ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲ ಕುರಿತು ಶ್ರೀನಿವಾಸ ಗೌಡ ಹೇಳಿಕೆ : ಎಸಿಬಿಗೆ ಪ್ರಶ್ನೆಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 22 : 'ಶಾಸಕ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಅವರು 5 ಕೋಟಿ ರೂ. ಮುಂಗಡ ನೀಡಿದ್ದರು' ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರ ಈ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಈ ಹೇಳಿಕೆ ಆಧರಿಸಿ ಸಾಮಾಜಿ ಕಾರ್ಯಕರ್ತ ಹನುಮೇಗೌಡ, ಪ್ರಶಾಂತ್, ಭ್ರಷ್ಟಾಚಾರ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಕುರಿತು ಎಸಿಬಿ ತನಿಖೆ ನಡೆಯುತ್ತಿದೆ.

ಬಿಜೆಪಿ 30 ಕೋಟಿ ರೂ. ಆಮಿಷವೊಡ್ಡಿದ್ದ ಆರೋಪ ಸುಳ್ಳೆಂದು ಒಪ್ಪಿಕೊಂಡ ಜೆಡಿಎಸ್ ಶಾಸಕಬಿಜೆಪಿ 30 ಕೋಟಿ ರೂ. ಆಮಿಷವೊಡ್ಡಿದ್ದ ಆರೋಪ ಸುಳ್ಳೆಂದು ಒಪ್ಪಿಕೊಂಡ ಜೆಡಿಎಸ್ ಶಾಸಕ

ಎಸಿಬಿ ವಿಚಾರಣೆಗೆ ಹಾಜರಾದ ಶ್ರೀನಿವಾಸ ಗೌಡ ಅವರು, 'ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ನನಗೆ 5 ಕೋಟಿ ಮುಂಗಡ ನೀಡಿರಲಿಲ್ಲ. ಆಪರೇಷನ್ ಕಮಲ ಪ್ರಯತ್ನವನ್ನು ವಿಫಲಗೊಳಿಸಲು ಸುಳ್ಳು ಹೇಳಿದೆ' ಎಂದು ಉಲ್ಟಾ ಹೊಡೆದಿದ್ದಾರೆ.

ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರುಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು

ಈ ಕುರಿತು ಪ್ರತಿಕ್ರಿಯೆ ನೀಡಿರುವ ರವಿಕೃಷ್ಣ ರೆಡ್ಡಿ ಅವರು, ಲಂಚದ ಪ್ರಕರಣ ಎಸಿಬಿ ವಿಚಾರಣೆಯಲ್ಲಿ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಆರೋಪಿಸಿದ್ದಾರೆ ಮತ್ತು ಎಸಿಬಿಯ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಸಿಬಿಗೆ ಪ್ರಶ್ನೆಗಳು

ಎಸಿಬಿಗೆ ಪ್ರಶ್ನೆಗಳು

* ಸಾಂದರ್ಭಿಕ ಸಾಕ್ಷಗಳನ್ನು ಗಮನಿಸಿದಾಗ ಶಾಸಕ ಗೌಡರು ಒಂದೂವರೆ ತಿಂಗಳ ಹಿಂದೆ ಮಾಡಿದ ನೇರ ಆಪಾದನೆಗೆ ಇಲ್ಲಿಯವರೆಗೂ ಬಿಜೆಪಿಯ ಮೂವರೂ ನಾಯಕರು (ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಪ್ರತಿಕ್ರಿಯಿಸಿಲ್ಲ. ಆರೋಪವನ್ನು ನಿರಾಕರಿಸಿಲ್ಲ.

* ಇಷ್ಟೇ ಸಾಕು ಅವರಿಗೂ ಈ ಪ್ರಕರಣ ಎಲ್ಲಿಗೆ ಬೇಕಾದರೂ ಹೋಗಬಹುದು ಎಂಬ ಭಯ ಹುಟ್ಟಿದೆ ಎಂದು ಭಾವಿಸಲು. ಹಾಗಾಗಿ ಅವರನ್ನು ಇಲ್ಲಿಯವರೆಗೂ ಪ್ರತ್ಯೇಕವಾಗಿ ಯಾಕೆ ನೀವು ವಿಚಾರಣೆಗೆ ಕರೆದಿಲ್ಲ?

