ್ಯೋತ್ಸವ 2023: ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಪೊಲೀಸ್ ಬಿಗಿ ಭದ್ರತೆ: ಪ್ರತಾಪ್ ರೆಡ್ಡಿಬೆಂಗಳೂರು ಗಣರಾಜ್ಯೋತ್ಸವ 2023: ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಪೊಲೀಸ್ ಬಿಗಿ ಭದ್ರತೆ: ಪ್ರತಾಪ್ ರೆಡ್ಡಿ

ಪೊಲೀಸ್ ಪದಕ ಗೌರವಕ್ಕೆ ಆಯ್ಕೆಯಾದವರ ಪಟ್ಟಿ

ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿ ಜೊತೆಗೆ ಪೊಲೀಸ್ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡಿದವರಿಗೆ ಪೊಲೀಸ್ ಪದಕ ಗೌರವ ಘೋಷಣೆ ಮಾಡಲಾಗಿದೆ. ಈ ಗೌರವಕ್ಕೆ ಆಯ್ಕೆಯಾದವರು ಯಾರು ಎಂಬ ಸಂಪೂರ್ಣ ಮಾಹಿತಿ/ಪಟ್ಟಿ ಹೀಗಿದೆ.

Republic Day 2023: Police medal for 20 policemen in Karnataka, selection list is as follows

* ಸಿದ್ದಲಿಂಗಪ್ಪ ಆರ್‌ ಪಾಟೀಲ್- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ

* ಸಿವಿ ದೀಪಕ್‌- ಡಿಎಸ್‌ಪಿ ಬೆಂಗಳೂರು

* ಎಚ್‌ ವಿಜಯ- ಡಿಎಸ್‌ಪಿ ಬೆಂಗಳೂರು

* ನಾಗರಾಜು- ಡಿಎಸ್‌ಪಿ, ಬೆಂಗಳೂರು

* ಪದ್ಮರಾಜಯ್ಯ ವೀರೇಂದ್ರ ಕುಮಾರ್‌- ಡಿಎಸ್‌ಪಿ, ಬೆಂಗಳೂರು

* ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ, ಬೆಂಗಳೂರು

* ಲಾಂಬೂರಾಂ - ಸಿಜಿ, ಹುಬ್ಬಳ್ಳಿ

* ಬಿ.ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್- ಬೆಂಗಳೂರು ಗ್ರಾಮಾಂತರ

* ಟಿಎ ನಾರಾಯಣ ರಾವ್‌- ಸ್ಪೆಷಲ್‌ ARSI, KSRP, ಬೆಂಗಳೂರು

* ವೆಂಕಟರಮಣಗೌಡ - ARSI, KSRP, ಬೆಂಗಳೂರು

* ಎಸ್.ಎಂ.ಪಾಟೀಲ್- ARSI, KSRP, ಬೆಂಗಳೂರು

* ಗಣೇಶ್‌ ಜನಾರ್ಧನರಾವ್‌- ಇನ್ಸ್‌ಪೆಕ್ಟರ್, ಬೆಂಗಳೂರು

Republic Day 2023: Police medal for 20 policemen in Karnataka, selection list is as follows

* ಆರ್‌.ಪಿ.ಅನಿಲ್- ಸರ್ಕಲ್‌ ಇನ್ಸ್‌ಪೆಕ್ಟರ್, ಬೆಂಗಳೂರು

* ಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್, ಬೆಂಗಳೂರು

* ಕೆ.ಪ್ರಸನ್ನಕುಮಾರ್‌- ಹೆಡ್‌ ಕಾನ್ಸ್ಟೇಬಲ್, ಬೆಂಗಳೂರು

* ಪ್ರಭಾಕರ.ಎಚ್‌- ಹೆಡ್‌ ಕಾನ್ಸ್ಟೇಬಲ್‌, ಬೆಂಗಳೂರು

* ಬಿ.ಟಿ ವರದರಾಜ- ರಿಸರ್ವ್ ಪೊಲೀಸ್‌ ಇನ್ಸ್‌ಪೆಕ್ಟರ್, ಬೆಂಗಳೂರು

* ಡಿ.ಸುಧಾ- WHC, SCRB, ಬೆಂಗಳೂರು

* ಟಿ.ಆರ್‌ ರವಿಕುಮಾರ್- CHC, City Control Room, ಬೆಂಗಳೂರು

English summary
Karnataka Republic Day 2023: Police medal for 20 policemen in Karnataka, selection list is as follows,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X