ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀ ಮೇಲೆ ರಮೇಶ್‌ ಜಾರಕಿಹೊಳಿಗೆ ಯಾಕಿಷ್ಟು ಕೋಪ: ಕಾರಣ ಇಲ್ಲಿದೆ

|
Google Oneindia Kannada News

ಬೆಂಗಳೂರು, ನವೆಂಬರ್ 17: ಲಕ್ಷ್ಮೀ ಮೇಲೆ ತಮಗೇಕೆ ಷ್ಟು ಸಿಟ್ಟು ಎನ್ನುವುದನ್ನು ರಮೇಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ.

ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪವೇ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಕೋಪಕ್ಕೆ ಕಾರಣವಾಯಿತೇ? ಇದೆಲ್ಲವನ್ನೂ ರಮೇಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದು ಹೀಗೆ.

ಲಖನ್ V/S ರಮೇಶ್: ಗೋಕಾಕ್ ಚುನಾವಣೆ ಕುತೂಹಲದ ಕಣಲಖನ್ V/S ರಮೇಶ್: ಗೋಕಾಕ್ ಚುನಾವಣೆ ಕುತೂಹಲದ ಕಣ

ಲಕ್ಷ್ಮೀ ಹೆಬ್ಬಾಳ್ಕರ್ ಸೀನಿಯರ್ ಆಧಾಗ ಅವರಿಗೆ ಮಂತ್ರಿ ಸ್ಥಾನವನ್ನೇ ನೀಡಲಿ, ಆಕೆ ಸಚಿವೆಯಾದರೆ ಹೊಟ್ಟೆಕಿಚ್ಚು ಪಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಹಣೆಬರಹದಲ್ಲಿ ಇದ್ದರೆ ಲಕ್ಷ್ಮೀ ಸಚಿವೆಯಾಗಲಿ, ಆದರೆ, ಆಕೆಯನ್ನು ಮುಂದಕ್ಕೆ ತರಲು ಮುಂದಾದವರು ಪಕ್ಷಕ್ಕೆ ದುಡಿದವರ ಬಗ್ಗೆಯೂ ಸ್ವಲ್ಪ ಚಿಂತೆ ಮಾಡಬೇಕಿತ್ತು ಎಂದು ಹೇಳಿದರು.

ಬೆಳಗಾವಿ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪವೇ ಜಗಳಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಡಿಕೆ ಶಿವಕುಮಾರ್ ಕೈಯಲ್ಲಿದೆ , ಹೀಗಾಗಿ ರಾಜ್ಯ ನನ್ನ ಕೈಲಿದೆ ಎಂದು ಲಕ್ಷ್ಮೀ ಭಾವಿಸಿದ್ದರು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನನ್ನ ತಲೆ ಮೇಲೆ ಲಕ್ಷ್ಮೀ ಕೂರಿಸಲು ಡಿಕೆಶಿ ಪ್ರಯತ್ನ

ನನ್ನ ತಲೆ ಮೇಲೆ ಲಕ್ಷ್ಮೀ ಕೂರಿಸಲು ಡಿಕೆಶಿ ಪ್ರಯತ್ನ

ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ತಾವು ಬಂಡಾಯ ಎದ್ದಿದ್ದರಲ್ಲಿ ಬೆಳಗಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಪಾತ್ರವೇನಿತ್ತು ಎಂಬುದನ್ನು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೊರಹಾಕಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಯಾವುದೇ ಸ್ಥಾನವನ್ನು ನೀಡಬಾರದು ಎಂದು ನಾನು ಷರತ್ತು ವಿಧಿಸಿದ್ದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖವೇ ನಾನು ಷರತ್ತು ವಿಧಿಸಿದ್ದೆ ಆದರೂ ಆಕೆಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಎಂದು ಹೇಳಿದರು.

ಲಕ್ಷ್ಮೀ ಪ್ರಭಾವಿಯಾಗಲು ನಾವು ಕಾರಣ

ಲಕ್ಷ್ಮೀ ಪ್ರಭಾವಿಯಾಗಲು ನಾವು ಕಾರಣ

ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ಆಗುವುದಕ್ಕೆ ಡಿಕೆ ಶಿವಕುಮಾರ್ ಮಾತ್ರವಲ್ಲ , ನಾವೂ ಕೂಡ ಕಾರಣರಾಗಿದ್ದೇವೆ. ನಮ್ಮ ನೆರವಿನಿಂದಲೇ ಆಕೆ ರಾಜಕಾರಣದಲ್ಲಿ ಮೇಲೆ ಬಂದರು ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಚಹಾ ಸೇವಿಸಿದ ಸತೀಶ್

ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಚಹಾ ಸೇವಿಸಿದ ಸತೀಶ್

ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಮ್ಮ ತಲೆ ಮೇಲೆ ಕೂರಿಸುವ ಪ್ರಯತ್ನದ ವಿರುದ್ಧ ಸತೀಶ್ ಜಾರಕಿಹೊಳಿ ಯಾವುದೇ ಹೋರಾಟ ಮಾಡಲಿಲ್ಲ. ಅಷ್ಟೇ ಅಲ್ಲ ಖುದ್ದು ಸತೀಶ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಚಹಾ ಕುಡಿಯಲು ಹೋಗತೊಡಗಿದರು. ಹೀಗಾಗಿ ನಾನು ಇಂತಹ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾಯಿತು ಎಂದು ವಿವರಿಸಿದ್ದಾರೆ.

ರಮೇಶ್‌ಗೆ ಚೂರಿ ಹಾಕಿದ್ದು ಅವರ ಅಳಿಯಂದಿರು

ರಮೇಶ್‌ಗೆ ಚೂರಿ ಹಾಕಿದ್ದು ಅವರ ಅಳಿಯಂದಿರು

ರಮೇಶ್‌ಗೆ ಅವರ ಅಳಿಯಂದಿರೇ ಚೂರಿ ಹಾಕಿದ್ದು, ಬೇಕಿದ್ದರೆ ಚೂರಿ ಹಾಕಿದವರು ಯಾರು ಎಂದು ಬೆನ್ನುಮುಟ್ಟಿ ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿಗೆ ತನ್ನ ಸಹೋದರ ರಮೇಶ್‌ಗೆ ತಿರುಗೇಟು ನೀಡಿದ್ದಾರೆ.

English summary
Ramesh jarakiholi has revealed how angry he is on Lakshmi What is the reason behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X