ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ವರ್ಷಗಳ ನಂತರ ಪುನರಾವರ್ತನೆ: ಪ್ರಜಾಪ್ರಭುತ್ವದ ದೇಗುಲ 'ಸದನ'ದಲ್ಲಿ ಜನಪ್ರತಿನಿಧಿಗಳ ಗೂಂಡಾಗಿರಿ

|
Google Oneindia Kannada News

ಚಿಂತಕರ ಚಾವಡಿ, ಹಿರಿಯರ ಸದನ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ಮಂಗಳವಾರ (ಡಿ 15) ನಡೆದ ವಿದ್ಯಮಾನಗಳನ್ನು ನೋಡಿದಾಗ ಇವರಾ ನಮ್ಮ ಜನಪ್ರತಿನಿಧಿಗಳು ಎಂದು ಸಾರ್ವಜನಿಕರಿಗೆ ಬೇಸರ ಮೂಡುವುದು ಸಹಜ.

ಪರಿಷತ್ತಿನ ಇತಿಹಾಸಕ್ಕೆ ಕಳಂಕ ತಂದ ಜನಪ್ರತಿನಿಧಿಗಳ ಗೂಂಡಾ ವರ್ತನೆ, ರಾಜ್ಯದ ಮಾನ ಮರ್ಯಾದೆಯನ್ನು ಮಣ್ಣುಪಾಲು ಮಾಡಿತು. ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ರಾಜಕೀಯ ಮೇಲಾಟಕ್ಕಾಗಿ ವಿಧಾನ ಪರಿಷತ್ತಿನ ಘನ ಇತಿಹಾಸಕ್ಕೆ ಕಪ್ಪುಚುಕ್ಕೆ ಇಟ್ಟರು.

ಕ್ರಿಮಿನಲ್ ಆಕ್ಟ್, 'ನರೇಂದ್ರ ಮೋದಿ ಪ್ರಜಾಪ್ರಭುತ್ವ': ಸಿದ್ದರಾಮಯ್ಯ ಎಸೆದ ಸಪ್ತ ಪ್ರಶ್ನೆಗಳುಕ್ರಿಮಿನಲ್ ಆಕ್ಟ್, 'ನರೇಂದ್ರ ಮೋದಿ ಪ್ರಜಾಪ್ರಭುತ್ವ': ಸಿದ್ದರಾಮಯ್ಯ ಎಸೆದ ಸಪ್ತ ಪ್ರಶ್ನೆಗಳು

ಮೇಲ್ಮನೆ ಸಂಪ್ರದಾಯವನ್ನು ಅರಿಯದ ಮತ್ತು ನಡೆದ ಘಟನೆಯ ಬಗ್ಗೆ ಕಿಂಚಿತ್ತೂ ಬೇಸರ ತೋರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ವಾಗ್ಯುದ್ದಕ್ಕೆ ಇಳಿದಿದ್ದಾರೆ. ಮೂರೂ ಪಕ್ಷಗಳು ಕನಿಷ್ಠ ಆತ್ಮಾವಲೋಕನ ಮಾಡುವ ಕೆಲಸವನ್ನು ಮಾಡಲಿಲ್ಲ.

ಸಭಾಪತಿಗಳು ಸದನಕ್ಕೆ ಬರದಂತೆ ತಡೆದ ಗೂಂಡಾಗಳು ಯಾರು?: ಡಿ.ಕೆ. ಶಿವಕುಮಾರ್ಸಭಾಪತಿಗಳು ಸದನಕ್ಕೆ ಬರದಂತೆ ತಡೆದ ಗೂಂಡಾಗಳು ಯಾರು?: ಡಿ.ಕೆ. ಶಿವಕುಮಾರ್

ಸುಮಾರು ಹತ್ತು ವರ್ಷದ ನಂತರ ಸದನದಲ್ಲಿ ಈ ರೀತಿಯ ಗೂಂಡಾ ವರ್ತನೆ ನಡೆದಿದೆ. ಕಳೆದ ಬಾರಿ ನಡೆದ ಘಟನೆಯೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಎನ್ನುವುದು ಗಮನಿಸಬೇಕಾದ ವಿಚಾರ. ಆ ಘಟನೆಯ ಫ್ಲ್ಯಾಷ್ ಬ್ಯಾಕ್:

110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು

110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು

2008ರ ಅಸೆಂಬ್ಲಿ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಮೊದಮೊದಲು ಸುಸೂತ್ರವಾಗಿ ನಡೆಯುತ್ತಿದ್ದ ಯಡಿಯೂರಪ್ಪನವರ ಸರಕಾರದಲ್ಲಿ ಬಿಕ್ಕಟ್ಟು ತೋರಿ, ಹದಿನಾರು ಶಾಸಕರು ಯಡಿಯೂರಪ್ಪನವರ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ನೀಡಿದ್ದರು. ಹಾಗಾಗಿ, ವಿಶ್ವಾಸಮತ ಯಾಚನೆ ಸಂದರ್ಭ ಎದುರಾಗಿತ್ತು.

