ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ-ಬಿಟಿ ಕಂಪನಿಗಳು ತೆರೆಯುತ್ತಾ: ಸಚಿವ ಮಾಧುಸ್ವಾಮಿ ಏನು ಹೇಳಿದ್ರು?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಕೊರೊನಾ ಲಾಕ್‌ಡೌನ್‌ ಸಡಿಲಗೊಳಿಸುವುದಿಲ್ಲ, ಮೇ 3ರವರೆಗೂ ಯಾವುದೇ ಐಟಿ-ಬಿಟಿ ಕಂಪನಿಗಳು ತೆರೆಯುವಹಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಪ್ರಿಲ್ 20ರಿಂದಲೇ ಐಟಿ, ಬಿಟಿ ಕಂಪನಿಗಳನ್ನು ತೆರೆಯಬಹುದು ಶೇ.33ರಷ್ಟು ಉದ್ಯೋಗಿಗಳು ಕಚೇರಿಗೆ ಬರಬಹುದು ಹಾಗೂ ಸಾಕಷ್ಟು ಕಂಡೀಷನ್‌ಗಳನ್ನು ಹಾಕಲಾಗಿತ್ತು. ಆದರೆ ಇದೀಗ ಕ್ಯಾಬಿನೆಟ್ ಸಭೆಯಲ್ಲಿ ಐಟಿ-ಬಿಟಿ ಕಂಪನಿ ಓಪನ್ ಮಾಡುವ ಹಾಗಿಲ್ಲ ಎಂದು ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಧುಸ್ವಾಮಿ ಘೋಷಣೆ ಮಾಡಿದ್ದಾರೆ. ಕೊರೊನಾವನ್ನು ಹತೋಟಿಗೆ ತರಲೇಬೇಕು ಅನ್ನೋ ತೀರ್ಮಾನವನ್ನ ಸರ್ಕಾರ ಮಾಡಿದೆ.

ಏಪ್ರಿಲ್ 20ರ ನಂತರ ಐಟಿ ಕಂಪನಿ ಓಪನ್ ವಿಥ್ ಕಂಡೀಷನ್ಸ್ ಅಪ್ಲೈಏಪ್ರಿಲ್ 20ರ ನಂತರ ಐಟಿ ಕಂಪನಿ ಓಪನ್ ವಿಥ್ ಕಂಡೀಷನ್ಸ್ ಅಪ್ಲೈ

ಹೀಗಾಗಿ ಕೊರೊನಾ ವಾರಿಯರ್ಸ್ ಗೆ ರಕ್ಷಣೆ ಕೊಡುತ್ತೇವೆ. ಅದೇ ರೀತಿ ಅವರಿಗೆ ತೊಂದರೆ ಕೊಟ್ಟರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧುಸ್ವಾಮಿ ಎಚ್ಚರಿಕೆ ನೀಡಿದರು. ಸರ್ಕಾರ 21ರ ತನಕ ಹಿಂದಿನ ನಿಯಮ ಮುಂದುವರಿಯುತ್ತೆ ಅಂತ ಆದೇಶ ಮಾಡಿದ್ದು, 21ರ ನಂತರ ಸಡಿಲ ಆಗುತ್ತದೆ ಅಂತ ಆದೇಶ ಮಾಡಿಲ್ಲ. ಹಾಗಾಗಿ ಇಂದಿನ ಕ್ಯಾಬಿನೆಟ್ ತೀರ್ಮಾನದಂತೆ ಮೇ 3ರ ತನಕ ಲಾಕ್‌ಡೌನ್ ಮುಂದುವರಿಯುತ್ತೆ ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಮಾಹಿತಿ ನೀಡಿದರು.

ಮೇ 3ರವರೆಗೂ ಲಾಕ್‌ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ

ಮೇ 3ರವರೆಗೂ ಲಾಕ್‌ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ

ಮೇ 3ರ ತನಕ ಲಾಕ್‌ಡೌನ್ ಇರುತ್ತದೆ. ಹೀಗಾಗಿ ಯಾವುದೇ ವಿನಾಯಿತಿ ಇರಲ್ಲ. ರಾಜ್ಯವೇ ಫುಲ್ ಲಾಕ್‌ಡೌನ್ ಆಗುತ್ತದೆ.

ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆಗೆ ಒಪ್ಪಿಗೆ

ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆಗೆ ಒಪ್ಪಿಗೆ

ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಆದ್ದರಿಂದ ರಾಜ್ಯದಲ್ಲಿ ನಾಳೆಯಿಂದ ಫುಲ್ ಕಠಿಣ ನಿಯಮಗಳು ಜಾರಿಯಾಗಲಿದೆ. ಲಾಕ್‌ಡೌನ್‌ನನ್ನು ಮೇ.3ರ ತನಕ ಮುಂದುವರಿಸಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದರು.

Job cuts: ಡಿಸಿಎಂ ಸಲಹೆಗೆ ತಲೆದೂಗಿದ ಬೆಂಗಳೂರಿನ ಐಟಿ ಮುಖ್ಯಸ್ಥರುJob cuts: ಡಿಸಿಎಂ ಸಲಹೆಗೆ ತಲೆದೂಗಿದ ಬೆಂಗಳೂರಿನ ಐಟಿ ಮುಖ್ಯಸ್ಥರು

ಈಗಿರುವ ಲಾಕ್‌ಡೌನ್ ಮುಂದುವರೆಯುತ್ತೆ

ಈಗಿರುವ ಲಾಕ್‌ಡೌನ್ ಮುಂದುವರೆಯುತ್ತೆ

ಈಗಿರುವ ಲಾಕ್‍ಡೌನ್ ಮುಂದುವರಿಯುತ್ತೆ. ಯಾವುದೇ ಬದಲಾವಣೆ ಇಲ್ಲ. ಎರಡು-ಮೂರು ದಿನದಲ್ಲಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದರೆ ಆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ, ಬಿಟಿ ಕಂಪನಿ ಮತ್ತು ಕಾರ್ಖಾನೆ ಎಲ್ಲವೂ ಬಂದ್ ಆಗಲಿದೆ. ಹೀಗಾಗಿ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಯುತ್ತೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಪಾದರಾಯನಪುರ ಗಲಾಟೆ ಪ್ರಕರಣ

ಪಾದರಾಯನಪುರ ಗಲಾಟೆ ಪ್ರಕರಣ

ಇದೇ ವೇಳೆ ಪಾದರಾಯನಪುರದ ಗಲಾಟೆಯ ಬಗ್ಗೆ ಮಾತನಾಡಿ, ಪಾದರಾಯನಪುರ ಗಲಾಟೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಕೇರಳ ಮತ್ತು ಉತ್ತರಪ್ರದೇಶ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನೇ ಜಾರಿ ಮಾಡುತ್ತೇವೆ. ಯಾರಾದರೂ ಪಾಲನೆ ಮಾಡಲಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

English summary
Corona Lockdown will not be loosened and no IT-BT companies will open till May 3 Minister Madhuswamy said after Cabinet meeting on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X