ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಜಾರಕಿಹೊಳಿ ಸಿಡಿ ಹಗರಣ: ಅಂತಿಮ ತನಿಖಾ ವರದಿ ಸಲ್ಲಿಕೆಗೆ ಎಸ್‌ಐಟಿಗೆ ಹೈಕೋರ್ಟ್ ಅನುಮತಿ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಫೆ.3: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಗುರುವಾರ ಅನುಮತಿ ನೀಡಿದೆ. ಇದರಿಂದಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಒಂದು ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ, ಎಸ್ಐಟಿಗೆ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಿತು

ಅಲ್ಲದೆ, ಅಂತಿಮ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದ್ದು, ಅಷ್ಟರಲ್ಲಿ ಸಂತ್ರಸ್ತ ಯುವತಿ ಪರ ವಕೀಲರು, ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಆದೇಶ ನೀಡಿತು.

ಪಟ್ಟಕ್ಕಾಗಿ 'ಸಾಹುಕಾರ್' ಲಾಬಿ: ಫಡ್ನವೀಸ್ ಭೇಟಿ ಮಾಡಿದ ಜಾರಕಿಹೊಳಿಪಟ್ಟಕ್ಕಾಗಿ 'ಸಾಹುಕಾರ್' ಲಾಬಿ: ಫಡ್ನವೀಸ್ ಭೇಟಿ ಮಾಡಿದ ಜಾರಕಿಹೊಳಿ

"ಕಬ್ಬನ್ ಪಾರ್ಕ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ, ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ತನಿಖಾ ವರದಿ ಸಲ್ಲಿಸಬಹುದು. ಅರ್ಜಿದಾರರು ಎಸ್ಐಟಿ ರಚನೆ ಸಿಂಧುತ್ವನ್ನು ಪ್ರಶ್ನಿಸಿದ್ದಾರೆ, ಆ ಕುರಿತು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಿದೆ.''ಎಂದು ನ್ಯಾಯಾಲಯ ಹೇಳಿದೆ.

ಅಂತಿಮ ವರದಿ ಸಲ್ಲಿಕೆಗೆ ಅವಕಾಶ ಕೋರಿ ಎಸ್ಐಟಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಈ ಆದೇಶವನ್ನು ಮಾಡಿದೆ. ಹಾಗಾಗಿ ಇದೀಗ ಎಸ್ಐಟಿ ವಿಚಾರಣಾ ನ್ಯಾಯಾಲಯದಲ್ಲಿ ಯಾವ ರೀತಿಯ ವರದಿ ಸಲ್ಲಿಸಲ್ಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.

Ramesh Jarkiholi CD Case: Karnataka HC permits SIT to submit final report to magistrate court

ಎಸ್ಐಟಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ, ಬಾಧಿತ ಯುವತಿಯ ದೂರಿನಂತೆಯೇ ಎಫ್ಐಆರ್ ದಾಖಲಾಗಿತ್ತು, ಕ್ರೈಮ್ ಸಂಖ್ಯೆ 30/21ಕ್ಕೆ ಪ್ರತ್ಯೇಕ ತನಿಖಾಧಿಕಾರಿಯಾಗಿ ಎಸಿಪಿ ಎಂ.ಸಿ. ಕವಿತಾ ನೇಮಕವಾಗಿತ್ತು, ಅವರು ಸಮಗ್ರ ತನಿಖೆ ನಡೆಸಿ ಅಂತಿಮ ವರದಿ ಸಿದ್ಧಪಡಿಸಿದ್ದಾರೆ, ಅದನ್ನು ಎಸ್ ಐಟಿ ಮುಖ್ಯಸ್ಥರು ಪರಿಶೀಲಿಸಿದ್ದಾರೆ.

