ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಕಿತ್ತಾಟ ಕುರಿತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಹತ್ವದ ಹೇಳಿಕೆ!

|
Google Oneindia Kannada News

ಬೆಂಗಳೂರು, ಜ. 22: ಖಾತೆ ಮರು ಹಂಚಿಕೆ ವಿಚಾರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನಿನ್ನೆ ಇಡೀ ದಿನ ವಲಸೆ ಬಿಜೆಪಿ ಸಚಿವರು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಸಂಪುಟ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ. ಖಾತೆ ಹಂಚಿಕೆ ಅಸಮಾಧಾನ ಕುರಿತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ ಅವರು, ಸಚಿವ ಡಾ. ಸುಧಾಕರ್ ಮತ್ತು ಮುನಿರತ್ನ ಜೊತೆಗೆ ನಾನು ಜೊತೆಗೆ ಮಾತನಾಡ ಬೇಕಾಗಿತ್ತು. ಆದರೆ ಈಗ ಎತ್ತಿನ ಹೊಳೆ ಯೋಜನೆಯ ಕಾರ್ಯಕ್ರಮ ಇದೆ, ಅಲ್ಲಿಗೆ ಹೋಗುತ್ತಿದ್ದೇನೆ. ಸಂಜೆ ಬಂದು ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲವನ್ನು ಸರಿ ಮಾಡುತ್ತಾರೆ. ಖಾತೆ ಹಂಚಿಕೆ ವಿಷಯ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳಿದ್ದಾರೆ. ಜೊತೆಗೆ ವಲಸೆ ಸಚಿವರ ಕುರಿತು ಮಹತ್ವದ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ಅವರು ಕೊಟ್ಟಿದ್ದಾರೆ.

ಮಿತ್ರಮಂಡಳಿ ಕುರಿತು ರಮೇಶ್ ಮಾತು!

ಮಿತ್ರಮಂಡಳಿ ಕುರಿತು ರಮೇಶ್ ಮಾತು!

ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಿತ್ರರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಮೈತ್ರಿ ಸರ್ಕಾರ ಪತನವಾಗಿತ್ತು. ಬಿಜೆಪಿ ಬಂದ ಬಳಿಕವೂ ಎಲ್ಲ 16 ಜನರೂ ಒಗ್ಗಟ್ಟಾಗಿದ್ದರು. ಆದರೆ ದಿನ ಕಳೆದಂತೆ ಆ ಒಗ್ಗಟ್ಟು ಕಡಿಮೆಯಾಗಿದೆ ಎಂಬುದು ರಮೇಶ್ ಜಾರಕಿಹೊಳಿ ಅವರ ಮಾತಿನಿಂದ ತಿಳಿದು ಬಂದಿದೆ. ಮಿತ್ರ ಮಂಡಳಿ ಕುರಿತು ಮಾತನಾಡಿರುವ ಅವರು ಹೀಗೆ ಹೇಳಿಕೆ ನೀಡಿದ್ದಾರೆ.


ಮಿತ್ರ ಮಂಡಳಿ, ಅದು ಇದು ಎಲ್ಲಾ ಹಳೆಯ ಕಥೆ, ನಾವು ಎಲ್ಲಾ ಒಟ್ಟಿಗೆ ಇದ್ದೀವೆ, ನಾವೆಲ್ಲರೂ ಬಿಜೆಪಿಯವರು. ಖಾತೆ ಹಂಚಿಕೆ ಅಸಮಾಧಾನ ಕುರಿತು ಇಲ್ಲಿ ತನಕ ನಾನು ಯಡಿಯೂರಪ್ಪ ಅವರೊಂದಿಗೆ ಮಾತನಾಡಿಲ್ಲ, ಅಗತ್ಯ ಬಿದ್ದಲ್ಲಿ ಮಾತನಾಡುತ್ತೇನೆ. ಖಾತೆ ಬದಲಾವಣೆ ಅನಿವಾರ್ಯ ಈಗ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಡಾ. ಸುಧಾಕರ್ ಅಸಮಾಧಾನ

