ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಶಾಸಕ ಪುತ್ರನಿಂದ ಕೋಟ್ಯಂತರ ವಂಚನೆ

By Srinath
|
Google Oneindia Kannada News

real-estate-fraud-court-probe-maddur-jds-mla-thammanna-son-santosh
ಬೆಂಗಳೂರು, ಡಿ.3: ಜಾತ್ಯತೀತ ಜನತಾದಳ ಪಕ್ಷದ ಹಿರಿಯ ಶಾಸಕರೊಬ್ಬರ ಪುತ್ರರು ಮತ್ತು ಅವರ ಪತ್ನಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತಮಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ವೈದ್ಯ ಲಕ್ಷ್ಮಣ್ ಎಂಬುವವರು ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತತ್ಪರಿಣಾಮ ಇದೀಗ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮದ್ದೂರು ಶಾಸಕ ಡಿಸಿ ತಮ್ಮಣ್ಣ ಅವರ ಪುತ್ರ ಸಂತೋಷ್ ವಿರುದ್ಧ 9 ಕೋಟಿ ವಂಚನೆ ದೂರು ದಾಖಲಾಗಿದೆ.

ಸಂಜಯನಗರ ನಿವಾಸಿ, ವೈದ್ಯ ಡಾ. ಲಕ್ಷ್ಮಣ್ ಅವರು ಅತ್ತಿಬೆಲೆ ಹೋಬಳಿ ಬಳ್ಳೂರಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ 100 ಎಕರೆ ಜಮೀನು ಖರೀದಿಸಲು ಯೋಜಿಸಿದ್ದರು. ಅದಕ್ಕಾಗಿ ಸಂತೋಷ್ ಮಾಲೀಕತ್ವದ ಪ್ರಮೀಳಾ-ಸಂತೋಷ್ ಲ್ಯಾಂಡ್ ಡೆವಲಪರ್ಸ್ ಜತೆ 2012ರಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದರು.
(ನಟಿ ಆರತಿ ಬಂಗಲೆ ರು.14 ಕೋಟಿಗೆ ಮಾರಾಟ?)

ಈ ವೇಳೆ ಡಾ. ಲಕ್ಷ್ಮಣ್, ಸಂತೋಷ ಅವರಿಗೆ 9 ಕೋಟಿ ರೂ ಪಾವತಿಸಿದ್ದರಂತೆ. ಆದರೆ ಸಂತೋಷ್ ಜಮೀನು ಕೊಡಿಸಿಲ್ಲ. ಅಲ್ಲದೇ ಮಂಗಡ ಹಣವನ್ನೂ ಪಾವತಿಸಿಲ್ಲ. ಹೀಗಾಗಿ ಡಾ. ಲಕ್ಷ್ಮಣ್ ಅವರು 2013ರ ಮೇ 29 ರಂದು ಸಿಟಿ ಸಿವಿಲ್ ನ್ಯಾಯಾಲಯದ ಮೊರೆ (8th Additional Chief Metropolitan Magistrate court) ಹೋಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯವು ಸಂಜಯನಗರ ಪೊಲೀಸರಿಗೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಅವರಿಗೆ ನೋಟಿಸ್ ನೀಡಿದ್ದರು. ಪೊಲೀಸರಿಂದ ನೋಟಿಸ್ ಪಡೆದಿರುವ ಸಂತೋಷ್ ಸೋಮವಾರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸದ್ಯದಲ್ಲೇ ವಿಚಾರಣೆ ಪೂರ್ಣಗೊಳಿಸಿ, ಕೋರ್ಟಿಗೆ ವರದಿ ಸಲ್ಲಿಸುವುದಾಗಿ DCP (North) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

English summary
Real estate fraud- Bangalore Magistrate court has ordered probe against Maddur JDS MLA Thammanna's son Santosh. Lakshman, doctor by profession and a resident of Sanjaynagar, had filed a private complaint in the 8th Additional Chief Metropolitan Magistrate court accusing Santosh of cheating him (Lakshman) of Rs nine crore in a land deal near Attibele.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X