ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಹಬ್ಬ: ಕರ್ನಾಟಕದಲ್ಲಿ ಮೇ.2ರಂದು ಸಾರ್ವತ್ರಿಕ ರಜೆ ಘೋಷಿಸಿದ ಸರ್ಕಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಮುಸ್ಲಿಂ ಬಾಂಧವರ ಪವಿತ್ರ ಖುತುಬ್-ಎ-ರಂಜಾನ್ ಹಬ್ಬವನ್ನು ಮೇ 2ರಂದು ಆಚರಿಸುವುದಕ್ಕೆ ಮೂನ್ ಕಮಿಟಿಯು ತೀರ್ಮಾನಿಸಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮೇ.2ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ರಾಜ್ಯ ಸರ್ಕಾರವು ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ, ಮೇ 2, 2022ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ಪವಿತ್ರ ರಂಜಾನ್ ಹಬ್ಬದ ಆಚರಣೆಗೆ ರಜೆಯ ಸಿಹಿಸುದ್ದಿಯನ್ನು ನೀಡಿದೆ.

Ramadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆRamadan 2022 Time Table : ಸೆಹ್ರಿ, ಇಫ್ತಾರ್ ಸಮಯದ ಸಂಪೂರ್ಣ ಪಟ್ಟಿ ಇಲ್ಲಿದೆ

ಭಾರತದಲ್ಲಿ ಈ ವರ್ಷ ರಂಜಾನ್ ಅನ್ನು ಏಪ್ರಿಲ್ 2 ಅಥವಾ ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ 1-Ramadan-1443 ಸಂಜೆಯಿಂದ ಆರಂಭವಾಗಿದೆ. ಮೊದಲ ಉಪವಾಸವನ್ನು ಏಪ್ರಿಲ್ 3, 2022 ರಂದು ಆಚರಿಸಲಾಗುತ್ತಿದೆ.

Ramzan Festival: Karnataka Govt Declaration of universal leave on May 2nd

ಅರ್ಧಚಂದ್ರನನ್ನು ನೋಡಿದ ಬಳಿಕ ರಂಜಾನ್ ತಿಂಗಳ ಉಪವಾಸ ಆರಂಭಿಸಲಾಗಿತ್ತು. ಈ ಉಪವಾಸವು ಮೇ 2ರ ಸಂಜೆ ವೇಳೆಗೆ ಕೊನೆಯಾಗಲಿದೆ. ಅದು ಕೂಡಾ ಚಂದ್ರನ ದರ್ಶನದ ಮೇಲೆ ಆಧಾರಿತವಾಗಿರುತ್ತದೆ.

ರಂಜಾನ್ ತಿಂಗಳಿನಲ್ಲಿ ಉಪವಾಸ:

Ramzan Festival: Karnataka Govt Declaration of universal leave on May 2nd
ದೇಶಾದ್ಯಂತ ಮುಸ್ಲಿಮರು ಈ ಪವಿತ್ರ ರಂಜಾನ್ ತಿಂಗಳಿನಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಇದನ್ನು ರೋಜಾ ಎಂದು ಕರೆಯಲಾಗುತ್ತದೆ. ಉಪವಾಸದ ಸಮಯದಲ್ಲಿ, ಸೂರ್ಯೋದಯದ ಬಳಿಕ ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಆಹಾರ ಸೇವನೆ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನು ಸೆಹ್ರಿ ಎಂದು ಕರೆಯಲಾಗುತ್ತದೆ. ಬಳಿಕ ಸಂಜೆಯ ವೇಳೆಗೆ ಉಪವಾಸವನ್ನು ತೊರೆಯುತ್ತಾರೆ. ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.
English summary
Ramzan Festival: Karnataka Govt Declaration of universal leave on May 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X