ಹಾವೇರಿ: ಅಂಧನ ಕೈ ಹಿಡಿದು ಸಾರ್ಥಕತೆ ಮೆರೆದ ಯುವತಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹಾವೇರಿ, ಜೂನ್ 19: ಆತ ಎರಡೂ ಕಣ್ಣುಗಳು ಕಾಣದಿರೋ ಅಂಧನಾಗಿದ್ದರೂ, ಆತನ ಬಾಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಆತನ ಕೈ ಹಿಡಿಯುವ ಮೂಲಕ ಮಾದರಿಯಾಗಿದ್ದಾಳೆ.

ತಾನು ಎಸ್‌ಎಸ್‌ಎಲ್‌ಸಿ ವರೆಗೆ ಓದಿದ್ದರೂ ಅಂಧ ಯುವಕನನ್ನು ಮದುವೆಯಾಗಿರುವುದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಯುವತಿ ನಂದಾ. ಆ ಅದೃಷ್ಟವಂತ ಯುವಕ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮದ ಜಗದೀಶ್.

ಹಾವೇರಿಯಲ್ಲಿ ಕಾಂಗ್ರೆಸ್ ಮೇಲೆ ಹರಿಹಾಯ್ದ ಗುಜರಾತ್ ಸಿಎಂ ರೂಪಾನಿ

Ranebennur Woman married to a blind man

ಪ್ರತಿಭಾವಂತನಾದ ಜಗದೀಶ್ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ ಪದವೀಧರ. ದೃಷ್ಟಿ ವೈಕಲ್ಯ ಆತನ ಓದಿಗೆ ಎಂದೂ ಅಡ್ಡಿಯಾಗಲಿಲ್ಲ. ತರಗತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದ ಜಗದೀಶನಿಗೆ ದೃಷ್ಟಿ ಇಲ್ಲದಿದ್ದರೂ ಮನಸ್ಸಿನ ದೃಷ್ಟಿಗೆ ಮಂಕು ಬಡಿದಿಲ್ಲ. ಇಂಥ ಜಗದೀಶನ ಕೈ ಹಿಡಿಯುವ ಮೂಲಕ ಮಾದರಿಯಾಗಿರುವ ನಂದಾಳ ನಿರ್ಧಾರ ಎಲ್ಲರ ಪ್ರಶೆಂಸೆಗೆ ಕಾರಣವಾಗಿದೆ.

ಇಂಥ ಅಪರೂಪದ ಜೋಡಿಗೆ ಗುರುವಾರ ವಿವಾಹ ಬಂಧನ ಏರ್ಪಟ್ಟಿದ್ದು, ಹಾವೇರಿ ನಗರದ ಹರಸೂರು ಬಣ್ಣದ ಮಠದ ಆವರಣದಲ್ಲಿ. ಹುಟ್ಟು ಕುರುಡನಾಗಿರುವ ಜಗದೀಶನ ಇಬ್ಬರು ಸಹೋದರಿಯರಿಗೆ ಆಗಲೇ ವಿವಾಹ ಆಗಿತ್ತು. ಆದರೆ, ದೃಷ್ಟಿ ಇಲ್ಲದ ಜಗದೀಶನಿಗೆ ಮದುವೆ ಕನಸಾಗಿಯೇ ಉಳಿದಿತ್ತು. ಆದರೆ, ನಂದಾ ಆತನ ಬಾಳಲ್ಲಿ ಬೆಳಕಾಗಿ ಬಂದಿದ್ದಾರೆ. ಪರಸ್ಪರ ಎರಡೂ ಕುಟುಂಬಗಳ ಒಪ್ಪಿಗೆ ಮೇರಗೆ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

Ranebennur Woman married to a blind man

ಹಿಂದೂ ಸಂಪ್ರದಾಯದಂತೆ ಇಬ್ಬರಿಗೂ ಬಾಸಿಂಗ ಕಟ್ಟಿಕೊಂಡು ಹಾರ ಬದಲಾಯಿಸಿಕೊಂಡ ನೂತನ ಜೋಡಿ, ಅಂತಿಮವಾಗಿ ತಾಳಿ ಕಟ್ಟುವ ಮೂಲಕ ನಂದಾ ಜಗದೀಶನ ಬಾಳಲ್ಲಿ ಪ್ರವೇಶ ಮಾಡಿದಳು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಬಂದುಗಳು ಹಾಗೂ ಸ್ನೇಹಿತರು ನೂತನ ದಂಪತಿಗೆ ಹರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranebennur woman Nanda became a roll model to young stars when she married to a blind man from Navalgunda named Jagadish. The marriage was organized at Harasuru Bannada Matha.
Please Wait while comments are loading...