ಹಾಗಾಗಿ ಯುವತಿ ದೂರಿಗೆ ಸಂಬಂಧಿಸಿದ ತನಿಖೆ ಮುಕ್ತಾಯವಾಗಿದೆ. ಆದ್ದರಿಂದ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ಕೋರುತ್ತಿದ್ದೇವೆ. ಯುವತಿಯ ತಂದೆ ಸಲ್ಲಿಸಿದ್ದ ಪ್ರಕರಣದ ಸಂಖ್ಯೆ 61ರಲ್ಲೂ ತನಿಖೆ ಮುಕ್ತಾಯವಾಗಿದೆ. ಆದರೆ ಅಪರಾಧ ಸಂಖ್ಯೆ 21 ರಲ್ಲಿ ಇನ್ನೂ ತನಿಖೆ ಬಾಕಿ ಇದೆ ಎಂದು ಹೇಳಿದರು.

ಇಂದಿರಾ ಜೈ ಸಿಂಗ್ ಆಕ್ಷೇಪ: ಆದರೆ ಯುವತಿ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಆರೋಪಿ ಮಾಜಿ ಸಚಿವರಿಗೆ ನೆರವು ನೀಡಲು ಸರ್ಕಾರದ ಬದಲು ಪೊಲೀಸ್ ಆಯುಕ್ತರು ಎಸ್ಐಟಿ ರಚಿಸಿದ್ದಾರೆ. ಪೊಲೀಸ್ ಆಯುಕ್ತರಿಗೆ ಎಸ್ಐಟಿ ರಚಿಸುವ ಅಧಿಕಾರವಿಲ್ಲ. ಹೀಗಾಗಿ ಈ ಎಸ್ಐಟಿ ಅಂತಿಮ ವರದಿ ಸಲ್ಲಿಸಬಾರದು ಎಂದು ಆಕ್ಷೇಪ ಎತ್ತಿದರು.

ಅಲ್ಲದೆ ತಮಗೆ ಎಸ್ ಐಟಿ ಮಧ್ಯಂತರ ಅರ್ಜಿಗೆ ತಮಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದರು.


ಅರೆನಗ್ನ ವ್ಯಕ್ತಿ ಕ್ಷಮೆ

ಈ ಮಧ್ಯೆ ಇದೇ ಪ್ರಕರಣದ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಶ್ರೀಧರ್ ಭಟ್ ಎನ್ನುವ ವ್ಯಕ್ತಿ ಬೇಷರತ್ ಕ್ಷಮೆ ಕೋರಿದ್ದಾರೆ.

ಅವರು ಪ್ರಮಾಣಪತ್ರ ಸಲ್ಲಿಸಿ, ತಾವು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ. ಆಗಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ಇನ್ನು ಮುಂದೆ ಇಂತಹ ತಪ್ಪೆಸಗುವುದಿಲ್ಲ ಎಂದು ಕ್ಷಮೆ ಕೋರಿದ್ದಾರೆ.

ಗುರುವಾರ ವಿಚಾರಣೆ ವೇಳೆ ಈ ಬಗ್ಗೆ ದೂರಿದ್ದ ಇಂದಿರಾ ಜೈಸಿಂಗ್ ಅವರನ್ನು ನ್ಯಾಯಪೀಠ, ಆ ವ್ಯಕ್ತಿ ಕ್ಷಮೆ ಕೋರಿದ್ದಾರೆ. ಆ ಪ್ರಕರಣ ಮುಕ್ತಾಯಕ್ಕೆ ನಿಮ್ಮದೇನೂ ಅಭ್ಯಂತರವಿದೆಯೇ ಎಂದು ಕೇಳಿದರು. ಅದಕ್ಕೆ ಜೈಸಿಂಗ್, ಅಭ್ಯಂತರವಿಲ್ಲ, ಮುಕ್ತಾಯಗೊಳಿಸಬಹುದು ಎಂದರು. ನ್ಯಾಯಪೀಠ ಆ ಪ್ರಕರಣವನ್ನು ಸಮಾಪ್ತಿಗೊಳಿಸಲು ಆದೇಶಿಸಿತು.

English summary
Ramesh Jarkiholi CD Case: Karnataka High Court today permitted Special Investigation Team(SIT) to submit final report to magistrate court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X