ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂ ಮೊರೆ

|
Google Oneindia Kannada News

ಬೆಂಗಳೂರು, ಫೆ. 11: ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಎಸ್ಐಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾಳೆ.

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ದಾಖಲಿಸಿದ್ದ ಪ್ರಕರಣದಲ್ಲಿ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿತ್ತು. ರಮೇಶ್ ಜಾರಕಿಹೊಳಿ ಮೇಲಿನ ಅತ್ಯಾಚಾರ, ಕೆಲಸದ ಅಮಿಷೆ ತೋರಿಸಿ ಲೈಂಗಿಕ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ಇತ್ತೀಚೆಗೆ ಬಿ ವರದಿಯನ್ನು ಸಲ್ಲಿಸಿತ್ತು.

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಅತ್ಯಾಚಾರ ಕೇಸಿನಲ್ಲಿ ಬಿ ವರದಿ ಸಲ್ಲಿಸಿದ ಎಸ್ಐಟಿರಮೇಶ್ ಜಾರಕಿಹೊಳಿ ಸಿಡಿ ಕೇಸ್: ಅತ್ಯಾಚಾರ ಕೇಸಿನಲ್ಲಿ ಬಿ ವರದಿ ಸಲ್ಲಿಸಿದ ಎಸ್ಐಟಿ

ಇದೀಗ ಸಂತ್ರಸ್ತ ಯುವತಿ ಪರ ವಕೀಲರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್ಐಟಿ ರಚನೆ ಕಾನೂನು ಬಾಹಿರ. ಎಸ್ಐಟಿ ರಚನೆ ಸರಿಯಿಲ್ಲ. ಸರ್ಕಾರ ಸ್ವಯಂ ಪ್ರೇರಿತವಾಗಿ ಎಸ್ಐಟಿ ರಚನೆ ಮಾಡಿದೆ ಎಂದು ಸಂತ್ರಸ್ತ ಯುವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

Ramesh Jarkiholi CD Case: Victim Appealed to Supreme Court Questioning High Court Order

ಎಸ್ಐಟಿ ರಚನೆ ಕಾನೂನು ಬದ್ಧವಲ್ಲ. ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಿಚಾರಣೆ ನಡೆಸುವುದು ಎಷ್ಟು ಸರಿ. ನನಗೆ ಈ ವರದಿ ಮೇಲೆ ನಂಬಿಕೆ ಇಲ್ಲ ಎಂಬುದು ಸಂತ್ರಸ್ತ ಯುವತಿಯ ವಾದ.

ಜಾರಕಿಹೊಳಿ ಸಿಡಿ ಹಗರಣ: ನಗರ ಪೊಲೀಸ್ ಆಯುಕ್ತರ ವಿರುದ್ಧದ ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್ಜಾರಕಿಹೊಳಿ ಸಿಡಿ ಹಗರಣ: ನಗರ ಪೊಲೀಸ್ ಆಯುಕ್ತರ ವಿರುದ್ಧದ ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್

ಎಸ್ಐಟಿ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಕಾರಣ ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. ಒಂದಡೆಗೆ ಸುಪ್ರೀಂನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗಬೇಕು. ಒಂದು ವೇಳೆ ಎಸ್ಐಟಿ ರಚನೆ ಸರಿಯಿಲ್ಲ ಎಂದು ಅರ್ಜಿದಾರಳ ಮನವಿಗೆ ಜಯ ಸಿಕ್ಕರೆ ಮತ್ತೆ ಸಿಡಿ ಪ್ರಕರಣ ಮತ್ತೆ ವಿವಾದಕ್ಕೆ ನಾಂದಿ ಹಾಡಲಿದೆ. ಒಂದು ವೇಳೆ ಹೈಕೋರ್ಟ್ ತೀರ್ಪನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ, ಜಾರಕಿಹೊಳಿ ಸಚಿವರಾಗುವ ಹಾದಿ ಸುಗಮವಾಗಲಿದೆ.

Recommended Video

ಹಿಜಾಬ್ ವಿವಾದ: ಮಧ್ಯಂತರ ಆದೇಶ ಕೊಟ್ಟ ಹೈ ಕೋರ್ಟ್ ಹೇಳಿದ್ದೇನು? | Oneindia Kannada

English summary
Ramesh Jarkiholi CD Case: Victim Girl decided To Move Supreme Court Questioning High Court Order on SIT's B report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X