ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಿಜೆಕ್ಟ್ ಬ್ರಾಹ್ಮಿಣ್ ಟೆಕ್ಸ್ಟ್‌ಬುಕ್ಸ್': ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್

|
Google Oneindia Kannada News

ಬೆಂಗಳೂರು, ಮೇ 22: ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕೇಂದ್ರಬಿಂದು ಆಗಿದೆ. ವಿಮರ್ಶಕ ಜಿ. ರಾಮಕೃಷ್ಣ ಅವರು ಬರೆದಿದ್ದ 'ಭಗತ್‌ ಸಿಂಗ್' ಕುರಿತ ಪಾಠವನ್ನು ಕೈಬಿಟ್ಟಿರುವುದು ಹಾಗೂ 10ನೆ ತರಗತಿ ವಿದ್ಯಾರ್ಥಿಗಳಿಗೆ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಅವರ ಭಾಷಣ ಸೇರಿಸಿರುವುದು, ಚಕ್ರವರ್ತಿ ಸೂಲಿಬೆಲೆ ಅವರ ಲೇಖನವನ್ನೂ ಪಠ್ಯಕ್ಕೆ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಟ್ವಿಟರ್‌ನಲ್ಲಿ ಭಾನುವಾರ ಸಂಜೆ 5ರಿಂದ ಅಭಿಯಾನ ನಡೆಯುತ್ತಿದೆ. ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. #RejectRSSTextBooks #RejectBrahminTextBooks ಆ್ಯಷ್‌ಟ್ಯಾಗ್‌ಗಳಡಿ ಜನರು ಟ್ವೀಟ್ ಮಾಡುತ್ತಿದ್ದಾರೆ. ಪಠ್ಯಪುಸ್ತಕಗಳ ಪರಿಷ್ಕರಣೆಗೆ ಅನರ್ಹ ಸಮಿತಿಯನ್ನು ರಚಿಸಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ಕೊಡಬೇಕು ಎಂದು ಟ್ವೀಟಿಗರು ಆಗ್ರಹಿಸಿದ್ದಾರೆ.

"ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು," ಎಂದು ಪುರುಷೋತ್ತಮ ಬಿಳಿಮಲೆ ಟ್ವೀಟ್ ಮಾಡಿದ್ದಾರೆ.

'ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಎಂಡಿ, ಪ್ರೊಫೆಸರ್, ಅತಿಥಿ ಉಪನ್ಯಾಸಕರು ಕರ್ನಾಟಕದ ವಿದ್ಯಾರ್ಥಿಗಳ ಪಠ್ಯಪುಸ್ತಕ ತಯಾರು ಮಾಡಿದ್ದಾರೆ. ಎಂಥಾ ದುರ್ವಿದಿ ಕನ್ನಡಿಗರದ್ದು,' ಎಂದು ಜಿಕೆ ಎಂಬುವರು ಟ್ವೀಟ್ ಮಾಡಿದ್ದರೆ, "ಸರ್ಕಾರವು ವಿದ್ಯಾರ್ಥಿಗಳಿಗೆ ಪಠ್ಯವನ್ನು ವಿನ್ಯಾಸಗೊಳಿಸಲು ಕರ್ನಾಟಕದ ಬಿಜೆಪಿಗೆ ತನ್ನ ಟ್ರೋಲ್ ಆರ್ಮಿಗಿಂತ ಉತ್ತಮವಾದ ಜನರನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ", ಸತೀಶ ಜಿ.ಟಿ. ಎಂಬುವರು ಹೇಳಿದ್ದಾರೆ.

Reject Brahmin Text Books: Trend in Twitter

'ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬ್ರಾಹ್ಮಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಒಂದು ವಿಧಾನವೆಂದರೆ ಕೋಮುವಾದ ಮತ್ತು ಜಾತಿವಾದಿ ಪಠ್ಯಪುಸ್ತಕ ಪರಿಷ್ಕರಣೆ' ಎಂದು ಬಹುತ್ವ ಕರ್ನಾಟಕ ಟ್ವೀಟ್ ಮಾಡಿದೆ.

