ಮಲ್ಟಿಪ್ಲೆಕ್ಸ್ ನಲ್ಲಿ ಎಳೆನೀರು ಮಾರಾಟಕ್ಕೆ ಬಿಜೆಪಿ ಆಗ್ರಹ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 16: ಮಲ್ಟಿಪ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬದಲಿಗೆ ಎಳೆನೀರು ಮಾರಾಟ ಮಾಡುವಂತೆ ಬಿಜೆಪಿ ಶಾಸಕ ಎಂಕೆ ಪ್ರಾಣೇಶ್ ಅವರು ವಿಧಾನಪರಿಷತ್ ನಲ್ಲಿ ಇಂದು (ಮಾರ್ಚ್ 16) ಆಗ್ರಹಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರ್ ಖಂಡ್ರೆ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅರ್ಹ ಪದಾರ್ಥಗಳ ಜೊತೆಗೆ ಎಳೆನೀರು ಮಾರಾಟ ಮಾಡಲು ಅವಕಾಶ ನೀಡುವ ಭರವಸೆ ನೀಡಿದ್ದಾರೆ.

‘Replace soft drinks with tender coconut water in multiplexes demands BJP

ರಾಜ್ಯದ ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಲ್ಟಿಪ್ಲೆಕ್ಸ್ ಮತ್ತು ಚಲನಚಿತ್ರ ಮಂದಿರಗಳಲ್ಲಿ ಎಳನೀರು ಮಾರಲು ಅವಕಾಶ ನೀಡಿ ಸುತ್ತೋಲೆ ಹೊರಡಿಸಲಾಗುವುದು ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮಿಗಳ ರಾಜ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ತಿಳಿಸಿದರು.

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಗುರುವಾರ ನಡೆದ ಅಧಿವೇಶನದಲ್ಲಿ ಶಾಸಕ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಅವರ ಅನುಪಸ್ಥಿತಿಯಲ್ಲಿ ಈಶ್ವರ ಖಂಡ್ರೆ ಅವರು ಉತ್ತರಿಸಿದರು.

ಮಲ್ಟಿಪ್ಲೆಕ್ಸ್ ಮತ್ತು ಚಲನಚಿತ್ರ ಮಂದಿರಗಳಲ್ಲಿ ಕೂಲ್ಡ್ ಡ್ರಿಂಕ್ಸ್ ಮಾರಾಟ ರದ್ದುಪಡಿಸಲು ಈಗಿನ ನಿಯಮಗಳಲ್ಲಿ ಅವಕಾಶವಿರುವುದಿಲ್ಲ, ಅರ್ಹ ಪದಾರ್ಥಗಳ ಜೊತೆಗೆ ಎಳನೀರನ್ನು ಮಾರಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Replace soft drinks with tender coconut water in multiplexes demands BJP. Allowing sale of tender coconut water in multiplexes would help farmers said BJP MLC MK Pranesh.
Please Wait while comments are loading...