• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ: ಇದೇನಾ ಕಾರಣ?

|
Google Oneindia Kannada News

ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ, ಕಳೆದ ಒಂದು ವಾರದಿಂದ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಜೊತೆಗೆ, ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಾಣುತ್ತಿದೆ.

ಇಂದು ಪರೀಕ್ಷೆ ಮಾಡಿದ ಕೋವಿಡ್ ವರದಿಯನ್ನು ಆರೋಗ್ಯ ಇಲಾಖೆ ಅಂದೇ ಕೌಂಟಿಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಏಪ್ರಿಲ್ 27ರಿಂದ ಕರ್ನಾಟಕ ಸರಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿತ್ತು. ಇದಾದ ನಂತರ ಮೇ ಹತ್ತರಿಂದ ಲಾಕ್ ಡೌನ್ ಹೇರಿತ್ತು.

ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ

ಹಾಗಾಗಿ, ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಸ್ವಾಭಾವಿಕವಾಗಿ ಜನರು ಕೋವಿಡ್ ಟೆಸ್ಟ್ ಮಾಡಿಸಲು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಎನ್ನುವುದು ಒಂದು ಕಡೆಯಾದರೆ, ಲಸಿಕೆ ತೆಗೆದುಕೊಂಡು ಟೆಸ್ಟಿಂಗ್ ಹೋದವರ ಸಂಖ್ಯೆಯೂ ಇರಬಹುದು.

ಕೇಂದ್ರ ಸರಕಾರದ ಟಿಟಿಟಿ ಸೂತ್ರದ ಪ್ರಕಾರ, ಕರ್ನಾಟಕ ಟೆಸ್ಟಿಂಗ್ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ಆದರೆ, ಸರಕಾರದ ಆರೋಗ್ಯ ಕೇಂದ್ರಗಳಲ್ಲಿನ ಟೆಸ್ಟಿಂಗ್‌ನಲ್ಲಿ ಸುಮಾರು ಶೇ. 85ಕ್ಕೂ ರಿಪೋರ್ಟ್ ಗಳು ಪಾಸಿಟಿವ್ ಬರುತ್ತಿದೆ ಎನ್ನುವ ಅಪವಾದವೂ ಇದೆ ಎನ್ನುವುದು ಗಮನಿಸಬೇಕಾದ ವಿಚಾರ. ಕರ್ಫ್ಯೂ ಕಾರಣಕ್ಕಾಗಿ ಹೊಸ ಸೋಂಕಿತರ ಪ್ರಮಾಣ ಕಮ್ಮಿಯಾಗಿದೆಯಾ?
ಏನನ್ನುತ್ತದೆ ಅಂಕಿಅಂಶ?

 ಕೊರೊನಾ ಎರಡನೇ ಅಲೆ: ರಾಜಧಾನಿ ಬೆಂಗಳೂರಿನಿಂದ ಶುಭಸುದ್ದಿ ಕೊರೊನಾ ಎರಡನೇ ಅಲೆ: ರಾಜಧಾನಿ ಬೆಂಗಳೂರಿನಿಂದ ಶುಭಸುದ್ದಿ

 ಎಲ್ಲಾ ರಾಜ್ಯಗಳ ಸಿಎಂ ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನಿ ಮೋದಿ ಸಭೆ

ಎಲ್ಲಾ ರಾಜ್ಯಗಳ ಸಿಎಂ ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನಿ ಮೋದಿ ಸಭೆ

ಎಲ್ಲಾ ರಾಜ್ಯಗಳ ಸಿಎಂ ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನಿ ಮೋದಿ ಮಾತನಾಡಿದ ಸಂದರ್ಭದಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚು ಮಾಡಬೇಕು. ಹೊಸ ಸೋಂಕಿತರ ಸಂಖ್ಯೆ ಹೆಚ್ಚಾದರೂ ಪರವಾಗಿಲ್ಲ, ಕೊರೊನಾವನ್ನು ಬೇರು ಮಟ್ಟದಲ್ಲಿ ನಿಗ್ರಹಿಸಲು ಇದೊಂದೇ ದಾರಿ ಎಂದು ಹೇಳಿದ್ದರು.

