• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಶ್ರೀರಾಮುಲು ಆಪ್ತ ಮಹೇಶ್ ನಿಗೂಢ ಸಾವಿನ ತನಿಖೆಗೆ ಆಗ್ರಹ

|
Google Oneindia Kannada News

ಬೆಂಗಳೂರು, ಜುಲೈ 09: ಆರೋಗ್ಯ ಸಚಿವ ಬಿ.ಶ್ರೀರಾಮುಲುರವರ ಆಪ್ತರಾಗಿದ್ದ ಮಹೇಶ್ ರೆಡ್ಡಿ ಎನ್ನುವವರ ಸಾವಿನ ವಿಚಾರವಾಗಿ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಕೋರಿದ್ದಾರೆ.

ಮಹೇಶ್ ರೆಡ್ಡಿ ಅಲಿಯಾಸ್ ಉಮಾಮಹೇಶ್ವರ ರೆಡ್ಡಿ ಅನ್ನುವ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರು ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲುರವರ ಆಪ್ತರಾಗಿದ್ದರು ಮತ್ತು ಅವರ ಹಿಂಬಾಲಕ/ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿಯೇ ಸಾವಿಗೀಡಾಗಿದ್ದು, ತದನಂತರ ಅವರ ಶವವನ್ನು ಬಳ್ಳಾರಿಗೆ ಸಾಗಿಸಿ, ಅದೊಂದು ಸಹಜ ಸಾವು ಎಂದು ಹೇಳಲಾಗುತ್ತಿದೆ. ಅನೇಕ ಅಕ್ರಮ ಅವ್ಯವಹಾರಗಳ ಬಗ್ಗೆ ಈತನಿಗೆ ಗೊತ್ತಿತ್ತು ಎಂಬ ಮಾಹಿತಿಯಿದೆ. ಕೊವಿಡ್ 19 ಪರೀಕ್ಷೆ, ಅಸಹಜ ಸಾವು ಎಲ್ಲದರ ಬಗ್ಗೆ ಗುಮಾನಿಯಿದೆ ಎಂದು ರವಿ ಕೃಷ್ಣಾರೆಡ್ಡಿ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಪತ್ರವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ.

''ಕೋವಿಡ್ ಕಿಟ್: ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ''ಕೋವಿಡ್ ಕಿಟ್: ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ"

ಗೆ:
ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕರು (DG & IGP)
ಕರ್ನಾಟಕ ಸರ್ಕಾರ
ನೃಪತುಂಗ ರಸ್ತೆ, ಬೆಂಗಳೂರು.

CC:
Chief Minister of Karnataka
Basavaraj Bommai (ಗೃಹ ಸಚಿವರು)

ಮಾನ್ಯರೇ,

ವಿಷಯ: ಸಚಿವ ಬಿ.ಶ್ರೀರಾಮುಲುರವರ ಆಪ್ತರಾಗಿದ್ದ ಮಹೇಶ್ ರೆಡ್ಡಿ ಎನ್ನುವವರ ಸಾವಿನ ವಿಚಾರವಾಗಿ ತನಿಖೆ ನಡೆಸಬೇಕೆಂದು ಕೋರಿ....

ಮಹೇಶ್ ರೆಡ್ಡಿ ಅಲಿಯಾಸ್ ಉಮಾಮಹೇಶ್ವರ ರೆಡ್ಡಿ ಅನ್ನುವ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರು ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲುರವರ ಆಪ್ತರಾಗಿದ್ದರು ಮತ್ತು ಅವರ ಹಿಂಬಾಲಕ/ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಅವರು ದಿನಾಂಕ: 29-04-2020 ರಂದು ತೀರಿಕೊಂಡಿರುತ್ತಾರೆ. "ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಸಚಿವರೊಬ್ಬರ ಅಧಿಕೃತ ನಿವಾಸದಲ್ಲಿಯೇ ಸಾವಿಗೀಡಾಗಿದ್ದು, ತದನಂತರ ಅವರ ಶವವನ್ನು ಬಳ್ಳಾರಿಗೆ ಸಾಗಿಸಿ, ಅದೊಂದು ಸಹಜ ಸಾವು ಎಂದು ಹೇಳಲಾಗುತ್ತಿದೆ" ಎಂದು ಇತ್ತೀಚಿಗೆ ಕೆಲವು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುವುದು ತಮ್ಮ ಗಮನಕ್ಕೂ ಬಂದಿರಬಹುದು ಎಂದು ಭಾವಿಸುತ್ತೇನೆ. ಆ ವ್ಯಕ್ತಿ ಇದೇ ಮಹೇಶ್ ಆಗಿದ್ದು, ಅವರ ಸಾವು ಸಹಜ ಸಾವು ಅಲ್ಲ, ಅದೊಂದು ಕೊಲೆ ಎನ್ನುವ ಗಾಳಿಮಾತುಗಳು ತೇಲಾಡುತ್ತಿವೆ. ಹಾಗೆಯೇ ಈ ಸಮಯದಲ್ಲಿ ಆಗಬೇಕಿದ್ದ ಶವದ ಕೋವಿಡ್-19 ಪರೀಕ್ಷೆ ಆಗಿಲ್ಲ ಮತ್ತು ಅಸಹಜ ಸಾವು ಎಂಬ ಸಂಶಯ ಇದ್ದರೂ ಮರಣೋತ್ತರ ಪರೀಕ್ಷೆ ಆಗಿರುವುದಿಲ್ಲ ಎನ್ನುವ ಮಾಹಿತಿ ಇದೆ.

