ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದೆಲ್ಲೆಡೆ ಭಕ್ತಿ ಭಾವದ ಈದ್-ಉಲ್-ಫಿತ್ರ್‌ ಆಚರಣೆ

|
Google Oneindia Kannada News

ಬೆಂಗಳೂರು, ಜೂನ್ 05: ರಾಜ್ಯದೆಲ್ಲೆಡೆ ಇಂದು ಸಂಭ್ರಮದ ಈದ್-ಉಲ್-ಫಿತ್ರ್‌ ಅನ್ನು ಮುಸ್ಲಿಂ ಸಮುದಾಯದವರು ಭಕ್ತಿ-ಭಾವದಿಂದ ಆಚರಣೆ ಮಾಡಿದರು.

ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಉಪವಾಸ ವೃತ ಪೂರೈಸಿರುವ ಮುಸ್ಲಿಂ ಬಾಂಧವರು ಇಂದು ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಕೋರಿಕೊಂಡರು.

ಬೆಂಗಳೂರು: ರಂಜಾನ್ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ ಬೆಂಗಳೂರು: ರಂಜಾನ್ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ

ಬಹಳ ಅಪರೂಪವಾಗಿ ರಾಜ್ಯದೆಲ್ಲೆಡೆ ಇಂದು ಒಂದೇ ದಿನ ಈದ್-ಉಲ್ ಫಿತ್ರ್ ಅನ್ನು ಆಚರಣೆ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಚಂದ್ರನ ದರ್ಶನವೂ ರಾಜ್ಯದೆಲ್ಲೆಡೆ ಒಂದೇ ಬಾರಿ ಆಗಿದ್ದರಿಂದ ಇಂದು ಎಲ್ಲೆಡೆ ಒಟ್ಟಿಗೆ ಆಚರಣೆ ಮಾಡಲಾಗುತ್ತಿದೆ.

Ramzan celebrated all over the Karnataka today

ಸಾಮಾನ್ಯವಾಗಿ ಕರಾವಳಿಯ ಮುಸ್ಲಿಂರು ಕೇರಳದವರೊಂದಿಗೆ ಒಂದು ದಿನ ಮುಂಚಿತವಾಗಿ ರಂಜಾನ್ ಆಚರಿಸುತ್ತಿದ್ದರು. ಆದರೆ ಈ ಬಾರಿ ಚಂದ್ರ ದರ್ಶನದಿಂದಾಗಿ ಒಂದೇ ದಿನ ರಾಜ್ಯದೆಲ್ಲೆಡೆ ರಂಜಾನ್ ಆಚರಿಸುವಂತಾಗಿದೆ.

ರಂಜಾನ್ ಹಬ್ಬಕ್ಕೆ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮುಂತಾದ ರಾಜಕೀಯ ಮುಖಂಡರು, ಸಿನಿಮಾ ನಟರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

English summary
Ramzan celebrated in all over the Karnataka today. Muslim community people visit Masjid or Edgar and pray, and wish to each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X