'ಪಟ್ಟಿಯನ್ನು ನೋಡಿ ಮತ್ತು ಈ ಸಂಘಿಗಳು ಶಿಕ್ಷಣದ ಹೆಸರಿನಲ್ಲಿ ನಮ್ಮ ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಎಷ್ಟು "ಅಸಹ್ಯ" ವನ್ನು ಎರಚುತ್ತಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ! ಎಂದು ಗೋಪಾಲಕೃಷ್ಣ ಎಂಬವರು ಚಕ್ರವರ್ತಿ ಸೂಲಿಬೆಲೆ ಅವರ 'ತಾಯಿ ಭಾರತಿ ಅಮರಪುತ್ರರು' ಎಂಬ ಲೇಖನವನ್ನು ಪಠ್ಯಕ್ಕೆ ಸೇರಿಸಿರುವ ಕ್ರಮನ್ನು ಖಂಡಿಸಿದ್ದಾರೆ. ಗಾಂಧಿ ಹಂತಕನನ್ನು ಪೂಜಿಸುವ ಇವರು, ಸ್ವಾತಂತ್ರ್ಯ ಬಂದು 50 ವರ್ಷಗಳಾದರೂ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿಕೊಳ್ಳದವರು ಈಗ ನಮ್ಮ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಬರೆಯುತ್ತಿದ್ದಾರೆ! ನೀವು ತಮಾಷೆ ಮಾಡುತ್ತಿದ್ದೀರಾ ಎಂದು, ಬಿಜೆಪಿಗರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಾರೆ ಮತ್ತು ನಮ್ಮ ಮಕ್ಕಳು ಧರ್ಮ ರಕ್ಷಣೆಗೆ ಹೋರಾಟಡಬೇಕುಎಂದು ಬಯಸುತ್ತಾರೆ. ಇದು ಆರ್‌ಎಸ್‌ಎಸ್‌ ಯೋಜಿತ ಕಾರ್ಯಸೂಚಿ ಎಂದು ತಮ್ಮ ಇತರೆ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಕೇಸರಿಕರಣದ ಅಗತ್ಯವಿಲ್ಲ! NEP 2020 ಬ್ರಾಹ್ಮಣತ್ವವನ್ನು ಉತ್ತೇಜಿಸುತ್ತದೆ ಮತ್ತು ಕರ್ನಾಟಕದ ಶಾಲಾ ಪಠ್ಯಕ್ರಮದಿಂದ ಭಾರತದ ಪ್ರಗತಿಪರ ಚಿಂತಕರನ್ನು ಅಳಿಸುತ್ತದೆ. ಬೀದಿಗಿಳಿದ ಬಿಜೆಪಿಯ ಕೋಮು-ಕಾರ್ಪೊರೇಟ್ ಫ್ಯಾಸಿಸಂ! ಎಂದು ಸುಲ್ತಾನ್ ಎಂಬುವರು ಟ್ವೀಟ್ ಮಾಡಿದ್ದರೆ, "ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ಈ ರೀತಿಯ ಪಠ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ," ಎಂದು ಪುನೀತ್‌ಗೌಡ ಎಂಬುವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಟ್ಯಾಗ್ ಮಾಡಿದ್ದಾರೆ.

"ಭಗತ್ ಸಿಂಗ್, ಪೆರಿಯಾರ್ ಮತ್ತು ಶ್ರೀ ನಾರಾಯಣ ಗುರು" ಅಧ್ಯಾಯವನ್ನು ತೆಗೆದುಹಾಕಿ ಮತ್ತು ಬ್ರಿಟಿಷ್ ಸೈನ್ಯದ ನೇಮಕಾತಿ ನೋಡಿಕೊಳ್ಳುತ್ತಿದ್ದ ಹೆಡ್ಗೆವಾರ್ ಅವರನ್ನು ಬದಲಿಸುವ ಮೂಲಕ ಆರ್ಎಸ್ಎಸ್ ಇನ್ನೂ ಬ್ರಿಟಿಷರಿಗೆ ನಿಷ್ಠೆ ತೋರಿಸಿದೆ ಎಂದು ಅಲ್ ಅಫೀಜ್ ಎಂಬುವರ್ ಕಮೆಂಟ್ ಮಾಡಿದ್ದಾರೆ.

Recommended Video

Rohit Sharma ಹೀಗೆ ಯಾವ IPLನಲ್ಲೂ ಆಡಿಲ್ಲ | #Cricket | Oneindia Kannada

English summary
Many people are tweeting about the Karnataka textbook revision. #RejectBrahmintextbook is a trend on Twitter, calling for the resignation of the Education Minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X