• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ; 23,558 ಹೊಸ ಕೋವಿಡ್ ಪ್ರಕರಣ ದಾಖಲು

|

ಬೆಂಗಳೂರು, ಏಪ್ರಿಲ್ 21; ಕರ್ನಾಟಕದಲ್ಲಿ 23,558 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 12,22,202ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 116 ಜನರು ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆ ಬುಧವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 6,412 ಜನರು ಡಿಸ್ಚಾರ್ಜ್ ಆಗಿದ್ದಾರೆ. 904 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ

ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,76,188. ಒಟ್ಟು ಸೋಂಕಿತರ ಸಂಖ್ಯೆ 1222202. ಒಟ್ಟು ಗುಣಮುಖಗೊಂಡವರ ಸಂಖ್ಯೆ 1032233. ಇದುವರೆಗೂ ಮೃತಪಟ್ಟವರ ಸಂಖ್ಯೆ 13,762.

ಏಪ್ರಿಲ್ 22 ರಿಂದ ಬ್ಯಾಂಕ್ ಅವಧಿಯಲ್ಲಿ ಬದಲಾವಣೆ ಏಪ್ರಿಲ್ 22 ರಿಂದ ಬ್ಯಾಂಕ್ ಅವಧಿಯಲ್ಲಿ ಬದಲಾವಣೆ

24 ಗಂಟೆಯಲ್ಲಿ 16,899 ಆಂಟಿಜೆನ್, 1,35,382 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿ ಒಟ್ಟು 1,52,281 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ 9820570 ಮಾದರಿಗಳ ಪರೀಕ್ಷೆ ಮಾಡಲಾಗಿದೆ.

ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ 13,640 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,83,675ಕ್ಕೆ ಏರಿಕೆಯಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 1,24,894.

ಬಳ್ಳಾರಿ 792, ಬೆಂಗಳೂರು ಗ್ರಾಮಾಂತರ 544, ದಕ್ಷಿಣ ಕನ್ನಡ 401, ಕಲಬುರಗಿ 757, ಮೈಸೂರು 975, ತುಮಕೂರು 1176, ವಿಜಯಪುರ 335, ಮಂಡ್ಯ 492, ಹಾಸನ 445, ಧಾರವಾಡ 379, ದಾವಣಗೆರೆ 200 ಹೊಸ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ 153, ಬೆಳಗಾವಿ 301, ಬೀದರ್ 202, ಚಾಮರಾಜನಗರ 170, ಚಿಕ್ಕಬಳ್ಳಾಪುರ 221, ಚಿಕ್ಕಮಗಳೂರು 198, ಚಿತ್ರದುರ್ಗ 118, ಗದಗ 72, ಹಾವೇರಿ 27, ಕೊಪ್ಪಳ 133 ಹೊಸ ಪ್ರಕರಣಗಳು ದಾಖಲಾಗಿವೆ.

English summary
According to health bulletin by health department Karnataka reported 23,558 new COVID cases. Total number of cased raised to 12,22,202. Active cases number 1,76,188.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X