ಡಾ. ಸುಧಾಕರ್ ಅಸಮಾಧಾನ

ಖಾತೆ ಹಂಚಿಕೆ ಹಾಗೂ ಮರು ಹಂಚಿಕೆಯಿಂದ ಬಿಜೆಪಿ ಸರ್ಕಾರದಲ್ಲಿ ಅಸಮಾಧನ ಸ್ಪೋಟವಾಗಿದೆ. ತಮ್ಮಿಂದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಕಿತ್ತುಕೊಂಡಿದ್ದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ನಿನ್ನೆ (ಜ.21) ಬೆಂಗಳೂರಿನಲ್ಲಿದ್ದರೂ ಸಚಿವ ಸಂಪುಟ ಸಭೆಗೆ ಗೈರಾಗುವ ಮೂಲಕ ಸಿಎಂ ಯಡಿಯೂರಪ್ಪ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ತಣ್ಣಗಾಗದ ಮಾಧುಸ್ವಾಮಿ ಕೋಪ

ತಣ್ಣಗಾಗದ ಮಾಧುಸ್ವಾಮಿ ಕೋಪ

ಮತ್ತೊಂದೆಡೆ ಸಣ್ಣ ನೀರಾವರಿ ಇಲಾಖೆ ಹಾಗೂ ಕಾನೂನು ಖಾತೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಗರಂ ಆಗಿದ್ದಾರೆ. ಹೀಗಾಗಿ ಅವರೂ ಕೂಡ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿಲ್ಲ. ಆ ಮೂಲಕ ಸಿಎಂ ಯಡಿಯೂರಪ್ಪ ಅವರ ಮೇಲೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆದರೆ ಮಾಧುಸ್ವಾಮಿ ಅವರನ್ನು ಕರೆದು ಮಾತನಾಡುವ ಗೋಜಿಗೆ ಸಿಎಂ ಯಡಿಯೂರಪ್ಪ ಅವರು ಹೋಗಿಲ್ಲ. ಇದು ತಲುಪುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

Recommended Video

ಬಿಜೆಪಿಯಲ್ಲಿ ಬಿರುಕು !! | Oneindia Kannada
ಯಡಿಯೂರಪ್ಪಗೆ ತಲೆನೋವಾದ ವಲಸೆ-ಮೂಲ

ಯಡಿಯೂರಪ್ಪಗೆ ತಲೆನೋವಾದ ವಲಸೆ-ಮೂಲ

ಸಂಪುಟ ವಿಸ್ತರಣೆ ಬಳಿಕ ಪಕ್ಷದಲ್ಲಿನ ಅಸಮಾಧಾನವನ್ನು ಹೈಕಮಾಂಡ್ ಸಹಾಯದಿಂದ ಸಿಎಂ ಯಡಿಯೂರಪ್ಪ ಅವರು ತಣಿಸಿದ್ದರು. ಆದರೆ ಇದೀಗ ಮತ್ತೆ ವಲಸೆ ಹಾಗೂ ಮೂಲ ಬಿಜೆಪಿ ಸಚಿವರು ಖಾತೆ ಹಂಚಿಕೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ಗರಂ ಆಗಿದ್ದಾರೆ. ಸಂಪುಟ ವಿಸ್ತರಣೆ ಬಳಿಕ ದೂರುಗಳಿದ್ದರೆ ಹೈಕಮಾಂಡ್‌ಗೆ ಕೊಡಿ ಎಂದಿದ್ದ ಯಡಿಯೂರಪ್ಪ ಅವರು ಈಗ ಆ ಮಾತು ಹೇಳುವ ಸ್ಥಿತಿಯಲ್ಲಿಲ್ಲ.

ಜೊತೆಗೆ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಸಚಿವರೂ ಇಲ್ಲ. ಹೀಗಾಗಿ ಖಾತೆ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಖಾತೆ ಕಿತ್ತಾಟ ಹೀಗೆ ಮುಂದುವರೆದರೆ ಅದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲಾಗುತ್ತದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಈ ಅಸಮಾಧಾನವನ್ನು ಹೇಗೆ ತಣಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

English summary
The issue of portfolio re-allocation has created a stir in the state BJP government. Water Resources Minister Ramesh Jarkiholi has responded to the issue of portfolio re-allocation. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X