ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆ

|
Google Oneindia Kannada News

Recommended Video

ರೇಣುಕಾಚಾರ್ಯ ಕೇಳಿದ್ದೇನು..! ಯಡಿಯೂರಪ್ಪ ಕೊಟ್ಟಿದ್ದೇನು..? | Renukacharya

ಬೆಂಗಳೂರು, ಸೆಪ್ಟೆಂಬರ್ 06: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದ ರೇಣುಕಾಚಾರ್ಯ ಅವರಿಗೆ ಕೊನೆಗೂ ಸ್ಥಾನವೊಂದನ್ನು ನೀಡಿ ಸುಮ್ಮನಾಗಿಸಲಾಗಿಸುವ ಪ್ರಯತ್ನ ಮಾಡಲಾಗಿದೆ.

ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಅವರಿಗೆ ಸಂಪುಟ ದರ್ಜೆ ಸ್ಥಾನ-ಮಾನ ನೀಡುವಂತೆಯೂ ಆದೇಶ ನೀಡಲಾಗಿದೆ.

ಅಬಕಾರಿ ಸಚಿವ ನಾಗೇಶ್ ಹೇಳಿಕೆ ವಿರುದ್ಧ ರೇಣುಕಾಚಾರ್ಯ ಅಸಮಾಧಾನಅಬಕಾರಿ ಸಚಿವ ನಾಗೇಶ್ ಹೇಳಿಕೆ ವಿರುದ್ಧ ರೇಣುಕಾಚಾರ್ಯ ಅಸಮಾಧಾನ

ಇಂದು ಆದೇಶ ಹೊರಬಿದ್ದಿದ್ದು, ರಾಜ್ಯಪಾಲರ ಆದೇಶದಂತೆ ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಕಾರ್ಯದರ್ಶಿಗಳು ಆದೇಶ ಜಾರಿ ಮಾಡಿದ್ದಾರೆ. ರೇಣುಕಾಚಾರ್ಯ ಅವರಿಗೆ ಸಚಿವರಿಗೆ ಸಿಗುವ ಸೌಲಭ್ಯಗಳೆಲ್ಲವೂ ದೊರಕಲಿವೆ.

Renukacharya Appointed As Political Secretory Of CM Yediyurappa

ಈ ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಗೆ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಅವರಿಗೆ ಸಚಿವ ಸಂಪುಟ ದರ್ಜೆ ನೀಡಲಾಗಿರಲಿಲ್ಲ. ಬದಲಿಗೆ ಕೇವಲ ನಾಮ್‌ಕೇವಾಸ್ತೆ ಸ್ಥಾನವನ್ನಾಗಿ ಮಾತ್ರವೇ ಅದನ್ನು ಇಡಲಾಗಿತ್ತು.

ಜಮೀರ್, ರೇಣುಕಾ, ಇಬ್ರಾಹಿಂ, ಎಚ್ ಡಿ ರೇವಣ್ಣಗೆ ಲೋಕಾಯುಕ್ತ ನೋಟಿಸ್ಜಮೀರ್, ರೇಣುಕಾ, ಇಬ್ರಾಹಿಂ, ಎಚ್ ಡಿ ರೇವಣ್ಣಗೆ ಲೋಕಾಯುಕ್ತ ನೋಟಿಸ್

ಆದರೆ ರೇಣುಕಾಚಾರ್ಯ ಅವರು ಸಚಿವ ಸ್ಥಾನಕ್ಕಾಗಿ ಅಸಮಾಧಾನ ಹೊಂದಿದ್ದ ಕಾರಣ, ಅದೇ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಚಿವ ದರ್ಜೆಯನ್ನು ನೀಡಲಾಗಿದೆ.

English summary
Former Minister Renukacharya demanded for minister post but BJP appointed him as political secretory of CM Yediyurappa with cabinet minister grade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X