• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದಗಂಗಾ ಸ್ವಾಮೀಜಿಗಳಿಗೆ 'ಭಾರತ ರತ್ನ', ಒಕ್ಕೊರಲ ದನಿ

|

ವಿವಿಧ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ಕೊಡ ಮಾಡುವ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯಲ್ಲೂ ರಾಜಕೀಯ 'ಕೈ'ಯಾಡಿಸುತ್ತಿದೆಯೇ ಎನ್ನುವ ಪ್ರಶ್ನೆ/ಚರ್ಚೆ ಸಾರ್ವಜನಿಕ ವಲಯದಲ್ಲಿ ಅವಾಗಾವಾಗ ನಡೆಯುತ್ತಲೇ ಇರುತ್ತದೆ.

1954ರಲ್ಲಿ ಆರಂಭವಾದ ಈ ಮಹೋನ್ನತ ಪ್ರಶಸ್ತಿಯನ್ನು ಇದುವರೆಗೆ 43 ಜನರಿಗೆ ನೀಡಲಾಗಿದೆ. ಇದರಲ್ಲಿ ಏಳು ಮಂದಿ ಸಾಧಕರಿಗೆ ಮರಣೋತ್ತರವಾಗಿ ನೀಡಲಾಗಿದೆ. ಭಾರತ ರತ್ನ ಪ್ರಶಸ್ತಿಗೆ ಬರೀ ಭಾರತೀಯರನ್ನೇ ಆಯ್ಕೆ ಮಾಡ ಬೇಕೆನ್ನುವ ಕಟ್ಟುಪಾಡುಗಳೇನೂ ಇಲ್ಲ. ಹಾಗಾಗಿ ಪ್ರಶಸ್ತಿಯನ್ನು ಅಬ್ದುಲ್ ಗಫಾರ್ ಖಾನ್ (1982) ಮತ್ತು ನೆಲ್ಸನ್ ಮಂಡೇಲಾ (1990) ಅವರಿಗೂ ನೀಡಲಾಗಿದೆ.

ಡಾ. ಎಸ್ ರಾಧಾಕೃಷ್ಣನ್ ಅವರಿಗೆ ಮೊದಲ ಬಾರಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಸರ್ ಎಂ ವಿಶ್ವೇಶ್ವರಯ್ಯ ಈ ಪ್ರಶಸ್ತಿ ಪಡೆದ ಮೊದಲ ಹೆಮ್ಮೆಯ ಕನ್ನಡಿಗ. ಇಲ್ಲಿಯವರೆಗೆ ಭೀಮ್ ಸೇನ್ ಜೋಷಿ (2008) ಮತ್ತು ಸಿ ಎನ್ ರಾವ್ (2013) ಈ ಮಹೋನ್ನತ ಪ್ರಶಸ್ತಿ ಪಡೆದ ಇತರಿಬ್ಬರು ಕನ್ನಡಿಗರು.

ಈ ಬಾರಿಯ ಭಾರತ ರತ್ನ ಪ್ರಶಸ್ತಿ ವಿಜೇತರಲ್ಲಿ ಸಚಿನ್ ತೆಂಡೂಲ್ಕರ್ ಕೂಡಾ ಒಬ್ಬರು. ಭಾರತದ ರಾಷ್ಟೀಯ ಕ್ರೀಡೆ ಹಾಕಿ ಕ್ಷೇತ್ರದ ದಂತಕಥೆ ಧ್ಯಾನ್ ಚಂದ್, ಬಡತನದೊಂದಿಗೆ ಸ್ಪರ್ಧೆಗಿಳಿದು ದೇಶದ ಗೌರವನ್ನು ಎತ್ತಿ ಹಿಡಿದ 'ಫ್ಲೈಯಿಂಗ್ ಸಿಖ್' ಎಂದೇ ಹೆಸರಾಗಿರುವ ಮಿಲ್ಕಾ ಸಿಂಗ್, ಚೆಸ್ ಕ್ಷೇತ್ರದ ವಿಶ್ವನಾಥನ್ ಆನಂದ್ ಮತ್ತು ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಕಡೆಗಣಿಸಿ ಕ್ರಿಕೆಟ್ ಕ್ಷೇತ್ರದ ಲಿಟಲ್ ಮಾಸ್ಟರ್ ತೆಂಡೂಲ್ಕರಿಗೆ ಈ ಪ್ರಶಸ್ತಿ ನೀಡಿದ್ದು ಎಷ್ಟು ಸರಿ ಎನ್ನುವ ಚರ್ಚೆ ದೇಶಾದ್ಯಂತ ಪ್ರಸಕ್ತ ನಡೆಯುತ್ತಲೇ ಇದೆ. (ಧ್ಯಾನಚಂದ್‌ಗೆ ಭಾರತ ರತ್ನ ಸಿಗಬೇಕಿತ್ತು)