ಹದಿನಾರು ಜನರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು

ಹದಿನಾರು ಜನರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು

ಅಕ್ಟೋಬರ್ 11, 2010ರಲ್ಲಿ ಸದನ ಆರಂಭವಾಗಿ ವಿಶ್ವಾಸಮತಯಾಚನೆಗೆ ಮುನ್ನ 16 ಶಾಸಕರನ್ನು ಸ್ಪೀಕರ್ ಆಗಿದ್ದ ಕೆ.ಜೆ.ಬೋಪಯ್ಯ ಅನರ್ಹಗೊಳಿಸಿದ್ದರು. ಇದರಿಂದಾಗಿ, ಇಡೀ ಸದನ ರಣರಂಗದಂತೆ ಮಾರ್ಪಟ್ಟಿತ್ತು ಬೇಳೂರು ಗೋಪಾಲಕೃಷ್ಣ, ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ವೈ.ಸಂಪಂಗಿ, ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್ ಸೇರಿದಂತೆ ಸೇರಿದಂತೆ ಹದಿನಾರು ಜನರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

ಸಿದ್ದರಾಮಮ್ಮ ಮತ್ತು ಇತರ ಮುಖಂಡರು ಬಿದರಿ ವಿರುದ್ದ ತಿರುಗಿಬಿದ್ದರು

ಸಿದ್ದರಾಮಮ್ಮ ಮತ್ತು ಇತರ ಮುಖಂಡರು ಬಿದರಿ ವಿರುದ್ದ ತಿರುಗಿಬಿದ್ದರು

ಸದನದಲ್ಲಿ ಸಂಘರ್ಷ ಮಿತಿಮೀರಿದಾಗ ಅಂದಿನ ನಗರ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಮಹಾದೇವ ಬಿದರಿ ವಿಧಾನಸಭೆಗೆ ಪ್ರವೇಶಿಸಿದರು. ಪ್ರತಿಪಕ್ಷಗಳು ಪ್ರವೇಶಿಸುವ ಬಾಗಿಲನ್ನು ಬಿದರಿ ಮುಚ್ಚಿದ್ದರು. ಇದರಿಂದ ಸಿದ್ದರಾಮಮ್ಮ ಮತ್ತು ಇತರ ಮುಖಂಡರು ಬಿದರಿ ವಿರುದ್ದ ತಿರುಗಿಬಿದ್ದರು. ಕೊನೆಗೆ, ಶಂಕರ್ ಬಿದರಿ ಬಾಗಿಲನ್ನು ತೆರೆದರು.

Recommended Video

ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ Modi ಯವರ ಶುಭಹಾರೈಕೆಗಳು | Oneindia Kannada
ಗೂಳಿಹಟ್ಟಿ ಶೇಖರ್

ಗೂಳಿಹಟ್ಟಿ ಶೇಖರ್

ಅಷ್ಟೊತ್ತಿಗೆ ವಿಶ್ವಾಸಮತ ಯಾಚನೆ ಮುಗಿದಿತ್ತು. ಇದರಿಂದ ಸಿಟ್ಟಿಗೆದ್ದ ಶಾಸಕರು ಮನಬಂದಂತೆ ವಿಧಾನಸಭೆಯಲ್ಲಿ ವರ್ತಿಸಿದ್ದರು. ಗೂಳಿಹಟ್ಟಿ ಶೇಖರ್ ಅವರಂತೂ ಅಂಗಿ ಹರಿದುಕೊಂಡು ಕುರ್ಚಿಯ ಮೇಲೆ ನಿಂತು ಧಿಕ್ಕಾರ ಧಿಕ್ಕಾರ ಕೂಗುತ್ತಿದ್ದರು. ಅಧಿವೇಶನ ನಡೆಯುವ ಹೊರಗಡೆ ಹೂಕುಂಡಗಳನ್ನು ಪ್ರತಿಪಕ್ಷದ ಮುಖಂಡರು ಸಿಕ್ಕಸಿಕ್ಕಲ್ಲಿ ಬಿಸಾಕಿದರು. ಮಾರ್ಷಲ್ ಗಳೂ ಗಾಯಗೊಂಡಿದ್ದರು. ಹತ್ತು ವರ್ಷದ ಆ ಘಟನೆಯ ನಂತರ, ಒಂದು ದಿನದ ಹಿಂದೆ ವಿಧಾನ ಪರಿಷತ್ತಿನಲ್ಲಿ ಆಗಬಾರದ್ದು ಮತ್ತೆ ನಡೆದು ಹೋಗಿದೆ.

English summary
Recalling Ten Years Back Incident Happened In Assembly During Yediyurappa's Confidence Motion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X