ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿ ಪ್ರಕರಣ; ಯುವತಿ 3ನೇ ವಿಡಿಯೋ ಬಿಡುಗಡೆ, ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 26; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ 3ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. ಮಾಜಿ ಸಚಿವರ ವಿರುದ್ಧ ವಕೀಲರ ಮೂಲಕ ದೂರು ದಾಖಲು ಮಾಡುವುದಾಗಿ ಹೇಳಿದ್ದಾಳೆ.

Recommended Video

ನಾಳೆ ಇಂದ ನನ್ನ ಆಟ ಶುರು ಎಂದ ರಮೇಶ್ ಜಾರಕಿಹೊಳಿ | Oneindia Kannada

ಶುಕ್ರವಾರ ಅಜ್ಞಾತ ಸ್ಥಳದಿಂದಲೇ ಯುವತಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಗುರುವಾರ 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಯುವತಿ, "ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ನನಗೆ ತಂದೆ-ತಾಯಿಯ ರಕ್ಷಣೆ ಮುಖ್ಯ" ಎಂದು ಹೇಳಿದ್ದಳು.

2ನೇ ವಿಡಿಯೋದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ಳಾ ಸಿಡಿ ಗರ್ಲ್ ! 2ನೇ ವಿಡಿಯೋದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ಳಾ ಸಿಡಿ ಗರ್ಲ್ !

Ramesh Jarkiholi CD Case Young Woman Release 3rd Video

"ವಕೀಲ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುವೆ" ಎಂದು 3ನೇ ವಿಡಿಯೋದಲ್ಲಿ ಯುವತಿ ಹೇಳಿದ್ದಾಳೆ. ಇದರಿಂದಾಗಿ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆಯುವ ನಿರೀಕ್ಷೆ ಇದೆ.

"ಕರ್ನಾಟಕದ ಜನತೆ ತಂದೆ-ತಾಯಿ ಆಶೀರ್ವಾದದಿಂದ, ಎಲ್ಲಾ ಪಕ್ಷದ ನಾಯಕರಿಂದ, ಎಲ್ಲಾ ಸಂಘಟನೆಗಳ ನಾಯಕರು ತುಂಬಾ ಬೆಂಬಲ ಕೊಡುತ್ತಿದ್ದಾರೆ" ಎಂದು ಯವತಿ ಹೇಳಿದ್ದಾಳೆ.

ಸಿಡಿ ಪ್ರಕರಣ; ಸಂತ್ರಸ್ತ ಯುವತಿ 2ನೇ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ ಸಿಡಿ ಪ್ರಕರಣ; ಸಂತ್ರಸ್ತ ಯುವತಿ 2ನೇ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ

"24 ದಿನದಿಂದ ನಾನು ಜೀವ ಬೆದರಿಕೆಯಿಂದ, ಭಯ ಭಯದಲ್ಲೇ ಬದುಕುತ್ತಿದ್ದೆ. ಇವತ್ ನನಗೆ ಎಲ್ಲೋ ಒಂದು ಕಡೆ ಧೈರ್ಯ ಬಂದಿದೆ. ನನ್ನನ್ನು ಬೆಂಬಲಿಸುತ್ತೀರಿ ಎಂಬ ಕಾರಣಕ್ಕೆ ನಾನು ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ" ಎಂದು ಹೇಳಿಕೆ ನೀಡಿದ್ದಾಳೆ.

ಸಿಡಿ ಸಂತ್ರಸ್ಥ ಯುವತಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ: ಮಾಜಿ ಸ್ಪೀಕರ್ ರಮೇಶ್ ಕುಮಾರ್ಸಿಡಿ ಸಂತ್ರಸ್ಥ ಯುವತಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಮಾಧ್ಯಮಗಳ ಜೊತೆ ಮಾತನಾಡಿದ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಅವರು, "ಇಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಎರಡೂವರೆ ಪುಟಗಳ ದೂರು ನೀಡುತ್ತೇನೆ" ಎಂದು ಹೇಳಿದ್ದಾರೆ.

English summary
The young woman who allegedly featured in a video CD with Ramesh Jarkiholi release 3rd video. In a video she said that she will file complaint against Ramesh Jarkiholi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X