ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಸರ್ಕಾರಿ ಬಂಗಲೆ ಬಳಸುತ್ತಿರುವ ರಮೇಶ್ ಜಾರಕಿಹೊಳಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04 : ಮಾಜಿ ಸಚಿವ, ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವುದೇ ಅಧಿಕಾರ ಇಲ್ಲದಿದ್ದರೂ ಸರ್ಕಾರಿ ನಿವಾಸವನ್ನು ಅವರು ಖಾಲಿ ಮಾಡಿಲ್ಲ.

ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡು ಸುಮಾರು 10 ತಿಂಗಳು, ಶಾಸಕ ಸ್ಥಾನದಿಂದ ಆನರ್ಹಗೊಂಡು 2 ತಿಂಗಳು ಕಳೆದಿದೆ. ಸಚಿವರಾಗಿದ್ದಾಗ ಅವರಿಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಮಾತ್ರ ಅವರು ಖಾಲಿ ಮಾಡಿಲ್ಲ.

ಮುಗಿಯದ ಶೀತಲ ಸಮರ: ರಮೇಶ್ ಜಾರಕಿಹೊಳಿಗೆ ಡಿಕೆಶಿ ಪರೋಕ್ಷ ಟಾಂಗ್ಮುಗಿಯದ ಶೀತಲ ಸಮರ: ರಮೇಶ್ ಜಾರಕಿಹೊಳಿಗೆ ಡಿಕೆಶಿ ಪರೋಕ್ಷ ಟಾಂಗ್

2016ರಲ್ಲಿ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಸರ್ಕಾರಿ ಬಂಗಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಂಚಿಕೆ ಮಾಡಿತ್ತು. ಈಗ ಸಚಿವರೂ ಅಲ್ಲ, ಶಾಸಕ ಸ್ಥಾನದಿಂದಲೂ ಅನರ್ಹಗೊಂಡಿದ್ದಾರೆ. ಆದರೆ, ಸರ್ಕಾರಿ ಬಂಗಲೆಯನ್ನು ಮಾತ್ರ ಉಪಯೋಗಿಸುತ್ತಿದ್ದಾರೆ, ಅಲ್ಲಿಯೇ ಸಭೆಗಳನ್ನು ಮಾಡುತ್ತಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?

ಬೆಂಗಳೂರು ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‌ನಲ್ಲಿನ ನಂ.5ನೇ ನಿವಾಸವನ್ನು ರಮೇಶ್ ಜಾರಕಿಹೊಳಿ ಉಪಯೋಗಿಸುತ್ತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಸರ್ಕಾರಿ ನಿವಾಸವನ್ನು ಖಾಲಿ ಮಾಡಿಸಲು ಅಧಿಕಾರಿಗಳು ಸಹ ಮುಂದಾಗಿಲ್ಲ. ಅಧಿಕಾರ ಇಲ್ಲವಾದಲ್ಲಿ 60 ದಿನದಲ್ಲಿ ನಿವಾಸ ಖಾಲಿ ಮಾಡಬೇಕು ಎಂಬ ನಿಯಮಕ್ಕೆ ಬೆಲೆಯೇ ಇಲ್ಲವಾಗಿದೆ.

ಚಿನ್ನ ಮಾರಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ದೇಣಿಗೆ ಕೊಡಲು ಮುಂದಾದ ಶ್ರೀಶೈಲ ಪೀಠಚಿನ್ನ ಮಾರಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ದೇಣಿಗೆ ಕೊಡಲು ಮುಂದಾದ ಶ್ರೀಶೈಲ ಪೀಠ

ಸಚಿವ ಸ್ಥಾನವಿಲ್ಲ, ಶಾಸಕರೂ ಅಲ್ಲ

ಸಚಿವ ಸ್ಥಾನವಿಲ್ಲ, ಶಾಸಕರೂ ಅಲ್ಲ

ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿದ್ದರು. ಬಳಿಕ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಸರ್ಕಾರಿ ನಿವಾಸವನ್ನು ಅವರು ಖಾಲಿ ಮಾಡಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಪುನಃ ಅವರು ಸಚಿವರಾದರು. ಕೆಲವೇ ದಿನಗಳಲ್ಲಿ ಸಚಿವ ಸ್ಥಾನದಿಂದ ಕೈಬಿಡಲಾಯಿತು. ಆದರೆ, ಸರ್ಕಾರಿ ಬಂಗಲೆಯಲ್ಲಿಯೇ ಅವರು ಮುಂದುವರೆದಿದ್ದಾರೆ.

ನಿಯಮ ಹೇಳುವುದೇನು?

ನಿಯಮ ಹೇಳುವುದೇನು?

ಕಾನೂನಿನ ಪ್ರಕಾರ ಯಾವುದೇ ಅಧಿಕಾರ ಇಲ್ಲದಿದ್ದರೆ 60 ದಿನದಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಮನೆಯನ್ನು ಖಾಲಿ ಮಾಡದಿದ್ದರೆ ಆ ಪ್ರದೇಶದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅವರು ಬಾಡಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ಲೋಕೋಪಯೋಗಿ ಇಲಾಖೆ

ಲೋಕೋಪಯೋಗಿ ಇಲಾಖೆ

ಸರ್ಕಾರಿ ಬಂಗಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಂಚಿಕೆ ಮಾಡುತ್ತದೆ. ಸರ್ಕಾರಿ ಬಂಗಲೆಯನ್ನು ಅಧಿಕಾರ ಇಲ್ಲದಿದ್ದರೂ ಉಪಯೋಗ ಮಾಡುತ್ತಿದ್ದರೆ ಲೋಕೋಪಯೋಗಿ ಇಲಾಖೆ ಅದಕ್ಕೆ ಬಾಡಿಗೆ ನಿಗದಿ ಮಾಡುತ್ತದೆ. ಆ ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ.

4 ರಿಂದ 5 ಲಕ್ಷ ಬಾಡಿಗೆ

4 ರಿಂದ 5 ಲಕ್ಷ ಬಾಡಿಗೆ

ಬೆಂಗಳೂರಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‌ನಲ್ಲಿನ ನಂ.5ನೇ ನಿವಾಸವನ್ನು ರಮೇಶ್ ಜಾರಕಿಹೊಳಿ ಉಪಯೋಗಿಸುತ್ತಿದ್ದು, ಈ ಪ್ರದೇಶದಲ್ಲಿ ಮಾರುಕಟ್ಟೆ ದರದ ಅನ್ವಯ ಪ್ರತಿ ತಿಂಗಳ ಬಾಡಿಗೆ 4 ರಿಂದ 5 ಲಕ್ಷವಾಗುತ್ತದೆ.

English summary
Former minister and disqualified MLA Ramesh Jarkiholi not vacate government quarters. He is using No 5 quarters one of the Seven Ministers Quarters on Golf Course road since 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X