ಆದರೆ, ಹಳೆಯ ಲೆಕ್ಕ ಮತ್ತು ಲ್ಯಾಬ್ ಸೆಂಟರ್‌ಗಳನ್ನು ಹೆಚ್ಚಿಸದೇ ಇರುವುದರಿಂದ ಹಳೆಯ ಲೆಕ್ಕವನ್ನು ಈಗ ದೈನಂದಿನ ರಿಪೋರ್ಟ್ ನಲ್ಲಿ ಅಡ್ಜಸ್ಟ್ ಮಾಡಲಾಗುತ್ತಿದೆ ಎನ್ನುವ ಗುರುತರ ಆಪಾದನೆಯೂ ಕೇಳಿ ಬರುತ್ತಿದೆ. ಕಳೆದ ಒಂದು ವಾರದ ಟೆಸ್ಟಿಂಗ್ ರಿಪೋರ್ಟ್ ಅನ್ನು ಮುಂದಿನ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ: (ಚಿತ್ರ: ಪಿಟಿಐ)

 ಕೇಂದ್ರ ಸರಕಾರದ ಟಿಟಿಟಿ ಸೂತ್ರದ ಪ್ರಕಾರ, ಟೆಸ್ಟಿಂಗ್ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

ಕೇಂದ್ರ ಸರಕಾರದ ಟಿಟಿಟಿ ಸೂತ್ರದ ಪ್ರಕಾರ, ಟೆಸ್ಟಿಂಗ್ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

ದಿನಾಂಕ: ಮೇ 4
ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 13,098
ಆರ್‌ಟಿಸಿಪಿಆರ್ ಟೆಸ್ಟ್: 1,40,609
ದಿನದ ಟೆಸ್ಟ್: 1,53,707
ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 8,53,292
ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,11,86,778

ದಿನಾಂಕ: ಮೇ 5
ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 9,827
ಆರ್‌ಟಿಸಿಪಿಆರ್ ಟೆಸ್ಟ್: 1,45,397
ದಿನದ ಟೆಸ್ಟ್: 1,55,224
ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 8,63,119
ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,13,32, 175
(ಚಿತ್ರ: ಪಿಟಿಐ)

 ಜನರು ಕೋವಿಡ್ ಟೆಸ್ಟ್ ಮಾಡಿಸಲು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ

ಜನರು ಕೋವಿಡ್ ಟೆಸ್ಟ್ ಮಾಡಿಸಲು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ

ದಿನಾಂಕ: ಮೇ 6
ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 11,071
ಆರ್‌ಟಿಸಿಪಿಆರ್ ಟೆಸ್ಟ್: 1,53,370
ದಿನದ ಟೆಸ್ಟ್: 1,64,441
ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 8,74,190
ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,14,85,545

ದಿನಾಂಕ: ಮೇ 7
ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 10,745
ಆರ್‌ಟಿಸಿಪಿಆರ್ ಟೆಸ್ಟ್: 1,48,157
ದಿನದ ಟೆಸ್ಟ್: 1,58,902
ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 8,84,935
ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,16,33,702
(ಚಿತ್ರ: ಪಿಟಿಐ)

  ಕೊರೋನದಿಂದ ಚೇತರಿಸಿ ಕೊಂಡರು ಉಪಯೋಗವಿಲ್ಲ! | Oneindia Kannada
   ಕರ್ಫ್ಯೂ ಕಾರಣಕ್ಕಾಗಿ ಹೊಸ ಸೋಂಕಿತರ ಪ್ರಮಾಣ ಕಮ್ಮಿಯಾಗಿದೆಯಾ?

  ಕರ್ಫ್ಯೂ ಕಾರಣಕ್ಕಾಗಿ ಹೊಸ ಸೋಂಕಿತರ ಪ್ರಮಾಣ ಕಮ್ಮಿಯಾಗಿದೆಯಾ?

  ದಿನಾಂಕ: ಮೇ 8
  ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 10,441
  ಆರ್‌ಟಿಸಿಪಿಆರ್ ಟೆಸ್ಟ್: 1,46,586
  ದಿನದ ಟೆಸ್ಟ್: 1,57,027
  ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 8,95,376
  ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,17,80,288

  ದಿನಾಂಕ: ಮೇ 9
  ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 9,828
  ಆರ್‌ಟಿಸಿಪಿಆರ್ ಟೆಸ್ಟ್: 1,36,663
  ದಿನದ ಟೆಸ್ಟ್: 1,46,491
  ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 9,05,204
  ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,19,16,951

  ದಿನಾಂಕ: ಮೇ 10
  ರ‍್ಯಾಪಿಡ್ ಆಂಟಿಜೆನ್ ಟೆಸ್ಟ್: 7,065
  ಆರ್‌ಟಿಸಿಪಿಆರ್ ಟೆಸ್ಟ್: 1,17,045
  ದಿನದ ಟೆಸ್ಟ್: 1,24,110
  ಒಟ್ಟಾರೆ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ (2021): 9,12,269
  ಒಟ್ಟಾರೆ ಆರ್‌ಟಿಸಿಪಿಆರ್ ಟೆಸ್ಟ್ (2021): 1,20,33,996
  (ಚಿತ್ರ: ಪಿಟಿಐ)

  English summary
  Karnataka Records Slight Decrease in Daily Tally of COVID-19 Cases as Testing Dips.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X