ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್‌ನಲ್ಲಿ ಮಟನ್ ಖಾದ್ಯಗಳನ್ನು ಆರ್ಡರ್ ಮಾಡುವ ಮುನ್ನ ಎಚ್ಚರ

|
Google Oneindia Kannada News

Recommended Video

ಮಟನ್ ಆರ್ಡರ್ ಮಾಡುವ ಮುನ್ನ ಎಚ್ಚರ ಎಚ್ಚರ! | MUTTON | PRICE HIKE | 700 | ONEINDIA KANNADA

ಬೆಂಗಳೂರು, ಜನವರಿ 29: ಇಷ್ಟು ದಿನ ರಾಜ್ಯದಲ್ಲಿ ತರಕಾರಿಗಳ ಬೆಲೆ ಏರಿಕೆಯಾದರೆ ಇದೀಗ ಮಾಂಸದ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ.

ಮಟನ್ ಬೆಲೆ 500 ರೂನಿಂದ ಏಕಾಏಕಿ 700 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಹೋಟೆಲ್‌ಗೆ ಹೋಗಿ ಮಟನ್ ಕರಿ, ಮಟನ್ ಬಿರಿಯಾನಿ ಸೇರಿದಂತೆ ಇತರೆ ಖಾದ್ಯಗಳನ್ನು ಆರ್ಡರ್ ಮಾಡುವಾಗ ಸ್ವಲ್ಪ ಎಚ್ಚರದಿಂದಿರಿ.

ಮಟಲ್ ಬೆಲೆ ದಿಢೀರ್ 700ರೂ ತಲುಪಿದ್ದು, ಮಾಂಸಾಹಾರಿ ಹೋಟೆಲ್‌ಗಳ ಖಾದ್ಯಗಳ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಸಾಕಷ್ಟು ಕುಗ್ಗಿದೆ. ರಾಜ್ಯದಲ್ಲಿ ಕುರಿಗಳ ಸಂಖ್ಯೆ 20 ಕೋಟಿ ರೂ ಇರಬೇಕಿತ್ತು. ಆದರೆ 1 ಕೋಟಿ 20 ಲಕ್ಷ ಕುರಿ, 70 ಲಕ್ಷ ಮೇಕೆಗಳಿವೆ. 2012ರ ಗಣತಿ ಪ್ರಕಾರ ರಾಜ್ಯದಲ್ಲಿ 90ಲಕ್ಷ ಕುರಿಗಳು ಇದ್ದವು.

ರಾಜ್ಯದಲ್ಲಿ ಕುರಿ ಸಾಕಾಣಿಕೆ ಇಳಿಕೆ

ರಾಜ್ಯದಲ್ಲಿ ಕುರಿ ಸಾಕಾಣಿಕೆ ಇಳಿಕೆ

ರಾಜ್ಯದಲ್ಲಿ ಕುರಿ ಸಾಕಾಣಿಕೆ ಪ್ರಮಾಣ ಇಳಿಕೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ 2-3 ತಿಂಗಳ ಹಿಂದೆ ಮಟನ್ ಬೆಲೆ ಕೆಜಿಗೆ 450-500 ರೂ ಇದ್ದಿದ್ದು ಈಗ 700 ರೂ.ಗೆ ಏರಿಕೆಯಾಗಿದೆ.

ಈರುಳ್ಳಿ ಉತ್ಪಾದನೆ ಕುಸಿತದಿಂದ ಗ್ರಾಹಕರು ಕಂಗಾಲು

ಈರುಳ್ಳಿ ಉತ್ಪಾದನೆ ಕುಸಿತದಿಂದ ಗ್ರಾಹಕರು ಕಂಗಾಲು

ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಕುಸಿತ ಕಂಡು ಗ್ರಾಹಕರ ಕಣ್ಣಲ್ಲೂ ನೀರು ತರಿಸಿತ್ತು. ಇದೀಗ ಎಲ್‌ಪಿಜಿ ಗ್ಯಾಸ್, ತರಕಾರಿ ಬೆಲೆಗಳೂ ಹೆಚ್ಚಳವಾಗಿರುವುದರೊಂದಿಗೆ ಮಟನ್ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ.

ರಾಜ್ಯದಲ್ಲಿ ಬರದಿಂದ ಮೇವು, ನೀರಿನ ತೊಂದರೆ

ರಾಜ್ಯದಲ್ಲಿ ಬರದಿಂದ ಮೇವು, ನೀರಿನ ತೊಂದರೆ

ರಾಜ್ಯದಲ್ಲಿ ಬರದಿಂದ ಮೇವು, ನೀರಿನ ತೊಂದರೆ ಹೆಚ್ಚಾಗಿದೆ. ಪ್ರತಿ ವರ್ಷ ಫೆಬ್ರವರಿಯಿಂದ ಜೂನ್‌ನಲ್ಲಿ ಮೇವಿಗೆ ಕಷ್ಟವಿರುತ್ತದೆ. ಆದರೆ, ಈ ಹಿಂದಿನಂತೆ ರೈತರಿಂದ ಕುರಿ ಸಾಕಾಣಿಕೆಯಾಗುತ್ತಿಲ್ಲ. ಸಂಚಾರಿ ಕುರಿ ಸಾಕಾಣಿಕೆದಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನು ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ.

ಮಾರುಕಟ್ಟೆಯಲ್ಲಿ ಬಾಯ್ಲರ್ ಕೋಳಿ

ಮಾರುಕಟ್ಟೆಯಲ್ಲಿ ಬಾಯ್ಲರ್ ಕೋಳಿ

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಾಯ್ಲರ್ ಕೋಳಿ ಲಗ್ಗೆ ಇಟ್ಟಿರುವುದು ಸಹ ಮಟನ್ ಮಾರಾಟಗಾರರಿಗೆ ಹೊಡೆತ ನೀಡಿದೆ. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಯುಗಾದಿ ವೇಳೆಗೆ ಮಾಂಸದ ಬೆಲೆ 800 ರೂ. ಗೂ ಅಧಿಕವಾಗಲಿದೆ.

English summary
The price of poultry products and mutton have risen by up to 20 per cent in a month.Mutton is retailing here at Rs 700 a kg, from Rs 500 a kg about a month before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X