ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SSLC: ಫೇಲಾದವರಿಗೆ ಮರು ವ್ಯಾಸಂಗಕ್ಕೆ ಅವಕಾಶ, ಶಾಲೆಗೆ ಹೋಗಬಹುದು!

By Nayana
|
Google Oneindia Kannada News

ಬೆಂಗಳೂರು, ಮೇ 10: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗಕ್ಕೆ ಪ್ರವೇಶಾವಕಾಶ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಆದರೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪ್ರವೇಶ ಪಡೆಯಬೇಕಾದರೆ ಎಲ್ಲಾ ಅರು ವಿಷಯಗಳನ್ನೂ ವ್ಯಾಸಂಗ ಮಾಡಿ ಪರೀಕ್ಷೆಗೆ ಕುಳಿತೊಕೊಳ್ಳಬೇಕಾಗುತ್ತದೆ. ತೇರ್ಗಡೆಯಾದ ವಿಷಯಗಳಿಗೆ ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಶಾಲಾ ಮರು ದಾಖಲಾತಿ ಮುಂದಿನ ಒಂದು ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.

SSLC ಫಲಿತಾಂಶ : 2018 ಹಾಗೂ 2017ರಲ್ಲಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!SSLC ಫಲಿತಾಂಶ : 2018 ಹಾಗೂ 2017ರಲ್ಲಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!

ಶಾಲಾ ವಿದ್ಯಾರ್ಥಿಗಳಿಗೆ ಅನುಸರಿಸುವ ಎಲ್ಲಾ ಮಾನದಂಡಗಳನ್ನು ಅನುಸರಿಸಿ ಫೇಲಾದ ವಿದ್ಯಾರ್ಥಿಗಳಿಗೆ ಮರು ಪ್ರವೇಶಕ್ಕೆ ದಾಖಲು ಮಾಡಿಕೊಳ್ಳಲಾಗುತ್ತದೆ. ಫೇಲಾದ ವಿದ್ಯಾರ್ಥಿಗಳು ಪುನಃ ಶಾಲಾ ಪ್ರವೇಶ ಪಡೆದು ದಾಖಲಾಗಿರುವುದರಿಂದ ಸಿಸಿಇ ಪದ್ಧತಿಯಲ್ಲಿ ವ್ಯಾಸಂಗ ಮುಂದುವರೆಸಬೇಕಾಗುತ್ತದೆ.

Readmission for failed students to SSLC

ಈ ವಿದ್ಯಾರ್ಥಿಗಳು ಕೂಡ ಉಳಿದ ವಿದ್ಯಾರ್ಥಿಗಳಂತೆಯೇ ಆಂತರಿಕ ಮೌಲ್ಯಮಾಪನದ ಭಾಗ -ಎ ಮತ್ತು ಭಾಗ ಬಿ ಗಳಲ್ಲಿ ಅಂಕ ಮತ್ತು ಶ್ರೇಣಿಯನ್ನು ಪಡೆಯಬೇಕಾಗುತ್ತದೆ. ಎಂದು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವಿಟಿ ರಾಜಶ್ರೀ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ SSLC ಫಲಿತಾಂಶದ ಪ್ರಮುಖ ಅಂಕಿ ಅಂಶಗಳು ಇಲ್ಲಿವೆಕರ್ನಾಟಕ SSLC ಫಲಿತಾಂಶದ ಪ್ರಮುಖ ಅಂಕಿ ಅಂಶಗಳು ಇಲ್ಲಿವೆ

English summary
Department of education has provided an opportunity of readmission to those failed in SSLC exams. Earlier there was no provision for readmission to tenth standard in the state. It will help the students to improve their academic career, the department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X