ತಮಗೂ ಗೊತ್ತಿರುವ ಹಾಗೆ ಇತ್ತೀಚಿಗೆ Lockdown ಸಮಯದಲ್ಲಿ ತಮ್ಮ ಇಲಾಖೆಯ ಕೆಲವು ಅಧಿಕಾರಿಗಳೇ ಅಕ್ರಮ ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಲು ಸಿಗರೇಟ್ ಮಾರಾಟಗಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಸಿಕ್ಕಿಹಾಕಿಕೊಂಡಿರುವ ಪ್ರಕರಣದಲ್ಲಿ ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಜೊತೆಗೆ ಮಹೇಶರಿಗೂ ಸಂಪರ್ಕ ಇತ್ತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಹಾಗೆಯೇ, ಕೋವಿಡ್-19 ನಿಯಂತ್ರಣಕ್ಕೆಂದು ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ವೈದ್ಯಕೀಯ ಉಪಕರಣ ಮತ್ತಿತರ ಸಾಮಗ್ರಿಗಳ ಖರೀದಿಗೆ ವೆಚ್ಚ ಮಾಡಿದ್ದು, ಅದರಲ್ಲಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು (ಈ ವಿಚಾರವಾಗಿ ನಮ್ಮ ಪಕ್ಷದ ವತಿಯಿಂದ ACBಯಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ) ಆರೋಗ್ಯ ಇಲಾಖೆ ಸಚಿವರಿಗೆ ಆಪ್ತರಾಗಿದ್ದ ಕಾರಣಕ್ಕೆ ಆ ವ್ಯವಹಾರಗಳಲ್ಲಿ ಈ ವ್ಯಕ್ತಿಯೂ ಪಾಲ್ಗೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

crime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣcrime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣ

ಇಂತಹ ಸ್ಫೋಟಕ ಮಾಹಿತಿ ಇರುವ ವ್ಯಕ್ತಿ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಬಲ್ಲರು ಎನ್ನುವ ಕಾರಣಕ್ಕೆ ಅಥವಾ ವ್ಯವಹಾರ ಸಂಬಂಧಿತ ವಿವಾದದಿಂದಾಗಿ ಈ ವ್ಯಕ್ತಿಯ ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲಾಗುತ್ತಿದೆ ಎನ್ನುವ ಮಾತುಗಳು ಬಳ್ಳಾರಿ ನಗರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ ಮತ್ತು ಬಹುಶಃ ಅಲ್ಲಿಯ ಪೊಲೀಸರಿಗೂ ಇದರ ಬಗ್ಗೆ ಖಚಿತ ಮಾಹಿತಿ ಇರುತ್ತದೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಮಾಧ್ಯಮಗಳಲ್ಲಿ ಊಹಾಪೋಹದ ವರದಿ ಬಂದಾಗಲೇ ತಾವು ಮತ್ತು ತಮ್ಮ ಇಲಾಖೆಯವರು ಸ್ವಯಂಪ್ರೇರಿತರಾಗಿ ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿರುತ್ತೀರಿ ಎಂದು ಭಾವಿಸುತ್ತೇನೆ.

"ಕರ್ನಾಟಕದಲ್ಲಿ ಕಳ್ಳ ಸಾಗಣೆ ಸಿಗರೇಟ್ ಮಾರಾಟಕ್ಕೆ ಕಡಿವಾಣವೇ ಇಲ್ಲ"

ಇಲ್ಲವಾದಲ್ಲಿ, ತಾವು ಈ ಕೂಡಲೇ ಈ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದೆ ಇಡಬೇಕು ಎಂದು ಈ ಮೂಲಕ ಕೋರುತ್ತೇನೆ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, Karnataka Rashtra Samithi ಪಕ್ಷ.

English summary
Karnataka Rashtra Samithi President Ravi Krishna Reddy has written letter to Karnataka Government demand probe into B Sriramulu aide Mahesh Reddy death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X