ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗ ಪಡೆದುಕೊಂಡ ಜಾರಕಿಹೊಳಿ 'ಸಿಡಿ' ಪೊಲೀಸ್ ತನಿಖೆ: ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು!

|
Google Oneindia Kannada News

ಬೆಂಗಳೂರು, ಮಾರ್ಚ್ 12: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ರಾಜ್ಯ ಸರಕಾರ ಈಗಾಗಲೇ ವಿಶೇಷ ತನಿಖಾ ದಳದ (ಎಸ್‌ಐಟಿ) ಸುಪರ್ದಿಗೆ ವಹಿಸಿದೆ. ತನಿಖೆ ವೇಗವನ್ನು ಪಡೆದುಕೊಂಡಿದ್ದು ಖಡಕ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಐಟಿ ರಚನೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕೂಡಾ ಚುರುಕಾಗಿದೆ.

ರಮೇಶ್ ಜಾರಕಿಹೊಳಿ 'ಸಿಡಿ' ಬಿಡುಗಡೆ ಐವರು ಎಸ್‌ಐಟಿ ವಶಕ್ಕೆ; ಮುಂದಿನ ತನಿಖೆ ಹೇಗೆ ನಡೆಯಲಿದೆ?ರಮೇಶ್ ಜಾರಕಿಹೊಳಿ 'ಸಿಡಿ' ಬಿಡುಗಡೆ ಐವರು ಎಸ್‌ಐಟಿ ವಶಕ್ಕೆ; ಮುಂದಿನ ತನಿಖೆ ಹೇಗೆ ನಡೆಯಲಿದೆ?

ಕೆಪಿಸಿಸಿ ಅಧ್ಯಕ್ಷರೇ ಹೇಳುವ ಪ್ರಕಾರ ಎಸ್‌ಐಟಿ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೂಡಾ ಇದೆ. ಪೊಲೀಸ್ ಮೂಲಗಳ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿ ಯಾವುದೇ ಎಫ್‌ಐಆರ್ ದಾಖಲಿಸದೇ ಇರಲು ನಿರ್ಧರಿಸಲಾಗಿದೆ.

 ರಮೇಶ್ ಜಾರಕಿಹೊಳಿ 'ಸಿಡಿ' ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ! ರಮೇಶ್ ಜಾರಕಿಹೊಳಿ 'ಸಿಡಿ' ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ!

ಆದರೆ, ಸಂಶಯ ಬಂದವರನ್ನೆಲ್ಲಾ ಅರೆಸ್ಟ್ ಮಾಡಲು ಎಸ್‌ಐಟಿ ನಿರ್ಧರಿಸಿದೆ. ಈ ವಿಚಾರದಲ್ಲಿ ಈಗಾಗಲೇ ಸುದೀರ್ಘವಾಗಿ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತ್ತಷ್ಟು ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

 ಬಿಜೆಪಿಯನ್ನು ದೂರ ಇಡಬೇಕು ಎನ್ನುವುದು ನಮ್ಮ ಉದ್ದೇಶ

ಬಿಜೆಪಿಯನ್ನು ದೂರ ಇಡಬೇಕು ಎನ್ನುವುದು ನಮ್ಮ ಉದ್ದೇಶ

ಡಿಕೆಶಿ ಹೇಳಿದ್ದು ಹೀಗೆ, "ದೇಶದಲ್ಲಿ ಬಿಜೆಪಿಯನ್ನು ದೂರ ಇಡಬೇಕು ಎನ್ನುವುದು ನಮ್ಮ ಉದ್ದೇಶ. ಎಸ್‌ಐಟಿ ರಚನೆ ಮಾಡಲಿ, ಅದಕ್ಕೆ ನಮ್ಮದೇನೂ ತಕರಾರು ಇಲ್ಲ, ಏನೋ ಲೆಟೆರ್ ಕೊಟ್ಟಿದ್ದಾರಂತೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ನಮಗಿಲ್ಲ. ಆಂತರಿಕವಾಗಿ ನಾವು ಪಾರ್ಟಿಯ ಮುಖಂಡರ ಬಳಿ ಚರ್ಚಿಸುತ್ತೇವೆ"ಎಮ್ದು ಡಿಕೆಶಿ ಹೇಳಿದರು.

