ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಸೋಂಕಿತರಿಗಿಂತ ಗುಣಮುಖರಾದವರು ಅಧಿಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಕರ್ನಾಟಕದಲ್ಲಿ ಸೋಮವಾರ 8,244 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,67,689ಕ್ಕೆ ಏರಿಕೆಯಾಗಿದೆ.

ಸೋಮವಾರ ಕರ್ನಾಟಕದಲ್ಲಿ 8,244 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆದರೆ, 8,865 ಜನರು ಗುಣಮುರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆಗಿಂತ ಗುಣ ಮುಖರಾದವರ ಸಂಖ್ಯೆ ಅಧಿಕವಾಗಿದೆ.

ಮನೆಯಲ್ಲೇ ಕೊಪ್ಪಳದಲ್ಲಿ ಕೋವಿಡ್ ಗೆದ್ದ 105ರ ವೃದ್ಧೆ ಮನೆಯಲ್ಲೇ ಕೊಪ್ಪಳದಲ್ಲಿ ಕೋವಿಡ್ ಗೆದ್ದ 105ರ ವೃದ್ಧೆ

ಕಳೆದ ಕೆಲವು ದಿನಗಳಿಂದ 9 ಸಾವಿರಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ರಾಜ್ಯದಲ್ಲಿ ದಾಖಲಾಗುತ್ತಿತ್ತು. ಸೆ. 14ರಂದು ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇದುವರೆಗೂ ರಾಜ್ಯದಲ್ಲಿ 3,61,823 ಜನರು ಗುಣಮುಖರಾಗಿದ್ದಾರೆ.

ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರು ಟಾಪ್! ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರು ಟಾಪ್!

ಸೋಮವಾರ ರಾಜ್ಯದಲ್ಲಿ 45,916 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿನ ಪಾಸಿಟಿವಿಟಿ ದರ ಶೇ 18ರಷ್ಟಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಬೆಂಗಳೂರು ನಗರ.

Fact Check; ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಬಳಿಕ ಮಹಿಳೆ ನಾಪತ್ತೆ Fact Check; ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಬಳಿಕ ಮಹಿಳೆ ನಾಪತ್ತೆ

ಕೋವಿಡ್ ಗುಣಮುಖರು

ಕೋವಿಡ್ ಗುಣಮುಖರು

ಕರ್ನಾಟಕದಲ್ಲಿ ಸೆ. 14ರಂದು 8865 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದುವರೆಗೂ ಗುಣಮುಖರಾದವರ ಸಂಖ್ಯೆ 361823. 800 ಜನರು ಇನ್ನೂ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸೆ. 14ರಂದು 119 ಸಾವು

ಸೆ. 14ರಂದು 119 ಸಾವು

ಸೋಮವಾರ ಕರ್ನಾಟಕದಲ್ಲಿ 119 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 7,384ಕ್ಕೆ ಏರಿಕೆಯಾಗಿದೆ. ಇವರಲ್ಲಿ 2473 ಜನರು ಬೆಂಗಳೂರು ನಗರದಲ್ಲಿಯೇ ಮೃತಪಟ್ಟಿದ್ದಾರೆ.

ದೇಶದಲ್ಲಿ 4ನೇ ಸ್ಥಾನ

ದೇಶದಲ್ಲಿ 4ನೇ ಸ್ಥಾನ

ಸೋಮವಾರದ ವರದಿಯಂತೆ ರಾಜ್ಯದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 4,67,689. ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯವಿದೆ.

Recommended Video

ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ | Oneindia Kannada
ಬೆಂಗಳೂರು ನಗರ ಮೊದಲ ಸ್ಥಾನ

ಬೆಂಗಳೂರು ನಗರ ಮೊದಲ ಸ್ಥಾನ

ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ಜಿಲ್ಲೆ ಬೆಂಗಳೂರು ನಗರ. ಸೆ.14ರಂದು ನಗರದಲ್ಲಿ 2966 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,73,628.

English summary
Karnataka reported 8244 new COVID 19 cases on September 15, 2020. 8,865 people recovered. State total tally now 4,67,689 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X