ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ಹೋರಾಟ : ರೈತರ ಬಿಡುಗಡೆ ಬಗ್ಗೆ ಆ.10ರಂದು ತೀರ್ಮಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 08 : 'ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಬಗ್ಗೆ ಆ.10ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ವಿಧಾನಸೌಧದ ಮುಂದೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಮತ್ತು ಮಹಿಳೆಯರು ಪ್ರತಿಭಟನೆ ನಡೆಸಿದರು. ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು, ಜೈಲಿನಲ್ಲಿರುವ ರೈತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.[ಮಹದಾಯಿ: ಸರ್ವಪಕ್ಷಗಳ ಸಭೆ ತೆಗೆದುಕೊಂಡ ನಿರ್ಧಾರವೇನು?]

siddaramaiah

ಪ್ರತಿಭಟನಾನಿರತರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು, 'ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್‌ ಪಡೆಯುವ ಕುರಿತು ಆಗಸ್ಟ್ 10ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.[ಯಮನೂರು ರೈತರಿಗೆ ಸಾಂತ್ವನ ಹೇಳಿದ ವಾಟಾಳ್ ನಾಗರಾಜ್]

ಸರ್ವಪಕ್ಷ ಸಭೆಯಲ್ಲಿಯೂ ಚರ್ಚೆ : ಮಹದಾಯಿ ಹೋರಾಟದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿಯೂ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಧಾರವಾಡ ಜಿಲ್ಲೆಯ ಯಮನೂರಿನಲ್ಲಿ ಮಹಿಳೆಯರ ಮೇಲಿನ ಪೊಲೀಸರ ದೌರ್ಜನ್ಯ ಹಾಗೂ ಅವರ ವಿರುದ್ಧ ಹಾಕಿರುವ ಕ್ರಿಮಿನಲ್‌ ಪ್ರಕರಣಗಳು ಕುರಿತು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಅಸಮಾಧಾನ ವ್ಯಕ್ತಪಡಿಸಿದರು.[ಯಮನೂರು ಲಾಠಿ ಚಾರ್ಜ್, ಸಿದ್ದರಾಮಯ್ಯ ವಿಷಾದ]

mahadayi

187 ರೈತರನ್ನು ಬಂಧಿಸಲಾಗಿದೆ : ಮಹದಾಯಿ ನ್ಯಾಯ ಮಂಡಳಿ ಆದೇಶ ಹೊರಬಿದ್ದ ಬಳಿಕ ಜುಲೈ 27 ಮತ್ತು 28ರಂದು ರೈತರು ಹೋರಾಟ ನಡೆಸಿದ್ದಾರೆ. ಈ ಸಂಬಂಧ 187 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 24 ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿರುವ, ಧ್ವಂಸ ಮಾಡಿರುವ ಸಂಬಂಧ ಈ ಕೇಸುಗಳು ದಾಖಲಾಗಿವೆ. ಜಾಮೀನು ರಹಿತ ಕೇಸುಗಳೂ ಹೋರಾಟಗಾರರ ವಿರುದ್ಧ ದಾಖಲಾಗಿದೆ. ಕೇಸುಗಳ ಮರು ಪರಿಶೀಲನೆಗೆ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಮತ್ತು ಪ್ರಾಸಿಕ್ಯುಷನ್ ನಿರ್ದೇಶಕರನ್ನು ನೇಮಿಸಲಾಗಿದೆ.

English summary
Kalasa-Banduri Horata Samiti staged a dharna in front of Vidhana Soudha seeking justice to the people of North Karnataka. They also demanded to release innocent persons arrested in connection with the protests during Madayi protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X