ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗತ್ ಸಿಂಗ್ ಕುರಿತ ಪಠ್ಯ; ಶಿಕ್ಷಣ ಸಚಿವರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ 17: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠಗಳನ್ನು ಪುಸ್ತಕದಿಂದ ಕೈಬಿಟ್ಟು ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೆವಾರ್ ಕುರಿತ ಪದ್ಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎನ್ನುವ ಆರೋಪಕ್ಕೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

10ನೇ ತರಗತಿ ಪಠ್ಯಪುಸ್ತಕದಲ್ಲಿ ಭಗತ್‌ ಸಿಂಗ್ ಅವರ ಪಠ್ಯ ತೆಗೆದು ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೆವಾರ್ ಪಠ್ಯ ಅಳವಡಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು.

BC Nagesh Interview : ಕಲಿಕೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡಿಸುವ ಉದ್ದೇಶ ನನ್ನದು: ಬಿ.ಸಿ. ನಾಗೇಶ್BC Nagesh Interview : ಕಲಿಕೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡಿಸುವ ಉದ್ದೇಶ ನನ್ನದು: ಬಿ.ಸಿ. ನಾಗೇಶ್

ವಿವಾದದ ಬಗ್ಗೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕೂಡ ಸ್ಪಷ್ಟನೆ ನೀಡಿದ್ದರು. "ಭಗತ್ ಸಿಂಗ್ ಪಠ್ಯಪುಸ್ತಕ ತೆಗೆದು ಹೆಡಗೆವಾರ್ ಪಠ್ಯ ಅಳವಡಿಕೆ ಮಾಡಿಲ್ಲ, ಆರೋಪ ಮಾಡುವ ಮೊದಲು ಪಠ್ಯಪುಸ್ತಕ ಓದಲಿ" ಎಂದಿದ್ದರು.

ವಿವಾದದ ಬಗ್ಗೆ ಮಂಗಳವಾರ ಕರ್ನಾಟಕ ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆ ನೀಡಿದ್ದು, ಭಗತ್ ಸಿಂಗ್ ಪಠ್ಯ ತೆಗೆದು ಹೆಡಗೆವಾರ್ ಬಗ್ಗೆ ಪಠ್ಯದಲ್ಲಿ ಸೇರಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಶಿಕ್ಷಣ ಇಲಾಖೆಯ ಸ್ಪಷ್ಟನೆ ಏನು?; ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಸಮಿತಿಯು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಹಾಗೂ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಪರಿಷ್ಕರಿಸಿರುತ್ತಾರೆ.

Replaces Of Chapter On Bhagat Sing BC Nagesh Clarification

10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿದ್ದ 'ಭಗತ್‌ಸಿಂಗ್' ಗದ್ಯವನ್ನು ಕೈಬಿಟ್ಟು 'ಹೆಡಗೆವಾರ್'ರವರ ಬಗ್ಗೆ ಗದ್ಯ ಸೇರಿಸಲಾಗಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು. ವಾಸ್ತವವಾಗಿ 'ಭಗತ್‌ಸಿಂಗ್' ಗದ್ಯವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ಇನ್ನೂ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕಾಂಗ್ರೆಸ್‌ ಖಂಡನೆ; ಪಠ್ಯ ಕೈಬಿಟ್ಟಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ತನ್ನ ಅಧಿಕೃತ ಖಾತೆ ಕರ್ನಾಟಕ ಕಾಂಗ್ರೆಸ್ ಮೂಲಕ ಟ್ವೀಟ್ ಮಾಡಿದೆ. ಇದು ಪಠ್ಯ ಪುಸ್ತಕವೇ ಹೊರತು ನಿಮ್ಮ ಸಂಘದ ಪುಸ್ತಕವಲ್ಲ. ಯಾರನ್ನೋ ಪಠ್ಯ ಪುಸ್ತಕ ಸಮಿತಿಯಲ್ಲಿ ಕೂರಿಸಿದ ಪರಿಣಾಮ ಇದು. ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು. ಸರ್ಕಾರ ಇಂತಹ ಹೊಣೆಗೇಡಿಗಳನ್ನು ಪಠ್ಯ ಪುಸ್ತಕ ಸಮಿತಿಯಿಂದ ಹೊರಗಿಡಲಿ ಎಂದು ಒತ್ತಾಯಿಸಿದೆ.

ವಿವಾದದ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್ 'ಭಗತ್ ಸಿಂಗ್ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ಈ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಬದಲು ಬ್ರಿಟೀಷರೊಂದಿಗೆ ಕೈ ಜೋಡಿಸಿದವರ ಪಠ್ಯವನ್ನು ಸೇರಿಸಲಾಗಿದೆ. ಇದು ನಿಜವಾದ ದೇಶದ್ರೋಹಿಗಳ ಕೆಲಸ. ನಿಮ್ಮ ದೇಶದ್ರೋಹ ಜನತೆಗೆ ತಿಳಿಯಲಿದೆ' ಎಂದು ಹೇಳಿದೆ.

Replaces Of Chapter On Bhagat Sing BC Nagesh Clarification

ಕಾಂಗ್ರೆಸ್ ಆರೋಪಕ್ಕೆ ಶಿಕ್ಷಣ ಸಚಿವರ ಸ್ಪಷ್ಟನೆ ಬೆನ್ನಲ್ಲೇ ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ್ದು, 'ಡಿಯರ್ ಕಾಂಗ್ರೆಸ್ ಫೇಕ್ ನ್ಯೂಸ್ ಫ್ಯಾಕ್ಟರಿ, ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ. ಭಗತ್‌ ಸಿಂಗ್‌ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು. ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು?' ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದೆ.

English summary
Karnataka education minister B. C. Nagesh clarification on replaces chapter on Bhagat Sing in 10th class books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X