 ಮುಖಂಡರು, ಲೀಗಲ್ ಟೀಂ ಜೊತೆ ಮಾತುಕತೆ ನಡೆಸುತ್ತೇವೆ

ಮುಖಂಡರು, ಲೀಗಲ್ ಟೀಂ ಜೊತೆ ಮಾತುಕತೆ ನಡೆಸುತ್ತೇವೆ

"ನಮ್ಮ ಪಕ್ಷದ ಮುಖಂಡರು, ಲೀಗಲ್ ಟೀಂ ಜೊತೆ ಮಾತುಕತೆ ನಡೆಸುತ್ತೇವೆ, ನಮ್ಮ ಪಕ್ಷದವರ ಕೆಲವರ ಹೆಸರು ಪಟ್ಟಿಯಲ್ಲಿದೆ ಎನ್ನುವ ವಿಚಾರ ಗೊತ್ತಾಗಿದೆ. ವಿಚಾರಣೆ ಯಾವ ದಾರಿಯಲ್ಲಿ ಸಾಗುತ್ತದೆ, ಇದರ ಸತ್ಯಾಸತ್ಯತೆ ಏನು ಎನ್ನುವುದನ್ನು ತಿಳಿದು ಮುಂದೆ ಪ್ರತಿಕ್ರಿಯಿಸುವೆ"ಎಂದು ಡಿಕೆಶಿ ಹೇಳಿದರು.

 ಯಾರನ್ನೋ ಕೂರಿಸಿ, ಅದರಲ್ಲಿ ನನ್ನ ಮುಖ ಇಟ್ಟುಬಿಟ್ಟು ವಾಯ್ಸ್ ರೆಕಾರ್ಡ್

ಯಾರನ್ನೋ ಕೂರಿಸಿ, ಅದರಲ್ಲಿ ನನ್ನ ಮುಖ ಇಟ್ಟುಬಿಟ್ಟು ವಾಯ್ಸ್ ರೆಕಾರ್ಡ್

"ಯಾರನ್ನೋ ಕೂರಿಸಿಬಿಟ್ಟು, ಅದರಲ್ಲಿ ನನ್ನ ಮುಖ ಇಟ್ಟುಬಿಟ್ಟು ವಾಯ್ಸ್ ರೆಕಾರ್ಡ್ ಮಾಡಿ ವಿಡಿಯೋ ಹರಿಬಿಟ್ಟ ಎಷ್ಟೋ ಉದಾಹರಣೆಗಳಿವೆ. ಅದನ್ನೆಲ್ಲಾ ಪೊಲೀಸರು ನೋಡಿಕೊಳ್ಳುತ್ತಾರೆ, ಅವರು ಮಾಡುತ್ತಾರೆ, ನಾವು ಮಾಡಬೇಕಾಗುತ್ತದೆ"ಎಂದು ಡಿಕೆಶಿ ಅಭಿಪ್ರಾಯ ಪಟ್ಟರು.

Recommended Video

Ramesh Jarkiholi ಏನು ಅಂಥ ನನಿಗೆ ಚೆನ್ನಾಗೇ ಗೊತ್ತು?? | D K Shivakumar | Oneindia Kannada
 ಕಾಂಗ್ರೆಸ್ ನಾಯಕರ ಕೆಲವು ಲೀಡರ್ ಹೆಸರನ್ನು ತೆಗೆದುಕೊಂಡಿದ್ದಾರೆ

ಕಾಂಗ್ರೆಸ್ ನಾಯಕರ ಕೆಲವು ಲೀಡರ್ ಹೆಸರನ್ನು ತೆಗೆದುಕೊಂಡಿದ್ದಾರೆ

"ಈಗ ಈ ವಿಚಾರ ಪಬ್ಲಿಕ್ ಆಗಿದೆ, ಜೊತೆಗೆ ಕಾಂಗ್ರೆಸ್ ನಾಯಕರ ಕೆಲವು ಹೆಸರನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ, ವಿಚಾರಣೆ ಆರಂಭವಾಗಿರುವುದರಿಂದ ಹೆಚ್ಚು ಈ ಬಗ್ಗೆ ಮಾತನಾಡುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

English summary
Ramesh Jarkiholi CD Row, SIT Started Enquiry, Some Of The Congress Leaders Name In The List, As Per KPCC Chief D.K.Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X