ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿ ಪ್ರಕರಣ; ಮತ್ತೊಂದು ವಿಡಿಯೋ ಮೂಲಕ ಯುವತಿ ಪ್ರತ್ಯಕ್ಷ

|
Google Oneindia Kannada News

ಬೆಂಗಳೂರು, ಏಪ್ರಿಲ್ 13; ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಪ್ರತ್ಯಕ್ಷಳಾಗಿದ್ದಾಳೆ. ಯುವತಿ ತನ್ನ ಹೇಳಿಕೆಯನ್ನು ಬದಲಿಸಲಿದ್ದಾಳೆ ಎಂಬ ಸುದ್ದಿ ಸೋಮವಾರ ಹಬ್ಬಿತ್ತು.

ಮಂಗಳವಾರ ಬೆಳಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, "ನಾನು ಎಸ್‌ಐಟಿ ಮುಂದೆ ಹೋಗಿದ್ದು ನಿಜ. ಆದರೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಕೆಲವು ದಾಖಲೆಗಳನ್ನು ಕೊಡಗು ಹೋಗಿದ್ದೆ" ಎಂದು ಸ್ಪಷ್ಟನೆ ನೀಡಿದ್ದಾಳೆ.

ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಲೇಡಿ ಹೇಳಿಕೆ ಯುಟರ್ನ್, ಏನಿದರ ಸತ್ಯಾಸತ್ಯತೆ?ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಲೇಡಿ ಹೇಳಿಕೆ ಯುಟರ್ನ್, ಏನಿದರ ಸತ್ಯಾಸತ್ಯತೆ?

"ನನ್ನ ಹೇಳಿಕೆಗಳಿಗೂ ಈಗಲೂ ಬದ್ಧಳಾಗಿದ್ದೇನೆ. ನನ್ನ ಮರು ಹೇಳಿಕೆ ಸುದ್ದಿಗಳೆಲ್ಲ ಸುಳ್ಳು. ನಾನು ಯೂ ಟರ್ನ್‌ ಹೊಡೆದಿಲ್ಲ" ಎಂದು ವಿಡಿಯೋ ಮೂಲಕ ಯುವತಿ ಹೇಳಿಕೆ ನೀಡಿದ್ದಾಳೆ.

Exclusive ಪತ್ರ: ಎಸ್ಐಟಿ ತಂಡದಿಂದಲೇ ಸಿಡಿ ಪ್ರಕರಣದ ಸಾಕ್ಷ್ಯನಾಶ!? Exclusive ಪತ್ರ: ಎಸ್ಐಟಿ ತಂಡದಿಂದಲೇ ಸಿಡಿ ಪ್ರಕರಣದ ಸಾಕ್ಷ್ಯನಾಶ!?

Jarakiholi CD Case

ವಿಚಾರಣೆ ನಡೆಸಿಲ್ಲ; "ನಾನು ನನ್ನ ತಂದೆ, ತಾಯಿ ಜೊತೆ ಮಾತನಾಡಿದ್ದು ನಿಜ. ಎಸ್‌ಐಟಿ ಅವರು ನನ್ನ ತಂದೆ, ತಾಯಿ, ಅಕಾಶ್‌ಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆ ನಡೆಸದೇ ಬಿಟ್ಟಿದ್ದಾರೆ" ಎಂದು ಆರೋಪಿಸಿದ್ದಾಳೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು

"ನಾನು ಎಸ್‌ಐಟಿ ಮುಂದೆ ಕೆಲವು ಸಾಕ್ಷ್ಯಗಳನ್ನು ನೀಡಲು ಹೋಗಿದ್ದೆ. ಆದರೆ, ವಾಪಸ್ ಬಂದು ನೋಡಿದರೆ ಹೇಳಿಕೆ ಬದಲಾಯಿಸಲಿದ್ದೇನೆ ಎಂದು ವರದಿಗಳು ಬರುತ್ತಿವೆ. ನಾನು ಲಿಖಿತವಾಗಿ ಯಾವುದೇ ಸಹಿ ಮಾಡಿ ಹೇಳಿಕೆ ಕೊಟ್ಟಿಲ್ಲ" ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.

Recommended Video

ಲಾಕ್ ಡೌನ್ ಮಾಡದೆ ಸೋಂಕು ನಿಯಂತ್ರಣದ ಬಗ್ಗೆ ಚಿಂತನೆ- ಬಸವರಾಜ ಬೊಮ್ಮಾಯಿ | Oneindia Kannada

"ನನ್ನನ್ನು ಮತ್ತು ನನಗೆ ಸಂಬಂಧಿಸಿದವರನ್ನು ಎಸ್ಐಟಿ ವಿಚಾರಣೆ ನಡೆಸಿದಂತೆ ಆರೋಪಿ ರಮೇಶ್ ಜಾರಕಿಹೊಳಿ ಮತ್ತು ಅವರಿಗೆ ಸಂಬಂಧಿಸಿದವರನ್ನು ವಿಚಾರಣೆ ನಡೆಸಬೇಕು ಎಂದು ಕೇಳಿಕೊಳ್ಳುತ್ತೇನೆ" ಎಂದು ಯುವತಿ ಹೇಳಿದ್ದಾಳೆ.

English summary
Another twist to former minister and BJP leader Ramesh Jarakiholi CD case. Victim women released new video on April 13, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X