ಸಚಿನ್ ತೆಂಡೂಲ್ಕರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ಭಾರತರತ್ನ ಪ್ರಶಸ್ತಿ ನೀಡಲು ಬಳಸವು ಮಾನದಂಡವನ್ನೇ ದೂರುದಾರರು ಪ್ರಶ್ನಿಸಿದ್ದಾರೆ. ಕೋರ್ಟ್ ಅರ್ಜಿಯನ್ನು ತಳ್ಳಿ ಹಾಕದೇ, ವಿಚಾರಣೆಯನ್ನು ಮುಂದೂಡಿದೆ. ತೆಂಡೂಲ್ಕರಿಗೆ ಈ ಪ್ರಶಸ್ತಿ ನೀಡಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಣ ಎನ್ನುವ ಮಾತೂ ಕೇಳಿ ಬಂದಿತ್ತು. (ಸಚಿನ್ ಗೆ ಭಾರತ ರತ್ನ: ರಾಹುಲ್ ಗಾಂಧಿ 'ಕೈ'ವಾಡ?)

ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಗೆ ಸಿಕ್ಕ ಭಾರತ ರತ್ನ ಪ್ರಶಸ್ತಿ ಈ ದೇಶ ಕಂಡ ಮಹಾನ್ ನಾಯಕ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಗೂ ಸಿಗಬೇಕೆಂದು ಬಿಜೆಪಿ ಬೇಡಿಕೆ ಇಟ್ಟಿದೆ. ಇದಕ್ಕೆ ಯುಪಿಎ ಸರಕಾರದ ಮಿತ್ರ ಪಕ್ಷಗಳೂ ಅಟಲ್ ಭಾರತ ರತ್ನಕ್ಕೆ ಅರ್ಹರು ಎಂದಿವೆ. (ವಾಜಪೇಯಿಗೆ ಭಾರತ ರತ್ನ ನೀಡಲು ಬಿಜೆಪಿ ಆಗ್ರಹ)

ಇವೆಲ್ಲದರ ನಡುವೆ 'ಒನ್ ಇಂಡಿಯಾ ಕನ್ನಡ' ಕರ್ನಾಟಕದಲ್ಲಿ 'ಭಾರತ ರತ್ನ' ಯಾರಿಗೆ ಸಿಗಬೇಕು ಎಂದು poll question ಹಾಕಿತ್ತು. ಇದಕ್ಕೆ ಪೂರಕವಾಗಿ ಸ್ಪಂಧಿಸಿದ ಓದುಗರು ರಾಜ್ಯದಿಂದ ಮಹೋನ್ನತ ಪ್ರಶಸ್ತಿಗೆ ಯಾರು ಅರ್ಹರು ಎಂದು ತಮ್ಮ ಮತ ಚಲಾಯಿಸಿ, ತೀರ್ಪು ನೀಡಿದ್ದಾರೆ.

ಓದುಗರ ಪ್ರಕಾರ ಪ್ರಶಸ್ತಿಗೆ ರಾಜ್ಯದಿಂದ ಯಾರು ಅರ್ಹರು ಸ್ಲೈಡಿನಲ್ಲಿ...