* ಶಾಸಕ ಶ್ರೀನಿವಾಸಗೌಡ ಮತ್ತು ಇತರ ಮೂವರು ಬಿಜೆಪಿ ನಾಯಕರ ಮಧ್ಯೆ ನಡೆದಿರಬಹುದಾದ ಫೋನ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೀರಾ?

ಮಾಹಿತಿ ಲಭ್ಯವಾಗಿದೆಯೇ?

ಮಾಹಿತಿ ಲಭ್ಯವಾಗಿದೆಯೇ?

* ಈ ಸದರಿ ಮೂವರು ಬಿಜೆಪಿ ನಾಯಕರುಗಳು ಮತ್ತು ಶಾಸಕ ಶ್ರೀನಿವಾಸ ಗೌಡರ ಫೋನ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಪರಿಶೀಲಿಸಿದಾಗ ನಿಮಗೆ ನಾಲ್ಕು ಜನ ಒಂದೇ ಕಡೆ ಏಕಕಾಲದಲ್ಲಿ ಇರುವ ಮಾಹಿತಿ ಲಭ್ಯವಾಗಿದೆಯೇ, ಇಲ್ಲವೇ?

* ಶಾಸಕ ಶ್ರೀನಿವಾಸ ಗೌಡರ ಮನೆಯ ಸುತ್ತಮುತ್ತ ಇರಬಹುದಾದ ಸಿಸಿಟಿವಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದ್ದೀರಾ?

ಮಂಪರು ಪರೀಕ್ಷೆ

ಮಂಪರು ಪರೀಕ್ಷೆ

* ಈ ಪ್ರಕರಣದಲ್ಲಿ ಶ್ರೀನಿವಾಸ ಗೌಡರನ್ನು ಮಂಪರು/ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಯಾವ ಕ್ರಮ ಕೈಗೊಂಡಿದ್ದೀರಿ?

* ಹಣ ನೀಡಿದ್ದರು ಎನ್ನಲಾದ ಬಿಜೆಪಿ ನಾಯಕರುಗಳ ಈ ಅವಧಿಯ ಬ್ಯಾಂಕ್ ಖಾತೆ ಮತ್ತು/ಅಥವಾ ಇತರೆ ಹಣಕಾಸು ವಹಿವಾಟು ವಿವರಗಳನ್ನು ಪರಿಶೀಲಿಸಿದ್ದೀರಾ?

ತನಿಖೆಯನ್ನು ಮಾಡಿ

ತನಿಖೆಯನ್ನು ಮಾಡಿ

ಇಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾಡಬೇಕಾದ ಪ್ರಾಥಮಿಕ ತನಿಖಾ ಕೆಲಸಗಳು. ಹಾಗಾಗಿ ತಾವುಗಳು ಇಲ್ಲಿಯವರೆಗೂ ಇದನ್ನು ಮಾಡದೇ ಇದ್ದಲ್ಲಿ ದಯವಿಟ್ಟು ಈ ನಿಟ್ಟಿನಲ್ಲಿ ತನಿಖೆ ಮಾಡಿ ಎಂದು ಕೋರುತ್ತೇನೆ. ಆ ಮೂಲಕ, ಭ್ರಷ್ಟಾಚಾರ ನಿಗ್ರಹ ದಳವು ಒಂದು ಸ್ವತಂತ್ರ ತನಿಖಾ ಸಂಸ್ಥೆ ಮತ್ತು ಯಾವುದೇ ಪಟ್ಟಭದ್ರರ ಪ್ರಭಾವಕ್ಕೆ ಮಣಿಯುವುದಿಲ್ಲ ಎಂಬುದನ್ನು ನಿರೂಪಿಸಿ.

English summary
Anti Corruption Bureau (ACB) investigating Kolar JD(S) MLA K.Srinivas Gowda statement on Operation Kamala. Anti-graft activist Ravi Krishna Reddy asked several questions for ACB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X