• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋಕರ್ಣದಲ್ಲಿ ರಮೇಶ್ ಅರವಿಂದರ ‘ಬಟರ್ ಫ್ಲೈ’!

By ಡಿ.ಪಿ.ನಾಯ್ಕ, ಕಾರವಾರ
|

ಕಾರವಾರ, ಅಕ್ಟೋಬರ್ 05 : ಬಹುಭಾಷಾ ನಟ, ನಿರ್ದೇಶಕ ರಮೇಶ ಅರವಿಂದರ 'ಬಟರ್ ಫ್ಲೈ’ ಸಿನಿಮಾದ ಚಿತ್ರೀಕರಣ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಗೋಕರ್ಣದಲ್ಲಿ ನಡೆಯುತ್ತಿದೆ.

ಗೋಕರ್ಣದ ಮುಖ್ಯ ಕಡಲತೀರ, ರಥಬೀದಿ, ಮಹಾಬಲೇಶ್ವರ ದೇವಸ್ಥಾನ, ಹಳೆಯ ಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕೆಲವು ಪಾತ್ರದಲ್ಲಿ ಸ್ಥಳೀಯರನ್ನು ಸಹ ಕಲಾವಿದರನ್ನಾಗಿ ಬಳಸಿಕೊಳ್ಳಲಾಗಿದೆ. ಒಂದು ವಾರಗಳ ಕಾಲ ಚಿತ್ರೀಕರಣ ಗೋಕರ್ಣದಲ್ಲಿಯೇ ಮುಂದುವರಿಯಲಿದೆ.

ನಾಯಕನಾಗಿ ಅರುಣ್, ನಾಯಕಿಯಾಗಿ ಪಾರುಲ್

ನಾಯಕನಾಗಿ ಹೊಸ ಪ್ರತಿಭೆ ಅರುಣ್ ಎಂಬುವರು ನಟಿಸುತ್ತಿದ್ದು, ನಾಯಕಿಯಾಗಿ ಪ್ಯಾರ್ಗೆ ಆಗ್ ಬಿಟ್ಟೈತೆ ಖ್ಯಾತಿಯ ನಟಿ ಪಾರೂಲ್ ಯಾದವ್ ಅವರು ನಟಿಸುತ್ತಿದ್ದಾರೆ. ಕಥೆ, ನಿರ್ದೇಶನದ ಹೊಣೆಯನ್ನು ರಮೇಶ್ ಅರವಿಂದ್ ಅವರು ಹೊತ್ತಿದ್ದು, ಹಿಂದಿಯ 'ಕ್ವೀನ್’ ಸಿನಿಮಾದ ರೀಮೇಕ್ ಆಗಿದೆ.

ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ತಮಿಳಿಗೆ ಕಾಜಲ್ ಅಗರ್ವಾಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ಗೋಕರ್ಣ ಕನ್ನಡ’ದಲ್ಲಿ ಪಾರುಲ್

ನಟಿ ಪಾರೂಲ್ 'ಬಟರ್‌ ಫ್ಲೈ’ನಲ್ಲಿ ಗೋಕರ್ಣದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಗೋಕರ್ಣದಲ್ಲಿ ಪ್ರಚಲಿತದಲ್ಲಿರುವ ಸ್ಥಳೀಯ ಕನ್ನಡವನ್ನೇ ಅವರು ಸಿನಿಮಾದಲ್ಲಿ ಬಳಸಿದ್ದಾರೆ. ಅದಕ್ಕಾಗಿ ಸಖತ್ ಆಗಿ ಕಷ್ಟಪಟ್ಟು ಗೋಕರ್ಣದ ಕನ್ನಡ ಕಲಿತಿದ್ದಾರಂತೆ ಸಿನಿಮಾ ತಂಡ ಹೇಳುತ್ತಿದೆ.

ಗೋಕರ್ಣದವರನ್ನ ನೋಡಿ ಕಲಿತಿದ್ದಾರಂತೆ

ಪಾರುಲ್ ಎರಡು ದಿನ ಮೊದಲೇ ಗೋಕರ್ಣಕ್ಕೆ ಬಂದಿದ್ದಾರೆ ಅಂತ ಸುದ್ದಿಯಿದೆ. ಗೋಕರ್ಣದ ಭಾಷೆ ಮಾತ್ರವಲ್ಲದೆ ಇಲ್ಲಿನ ವಾತಾವರಣ, ಜನರ ವರ್ತನೆ, ಅವರ ಹಾವಭಾವಗಳನ್ನು ತಿಳಿದುಕೊಳ್ಳೋಕೆ ಗೋಕರ್ಣ ಫುಲ್ ಸುತ್ತಾಡಿದ್ದಾರಂತ ಕೂಡ ಕೆಲವರು ಹೇಳುತ್ತಿದ್ದಾರೆ.

ಇಲ್ಲಿನ ಕಾಲೇಜಿಗೆ ತೆರಳಿ ವಿದ್ಯಾರ್ಥಿನಿಯರು ಹೇಗೆ ಇರ್ತಾರೆ ಅನ್ನೋದನ್ನು ಕೂಡ ಅಧ್ಯಯನ ಮಾಡಿದ್ದಾರಂತೆ ಪಾರುಲ್. ಯಾಕಂದ್ರೆ 'ಬಟರ್‌ ಫ್ಲೈ’ನಲ್ಲಿ ಪಕ್ಕಾ ಗೋಕರ್ಣದ ಹುಡುಗಿಯರಂತೆ ಲಂಗ ಬ್ಲೌಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪಾರುಲ್.

ಕನ್ನಡ ಟ್ಯೂಷನ್‌ ಪಡೆದ ಪಾರುಲ್

ರಮೇಶ್ ಅವರು ಪಾರುಲ್‌ಗೆ ಈಗಾಗಲೇ ಕೆಲವು ದಿನಗಳ ಗೋಕರ್ಣ ಕನ್ನಡ ಕಾರ್ಯಾಗಾರ ನಡೆಸಿದ್ದಾರೆ. ಜತೆಗೆ ಗೋಕರ್ಣ ಮೂಲದ ಮುಂಬೈನಲ್ಲಿ ನೆಲೆಸಿರುವ ಲತಾ ಎಂಬ ಶಿಕ್ಷಕಿಯೊಬ್ಬರಿಂದ ಇಲ್ಲಿನ ಕನ್ನಡದ ಟ್ಯೂಷನ್ ಪಡೆದಿದ್ದಾರಂತೆ.

English summary
Ramesh Aravind's directorial Butterfly Kannada movie shooting is going on in Gokarna, Uttara Kannada. Parul Yadav of Pyarge Aagbittaite is the leading female actor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X