ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರು ಬದಲಾವಣೆ

|
Google Oneindia Kannada News

ಬೆಂಗಳೂರು, ಜುಲೈ 07; ಕರ್ನಾಟಕ ಸರ್ಕಾರ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಬದಲಾವಣೆ ಮಾಡಿದೆ. ಕಲಬುರಗಿಯಲ್ಲಿ ಸಂಸ್ಥೆಯ ಪ್ರಧಾನ ಕಚೇರಿ ಇದ್ದು, 53 ಡಿಪೋಗಳು ಸಂಸ್ಥೆಯ ಅಡಿಯಲ್ಲಿವೆ.

ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಸ್ತೆ ಸಾರಿಗೆ ನಿಗಮಗಳ ಅಧಿ ನಿಯಮ 1950ರ (1950ರ ಕೇಂದ್ರ ಅಧಿನಿಯಮ 64 ಕಲಂ 3ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೆಸರು ಬದಲಿಸಲಾಗಿದೆ.

ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್ ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್‍ ಟಿಕೆಟ್ ದರ ಆಫರ್

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು 'ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ' ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮರು ನಾಮಕರಣ ಮಾಡಲಾಗಿದೆ. ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರಿ ಬಸ್‌ ಟಿಕೆಟ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಜಾಗೃತಿ ಸರ್ಕಾರಿ ಬಸ್‌ ಟಿಕೆಟ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಜಾಗೃತಿ

'ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ'ದ ವ್ಯಾಪ್ತಿಯಲ್ಲಿ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಹೊಸಪೇಟೆ ಒಳಪಡುತ್ತದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 15/08/2000ರಂದು ಸ್ಥಾಪಿಸಲಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿತ್ತು.

ಗೋವಾಕ್ಕೆ ಬಸ್ ಸಂಚಾರ ಆರಂಭಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗೋವಾಕ್ಕೆ ಬಸ್ ಸಂಚಾರ ಆರಂಭಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಸಂಸ್ಥೆಯ ಇತಿಹಾಸ

ಸಂಸ್ಥೆಯ ಇತಿಹಾಸ

ಮೈಸೂರು ರಾಜ್ಯದ ಪ್ರಯಾಣಿಕರ ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆಯನ್ನು 12ನೇ ಸೆಪ್ಟೆಂಬರ್ 1948 ರಂದು 120 ಬಸ್ಸುಗಳೊಂದಿಗೆ ಉದ್ಘಾಟಿಸಲಾಯಿತು. ಮೈಸೂರು ಸರ್ಕಾರದ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಸಾರಿಗೆಯನ್ನು ತರುವಾಯ 1961ರ ಆಗಸ್ಟ್ 1ರಂದು ರಸ್ತೆ ಸಾರಿಗೆ ನಿಗಮ ಕಾಯ್ದೆ-1950 ರ ಸೆಕ್ಷನ್ 3ರ ಪ್ರಕಾರ ಸ್ವತಂತ್ರ ನಿಗಮವನ್ನಾಗಿ ಪರಿವರ್ತಿಸಲಾಯಿತು ಹಾಗೂ ಎಂ.ಎಸ್.ಆರ್. ಟಿ.ಸಿ (ಈಗ ಕೆ.ಎಸ್.ಆರ್.ಟಿ.ಸಿ) ಎಂದು ಹೆಸರಿಸಲಾಯಿತು.

ಸಂಸ್ಥೆಗಳ ವಿಭಜನೆ

ಸಂಸ್ಥೆಗಳ ವಿಭಜನೆ

ಮೊದಲು ಕೆ. ಎಸ್. ಆರ್‌. ಟಿ. ಸಿ ಮಾತ್ರ ವಿತ್ತು. ರಾಜ್ಯ ಸರ್ಕಾರವು ಕ.ರಾ.ರ.ಸಾ ಸಂಸ್ಥೆ ಅನ್ನು ವಿಂಗಡಿಸಿ 15-08-1997 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 15/08/2000ರಂದು ಕಲಬುರಗಿಯಲ್ಲಿ ಸ್ಥಾಪಿಸಿ 1/10/2000ರಂದು ಆರ್ಥಿಕವಾಗಿ ಸ್ವತಂತ್ರಗೊಳಿಸಲಾಯಿತು.

ಬಸ್, ಡಿಪೋ ವಾಹನಗಳ ಮಾಹಿತಿ

ಬಸ್, ಡಿಪೋ ವಾಹನಗಳ ಮಾಹಿತಿ

ಸಂಸ್ಥೆ ಮೊದಲು ಕಲಬುರಗಿಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು 6 ವಿಭಾಗಗಳು, 26 ಡಿಪೋ, 74 ಬಸ್ ನಿಲ್ದಾಣಗಳು, 82 2027 ವಾಹನಗಳನ್ನು ಹೊಂದಿತ್ತು. 2019-2020ರ ಮಾಹಿತಿಯಂತೆ ಕೇಂದ್ರ ಕಚೇರಿಯ ಜೊತೆ 9 ವಿಭಾಗಗಳು, 53 ಡಿಪೋಗಳು, 152 ಬಸ್ ನಿಲ್ದಾಣಗಳು, ಯಾದಗಿರಿಯಲ್ಲಿ ಪ್ರಾದೇಶಿಕ ಕಾರ್ಯಾಗಾರ, ಹುಮನಾಬಾದ್‌ನಲ್ಲಿ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದೆ.

Recommended Video

ಹೆಂಡತಿ ಬೈದು ಬುದ್ಧಿ ಹೇಳಿದ ಮೇಲೆ ಕ್ಷಮೆ ಕೇಳಿದ ದಿನೇಶ್ ಕಾರ್ತಿಕ್! | Oneindia Kannada
ಎಷ್ಟು ಉದ್ಯೋಗಿಗಳು ಇದ್ದಾರೆ?

ಎಷ್ಟು ಉದ್ಯೋಗಿಗಳು ಇದ್ದಾರೆ?

ಪ್ರಸ್ತುತ 4,700 ವಾಹನಗಳು, 20,574 ಉದ್ಯೋಗಿಗಳು ಸಂಸ್ಥೆಯಲ್ಲಿದ್ದಾರೆ. ದಿನಕ್ಕೆ 4254 ಟ್ರಿಪ್ ಬಸ್‌ಗಳು ಸಂಚಾರ ನಡೆಸಲಿದ್ದು, 13.87 ಲಕ್ಷ ಕಿ.ಮೀಗಳನ್ನು ಕ್ರಮಿಸುತ್ತವೆ. ಸುಮಾರು 13.58 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಮಹಾರಾಷ್ಟ್ರಕ್ಕೆ 434, ತೆಲಂಗಾಣಕ್ಕೆ 236, ಆಂಧ್ರಪ್ರದೇಶಕ್ಕೆ 139, ತಮಿಳುನಾಡಿಗೆ 2 ಹಾಗೂ ಗೋವಾ ರಾಜ್ಯಕ್ಕೆ 40 ಬಸ್‌ಗಳು ಓಡುತ್ತವೆ.

English summary
Karnataka renames NEKRTC (North Eastern Karnataka Road Transport Corporation) as Kalyana Karnataka Road Transport Corporation (KKRTC). Headquartered in Kalaburagi, has 4,700 buses, 152 bus stands, 52 depots, and 9 divisional offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X