ಡಾ. ಶಿವಕುಮಾರ್ ಸ್ವಾಮೀಜಿ

ಡಾ. ಶಿವಕುಮಾರ್ ಸ್ವಾಮೀಜಿ

ನಡೆದಾಡುವ ದೇವರು, ಶತಾಯುಷಿ ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಸ್ವಾಮೀಜಿಯವರನ್ನು ನಮ್ಮ ರಾಜ್ಯದಿಂದ ಭಾರತ ರತ್ನ ಪ್ರಶಸ್ತಿಗೆ ಓದುಗರು ಆಯ್ಕೆ ಮಾಡಿದ್ದಾರೆ. ತ್ರಿವಿಧ ದಾಸೋಹಿ, ಇಂದಿಗೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿರುವ ಸಾರ್ಥಕ ಜೀವಿ ಸಿದ್ದಗಂಗಾ ಶ್ರೀಗಳು ಈ ಪ್ರಶಸ್ತಿಗೆ ಅರ್ಹರೆಂದು ಶೇ.68 ಓದುಗರು ಹೇಳಿದ್ದಾರೆ (ಶ್ರೀಗಳ ಪರವಾಗಿ ಬಿದ್ದ ಒಟ್ಟು ಮತ 8280).

ಡಾ. ರಾಜಕುಮಾರ್

ಡಾ. ರಾಜಕುಮಾರ್

ಕಲಾ ಕ್ಷೇತ್ರದ ಮಹಾನ್ ಶಿಖರ ವರನಟ ಡಾ. ರಾಜಕುಮಾರ್ ಅವರನ್ನು ಸಿದ್ದಗಂಗಾ ಶ್ರೀಗಳ ನಂತರ ನಮ್ಮ ಓದುಗರು ಆಯ್ಕೆ ಮಾಡಿದ್ದಾರೆ. ಅಣ್ಣಾವ್ರ ಪರವಾಗಿ ಶೇ. 13.2 ಅಂದರೆ 1600 ಓದುಗರು ಮತ ಚಲಾಯಿಸಿದ್ದಾರೆ.

ಪ್ರೊ. ಯು ಆರ್ ರಾವ್

ಪ್ರೊ. ಯು ಆರ್ ರಾವ್

ಪ್ರೊ. ಉಡುಪಿ ರಾಮಚಂದ್ರ ರಾವ್ ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನೇರಿಸಿ ದೇಶದ ಕೀರ್ತಿಯನ್ನು ವಿಶ್ವಾದ್ಯಂತ ಪಸರಿಸಿದ ಯು ಆರ್ ರಾವ್ ಪರ ಶೇ. 11.2 ಮತ ಚಲಾಯಿಸಿದ್ದಾರೆ (1361 ಮತಗಳು)

ಎನ್ ಆರ್ ನಾರಾಯಣಮೂರ್ತಿ

ಎನ್ ಆರ್ ನಾರಾಯಣಮೂರ್ತಿ

ಬೆಂಗಳೂರಿನಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪಿಸಿ ಐಟಿ ಜಗತ್ತು ಬೆಂಗಳೂರು ಕಡೆ ನೋಡುವಂತೆ ಮಾಡಿದ ಸಾಫ್ಟ್ ವೇರ್ ಉದ್ಯಮಿ ನಾರಾಯಣಮೂರ್ತಿ ಪರ ಶೇ.7.6 ಮತ ಚಲಾಯಿಸಿದ್ದಾರೆ. (ಅವರಿಗೆ ಬಿದ್ದ ಒಟ್ಟು ಮತ 925)

ಡಾ. ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್

ಸಚಿನ್ ತೆಂಡೂಲ್ಕರ್ ಮತ್ತು ವಿಷ್ಣುವರ್ಧನ್ ಅವರನ್ನು ಹೋಲಿಕೆ ಮಾಡಿ ಸಾಹಸಸಿಂಹ ವಿಷ್ಣುವಿಗೂ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಫೇಸ್ ಬುಕ್ ನಲ್ಲಿ ವಿಷ್ಣು ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Readers choice for Bharat Ratna award from Karnataka. 'Oneindia Kannada' has published poll question 'Who is the best choice for Bharat Ratna award' and readers opted Dr. Siddaganga Seer is the best choice from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more